ತಾಲ್ಲೂಕಿನ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಅನುದಾನ ತಂದಿರುವುದು ಸಚಿವ ಬಿ.ಶಿವರಾಂ:ದಾಖಲೆ ಬಿಡುಗಡೆ ಮಾಡಿದ ಕೆಡಿಪಿ ಸದಸ್ಯ ನಂದಿಶ್
ಬೇಲೂರು: ಬೇಲೂರು ತಾಲ್ಲೂಕಿನಾದ್ಯಂತ ಮಲೆನಾಡು ಸೇರಿದಂತೆ ಇನ್ನಿತರೆ ಬಯಲುಸೀಮೆ ಭಾಗಗಳಿಗೆ ಶಾಶ್ವತ ವಿದ್ಯುತ್ ಸಮಸ್ಯೆ ಬಗೆಹರಿಸುವಲ್ಲಿ ಮಾಜಿ ಸಚಿವ ಬಿ.ಶಿವರಾಂ ರವರ ಪಾತ್ರ ಬಹುಮುಖ್ಯವಾಗಿದೆ ಎಂದು ಕೆಡಿಪಿ ಸದಸ್ಯ ನಂದೀಶ್ ಹೇಳಿದರು.
ಪಟ್ಟಣದ ಕರ್ನಾಟಕ ಮಾದ್ಯಮ ಪತ್ರಕರ್ತರ ಸಂಘದ ಕಛೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ಒಂದು ವರ್ಷದಿಂದಲೂ ತಾಲ್ಲೂಕಿನಾದ್ಯಂತ ಮಲೆನಾಡು ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುವುದರಿಂದ ಮಾಜಿ ಸಚಿವ ಬಿ.ಶಿವರಾಂ ರವರು ವಿದ್ಯುತ್ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಸತತ ಎರಡು ವರ್ಷದಿಂದಲೂ ಹೋರಾಟ ಮಾಡುತ್ತಲೆ ಬಂದಿದ್ದಾರೆ.
ಅದರ ಫಲವಾಗಿ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಸಹಕಾರದಿಂದ ತಾಲ್ಲೂಕಿನ ವಿವಿಧ ವಿದ್ಯುತ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸುವ ಸಲುವಾಗಿ ಅನುದಾನ ತರುವಲ್ಲಿ ಬಿ.ಶಿವರಾಂ ಯಶಸ್ವಿಯಾಗಿದ್ದಾರೆ ಎಂದರು.
ಬಿಕ್ಕೋಡು ಎಂಇಎಸ್ ಸ್ಥಾಪನೆಗೆ,4,75,33,925.83ಕೋಟಿ ಹಾಗೂ ಗೆಂಡೇಹಳ್ಳಿ ವಿದ್ಯುತ್ ಸ್ಟೇಷನ್ 08 ಮೆಗಾವ್ಯಾಟ್ ಇರುವುದನ್ನು 20 ಮೆಗಾವ್ಯಾಟ್ ಪೂರೈಕೆ ಗಾಗಿ 12,80,52,999.ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ.ಶಿವರಾಂ ರವರು ಕಳೆದ ಭಾರಿ ಸೋತರೂ ಕೂಡ ತಮಗೆ ಓಟು ಹಾಕಿದ ಮತದಾರರ ಋಣ ತೀರಿಸುವ ಸಲುವಾಗಿ ಇಂತಹ ಯೋಜನೆಯನ್ನು ತಾಲ್ಲೂಕಿಗೆ ತರುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡಿದ್ದಾರೆ.ಆದರೆ ರೈತ ಸಂಘದವರು ಬಿ.ಶಿವರಾಂ ಏನು ಮಾಡಿಲ್ಲಿ ಕೇವಲ ಸುಳ್ಳು ಹೇಳುತ್ತಾರೆ ಎಂದು ಆರೋಪ ಮಾಡಿದ್ದಾರೆ.ಆದರೆ ಅವರು ಸುಳ್ಳು ಹೇಳಿಲ್ಲ.ನನಗೆ ರೈತಸಂಘದವರ ಮೇಲೆ ಗೌರವವಿದೆ.ಗೆಂಡೆಹಳ್ಳಿ 8 ಮೆಗಾವ್ಯಾಟ್ ಇರುವುದನ್ನು 20 ಮೆಗಾವ್ಯಾಟ್ ಗೆ ದಿನದ 24 ಗಂಟೆಗೆ ಅನುಕೂಲವಾಗಲೆಂದು ಅನದಾನ ಮಂಜೂರು ಮಾಡಿಸಿದ್ದಾರೆ.ಹನಿಕೆ,ಹಗರೆ,ಪವರ್ ಸ್ಟೇಷನ್ ಗಳನ್ನು ಮೇಲ್ದರ್ಜೆಗೇರಿಸಲು ಮಹದಾಸ ಇಟ್ಟುಕೊಂಡಿದ್ದಾರೆ.ಆದರೆ ಗುದ್ದಲಿ ಪೂಜೆ ಕ್ಷೇತ್ರದ ಶಾಸಕರು ಮಾಡಬೇಕು.ಆದರೆ ಅನುದಾನ ತಂದಿರುವುದು ಮಾತ್ರ ಬಿ.ಶಿವರಾಂ ರವರು ಎಂದರು.
ಆದರೆ ಕೆಲವರು ಅವಹೇಳನವಾಗಿ ಕೆಲ ವಿರೋದಿಗಳು ಇಲ್ಲಸಲ್ಲದ ಆರೋಪ ಮಾಡಿ ಮಾತನಾಡುವುದು ಸರಿಯಲ್ಲ.ಈ ಕ್ಷೇತ್ರದಲ್ಲಿ ಸೋತಿದ್ದರೂ ಕೂಡ ಸಚಿವರ ಸಹಕಾರದಿಂದ ಅನುದಾನ ತಂದಿದ್ದಾರೆ. ಆದರೆ ಶಾಸಕರು ಕಳೆದ ಭಾರಿ ಬಿಜೆಪಿ ಸರ್ಕಾರವೇ ಇದ್ದರೂ ಯಾವ ಅನುದಾನ ತಂದು ಕೆಲಸ ಮಾಡಿದ್ದಾರಾ.. ಎಂದು ಪ್ರಶ್ನೆ ಮಾಡಿದರು.ಶಿವರಾಂ ರವರು ಕೆಲಸಗಾರರು.ಸೋತಿದ್ದೇನೆ ಎಂದು ಸುಮ್ಮನೆ ಕೂರುವ ವ್ಯಕ್ತಿಯಲ್ಲ.ಯಾರೋ ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕ್ಷೇತ್ರದ ಜನ ಜನರು ಸಹಿಸುವುದಿಲ್ಲ.ಕ್ಷೇತ್ರದ ಜನರಿಗೆ ಗೊತ್ತಿರಲೆಂದು ಅನುದಾನದ ದಾಖಲೆ ಬಿಡುಗಡೆ ಮಾಡುತ್ತಿದ್ದೇವೆ.ಈಗಾಗಲೆ ಟೆಂಡರ್ ಆಗಿದೆ.ಕೆಲಸ ಮಾಡಲು ಶಾಸಕರು ಸಹಕಾರ ನೀಡಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ರಾದ ನಿಶ್ಚಲ್ ಮತ್ತು ಜ್ಯೋತಿ ಇದ್ದರು
