Blog

ಆಕರ್ಷಣೆ ಪಡೆದ ಬೇಲೂರು ಬಜೆಟ್

ಸಾಕಷ್ಟು ಅಡೆತಡೆಗಳ ನಡುವೆ 2026 27 ನೇ ಸಾಲಿನ ಬಜೆಟ್ ಅನ್ನು ಯಶಸ್ವಿಯಾಗಿ ಮಂಡಿಸಿದ ಬೇಲೂರು ಪ್ರಭಾರ  ಅಧ್ಯಕ್ಷರಾದ ಉಷಾ ಸತೀಶ್

ಬೇಲೂರು ಪುರಸಭೆ ವೇಲಾಪುರಿ ಸಭಾಂಗಣದಲ್ಲಿ ಪುರಸಭೆ  ಅಧ್ಯಕ್ಷರಾದ ಉಷಾ ಸತೀಶ್ ರವರ ಅಧ್ಯಕ್ಷತೆಯಲ್ಲಿ 2026-27ನೇ ಬಜೆಟ್ ಮಂಡಿಸಲಾಯಿತು.

98.20 ಲಕ್ಷ ರೂಗಳ ಉಳಿತಾಯ ತೋರಿಸಿದ್ದಾರೆ ಆರಂಭಿಕ ರೂ 9.60 ಕೋಟಿ ರೂ ಸೇರಿದಂತೆ ಒಟ್ಟು 16.57 ಕೋಟಿ ರೂ ಆದಾಯ ನಿರೀಕ್ಷಿಸಿದ್ದು 25.22 ಕೋಟಿ ವೆಚ್ಚ ಮಂಡಿಸಿದ್ದಾರೆ ಬಜೆಟ್ ಮಂಡಿಸಿದ ನಂತರ ಮಾತನಾಡಿದ ಅಧ್ಯಕ್ಷರು ಈ ಬಜೆಟ್ ಮಂಡಿಸಲು ಸಹಕರಿಸಿದ ಎಲ್ಲಾ ಸದಸ್ಯರಿಗೂ ಧನ್ಯವಾದಗಳನ್ನು ತಿಳಿಸಿದರು.

ಬಜೆಟ್ ಮಂಡಿಸುವ ಮುಂಚೆ ಪುರಸಭಾ ಸದಸ್ಯರಾದ ಗಿರೀಶ್ ಮಾತನಾಡಿ ಬೇಲೂರಿನಲ್ಲಿ ಅನದಿಕೃತ ಖಾತೆ ಈ ಸ್ವತ್ತು ಬೇಲೂರು ಪುರಸಭೆಯಿಂದ ಮಾಡಿಕೊಡಲಾಗುತ್ತಿದೆ 11 ಗುಂಟೆ ಜಾಗ ಖಾಸಗಿಯವರಿಗೆ ಈ ಸ್ವತ್ತು ಮಾಡಿ ಅಕ್ರಮ ಎಸೆಗಿದ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು ಆ ಖಾತೆ ರದ್ದುಪಡಿಸಿ ಗಣಪತಿ ದೇವಸ್ಥಾನಕ್ಕೆ ಅವಕಾಶ ಮಾಡಿಕೊಡಬೇಕೆಂದು ಪುರಸಭೆ ಮುಖ್ಯ ಅಧಿಕಾರಿ ಬಸವರಾಜ್ ಶಿಗ್ಗಾವಿ ರವರಿಗೆ ಸೂಚನೆ ನೀಡಿದರು ಮತ್ತು ಬೇಲೂರು ಪುರಸಭೆ ಹೇಳುವವರಿಲ್ಲ ಕೇಳುವರಿಲ್ಲ ಅಂದಹಾಗೆ ಆಗಿದೆ ಉತ್ತಮ ಗುಣಮಟ್ಟ ಇರುವ ರಸ್ತೆಗಳನ್ನು ಅಗೆದು ರಸ್ತೆ ಹಾಕುವ ಕೆಲಸ ಮಾಡುತ್ತಿದ್ದಾರೆ.

ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ರಸ್ತೆ ನಿರ್ಮಾಣವಾಗುತ್ತಿಲ್ಲ ಪುರಸಭಾ ಸದಸ್ಯರ ಗಮನಕ್ಕೂ ಬಾರದೆ ಪುರಸಭೆಯ ಕೆಲಸ ಆಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದರು. ಬೇಲೂರು ಪುರಸಭೆ ಅಧಿಕಾರಿಗಳು ಸಮಯ ಪಾಲನೆ ಮಾಡುತ್ತಿಲ್ಲ ಹನ್ನೆರಡು ಗಂಟೆಗೆ ಕಚೇರಿಗೆ ಬರುತ್ತಿದ್ದು ಅವರಿಗೆ ಸಮಯ ಪಾಲನೆಯ ಪಾಠ ಮಾಡಿದ ಪ್ರಸಂಗವು ನಡೆದಿತ್ತು. ಬೇಲೂರು ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತವೆ ಕಾಮಗಾರಿ ಗುತ್ತಿಗೆದಾರರು ಯುಜಿಡಿ ಅಗಿಯುವುದು ಹಾಗೆ ಬಿಟ್ಟುಬಿಡುವುದು ಮತ್ತು ಕುಡಿಯುವ ನೀರಿನ ಪೈಪ್ ಹಾನಿ ಮಾಡಿ ನಮ್ಮ ನೌಕರರನ್ನು ಸಹಾಯ ಪಡೆದು ದಿನವಿಡೀ ಕೆಲಸ ಮಾಡುವ ಉದ್ದೇಶ ಏನು? ಅವರಿಗೆ ಲಾಭ ಏನಿದೆ ಎಂಬುದು ನನಗೆ ಗೊತ್ತಿಲ್ಲ. ಮತ್ತು ಶ್ರೀ ಚನ್ನಕೇಶವ ಸ್ವಾಮಿ ದೇವಸ್ಥಾನದ ಜಾತ್ರೆಗೆ ಬರುವ ವ್ಯಾಪಾರಿಗಳಿಗೆ ಯಾವುದೇ ರೀತಿಯ ಮೂಲಸೌಕರ್ಯ ನೀಡದೆ ವಂಚಿಸುವುದು ಬೇಡ ಎಂದು ಅಗ್ರಹಿಸಿದ್ದರು. ಪುರಸಭೆಯ ವಾಟರ್ ಮ್ಯಾನ್ ನಾಲ್ಕು ಹುದ್ದೆಗಳು ಬಾಕಿ ಇರುವುದರಿಂದ ಆ ಹುದ್ದೆಗಳಿಗೆ ಬೇರೆಯವರನ್ನು ನೇಮಿಸಬೇಕಾಗಿ ತಿಳಿಸಿದರು.                        

        ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಸದಸ್ಯ ಜಿ ಶಾಂತಕುಮಾರ್ ಈ ಸಭೆ ಬಜೆಟ್ ಪೂರ್ವಭಾವಿ ಸಭೆ ಯ ಅನುಗುಣವಾಗಿ ನಡೆಯುತ್ತಿಲ್ಲ ಪತ್ರಕರ್ತರು ಹಿರಿಯ ಮುಖಂಡರು ಸಾರ್ವಜನಿಕರು ಸೇರಿ ಬಜೆಟ್ ಪೂರ್ವಭಾವಿ ಸಭೆ ಮಾಡುತ್ತೀರಾ ಅದರಲ್ಲಿ ಎಷ್ಟು ಕಾರ್ಯರೂಪವಾಗಿದೆ ಎಂದು ಪ್ರಶ್ನೆ ಮಾಡಿದ್ದರು ಮತ್ತು ಈ ಸಭೆಗೆ ನಾವು ಬರುವ ಅವಶ್ಯಕತೆ ಇರಲಿಲ್ಲ ಬಜೆಟ್ ಸಭೆ ನಡೆದಿಲ್ಲದಿದ್ದರೆ ಪುರಸಭೆಯ ಆಡಳಿತ ವರ್ಗದ ನೌಕರರಿಗೆ ಸಂಬಳ ಕೊಡದಂತೆ ಆಗುತ್ತದೆ ಎಂದು ನಾವು ಈ ಬಜೆಟ್ ಸಭೆಗೆ ಬಂದಿದ್ದೇವೆ ಪುರಸಭಾ ಮುಖ್ಯ ಅಧಿಕಾರಿಗಳಿಗೆ ಜಾತ್ರೆ ಮತ್ತು ಸೋಮವಾರದ ಸಂತೆ ಸುಂಕ ವಸೂಲಾತಿ ಈ ವರ್ಷ ಹಿಂದಿನ ವರ್ಷಕ್ಕಿಂತ ಅತ್ಯಂತ ಕಡಿಮೆ ಮೊತ್ತಕ್ಕೆ ಹೋಗಿರುವುದರಿಂದ ಮುಖ್ಯ ಅಧಿಕಾರಿಗಳು ಮೂರು ಬಾರಿ ಟೆಂಡರ್ ಮಾಡಬೇಕಿತ್ತು, ಆದರೆ ಪುರಸಭೆ ಆದಾಯಕ್ಕೆ ಹೊಡೆತ ಬಿದ್ದರು ಜಾಣ ಮೌನ ವಹಿಸಿರುವ ಉದ್ದೇಶ ಏನು ಎಂದು ಪ್ರಶ್ನಿಸಿದ್ದರು.

ಜಾತ್ರೆ ಸುಂಕ ಟೆಂಡರ್ ರದ್ದುಪಡಿಸಿ  ಸಮಯ ಇರದ ಕಾರಣ ಯಾವುದೇ ರೀತಿಯ ಸುಂಕ ವಸೂಲಿ ಮಾಡದೆ ಅವಕಾಶ ಕಲ್ಪಿಸಬೇಕೆಂದು ಮುಖ್ಯ ಅಧಿಕಾರಿಗಳಿಗೆ ಅಗ್ರಹಿಸಿದ್ದರು.
ಈ ಸಭೆಯಲ್ಲಿ ಸದಸ್ಯರಾದ ಜಿ ಶಾಂತಕುಮಾರ್. ಗಿರೀಶ್.ಮೀನಾಕ್ಷಿ ವೆಂಕಟೇಶ್.
ಫೈಯಸ್.ಸೌಮ್ಯ ಸುಬ್ರಹ್ಮಣ್ಯ. ಉಪಸ್ಥಿತರಿದ್ದರು

Related posts

ನಿಮಗಾಗಿ ವಸತಿ ಲೇ ಔಟ್

Bimba Prakashana

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕ್ಯಾಲೆಂಡರ್ ಬಿಡುಗಡೆ

Bimba Prakashana

ಸಕಲೇಶಪುರದಲ್ಲಿ ಶನಿವಾರ ಉಚಿತ ಆರೋಗ್ಯ ಶಿಬಿರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More