Blog

ಬೆಳ್ಳಾವರದಲ್ಲಿ ಕ್ರಿಕೆಟ್ ಪಂದ್ಯಾಟ

ಟ್ರೋಫಿ ಫೈಟರ್ಸ್  ಬೆಳ್ಳಾವರ ವತಿಯಿಂದ ಶ್ರೇಯಸ್ ಕಪ್ ಕ್ರಿಕೇಟ್ ಪಂದ್ಯಾವಳಿ.

ಆಲೂರು ತಾಲೂಕಿನ ತಾಳೂರು  ಗ್ರಾಮ ಪಂಚಾಯಿತಿಯಲ್ಲಿ ಬರುವಂತಹ  ಬೆಳ್ಳಾವರ ಗ್ರಾಮದಲ್ಲಿ ಟ್ರೋಫಿ ಪೈಟರ್ಸ್ ಬೆಳ್ಳಾವರ  ಇವರಿಂದ ಶ್ರೇಯಸ್ ಕಪ್  ಕ್ರಿಕೇಟ್ ಟೂರ್ನಿ ಮೆಂಟ್ ಅನ್ನು 21-02-2 026ನೇ ಶನಿವಾರ 22-02-2026 ಭಾನುವಾರ ಈ 2 ದಿನ  ಹಮ್ಮಿಕೊಳ್ಳಲಾಗಿತ್ತು.
ಈ ಪಂದ್ಯಾವಳಿಯನ್ನು ಹಾಸನ ಲೋಕಸಭಾ ಸದಸ್ಯರಾದ ಶ್ರೀಯುತ ಶ್ರೇಯಸ್ ಪಟೇಲ್ ರವರ ಹೆಸರಿನಲ್ಲಿ ಟ್ರೋಫಿಯನ್ನು ನಡೆಸಲಾಯಿತು.

ಈ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ 50000/-ಆಕರ್ಷಕ ಟ್ರೋಫಿ ಹಾಗೂ ದ್ವಿತೀಯ ಬಹುಮಾನ 25000/-ಆಕರ್ಷಕ ಟ್ರೋಫಿಯಾಗಿ ಏರ್ಪಡಿಸಲಾಗಿತ್ತು.
ಈ ಶ್ರೇಯಸ್ ಕಪ್ ಪಂದ್ಯಾವಳಿಯ ಉದ್ಘಾಟನೆಯನ್ನು ಲೋಕಸಭಾ ಸದಸ್ಯರಾದ ಶ್ರೀಯುತ ಶ್ರೇಯಸ್ ಪಟೇಲ್ ಹಾಗೂ ಕಾಂಗ್ರೆಸ್ ಮುಖಂಡರಾದ ಮುರಳಿ ಮೋಹನ್ ರವರು ಉದ್ಘಾಟಿಸಿ ಮಾತನಾಡುತ್ತಾ. ಬೆಳ್ಳಾವರ ಗ್ರಾಮದಲ್ಲಿ ಇಂತಹ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವ ಸಂತಸದಾಯಕ ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ ಎಂದು ತಿಳಿದು ಬಂದಿದೆ. ಇದರ ಬಗ್ಗೆ ಗಮನ ಹರಿಸಿ ಪ್ರಾಮಾಣಿಕವಾಗಿ ಸೌಕರ್ಯಗಳನ್ನು ಒದಗಿಸುತ್ತೇನೆ ಎಂದರು.

ಇದೇ ವೇಳೆ ಪ್ರಥಮ ಟ್ರೋಫಿಯನ್ನು ಹಾಸನಾಂಬ ತಂಡ ಹಾಗೂ ದ್ವಿತೀಯ ಬಹುಮಾನ ಆಕರ್ಷಕ  ಟ್ರೋಫಿಯನ್ನು ಬೆಳಮೆ ತಂಡದವರು ಪಡೆದು ಜಯಬೇರಿ ಬಾರಿಸಿದರು.

ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಉಮೇಶ್ ಬೆಳ್ಳಾವರ, ಪೃಥ್ವಿಜಯರಾಮ್, ಲೋಕೇಶ್ ಅಜ್ಜೆನಹಳ್ಳಿ, ಷಡಕ್ಷರಿ, ಮೋಹನ್ ಕುಮಾರ್, ಪರಮೇಶ್ ಜಾನ್ನಾಪುರ, ರಾಮಚಂದ್ರ, ಹರೀಶ್, ಪರಮೇಶ್ ಬೆಳ್ಳಾವರ, ಸತೀಶ್ ನಿಲುವಾಗಿಲು, ಮುಡ್ಲಾಯ್ಯ, ಬಸವಲಿಂಗಪ್ಪ, ರತ್ನಮ್ಮ ಆಟೋ ಮಾಲೀಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ವರದಿ ✒️ರಂಜಿತ್ ಕುಮಾರ್ ಅಂಬುಗ

Related posts

ಲೈಟ್ ಕಂಬಕ್ಕೆ ಡಿಕ್ಕಿ ಆದ ಗೋ ಕಳ್ಳತನ ವಾಹನ

Bimba Prakashana

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana

ಬಾಗೆ ಗ್ರಾಮ ಪಂಚಾಯತ್ ಗ್ರಾಮ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More