Blog

ಕುನಿಗನ ಹಳ್ಳಿ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಗಿರೀಶ್

*ಕುನಿಗನಹಳ್ಳಿ ಪಂಚಾಯಿತಿಯು ರಾಷ್ಟ್ರಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಸಾಗಲಿ: ಪಂಚಾಯಿತಿ ಅಧ್ಯಕ್ಷ ಕೆ ಎಸ್ ಪ್ರಕಾಶ್ ಅಭಿಮತ.*

ಸಕಲೇಶಪುರ ತಾಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯತಿಯು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಕಾರಣಕರ್ತರಾದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ರವರು ನಮ್ಮ ಪಂಚಾಯಿತಿಗೆ ವರ್ಗಾವಣೆಯಾಗಿ ಬಂದದ್ದು ನಮ್ಮ ಸೌಭಾಗ್ಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಕಾಶ್ ರವರು ನುಡಿದರು..

ನೂತನವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ವರ್ಗಾವಣೆ ಮೂಲಕ  ಕುನಿಗನ ಹಳ್ಳಿ ಗ್ರಾಮ ಪಂಚಾಯತ್ ಗೆ ಆಗಮಿಸಿದ ಗಿರೀಶ್ ರವರನ್ನು ತುಂಬು ಹೃದಯದಿಂದ ಸ್ವಾಗತಿಸಿದ ಸಂದರ್ಭದಲ್ಲಿ  ಗಿರೀಶ್ ರವರ ವಿಶೇಷ ಸೇವಾ ಕೈಂಕರ್ಯದಿಂದ ಮುಂದಿನ ದಿನಗಳಲ್ಲಿ  ಕುಣಿಗನಹಳ್ಳಿ ಪಂಚಾಯತಿಯೂ ಸಹ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ನುಡಿದರು.

ಸ್ವಾಗತ ಸ್ವೀಕರಿಸಿ ಮಾತನಾಡಿದ ಗಿರೀಶ್ ರವರು “ಕುನಿಗನಹಳ್ಳಿ ಪಂಚಾಯಿತಿ ಯಾವ ನಿಟ್ಟಿನಲ್ಲಿ ಸಾಗುತ್ತಿದೆ ಎಂಬುದರ ಸ್ಪಷ್ಟ ಅರಿವು ನನಗಿದೆ. ರಾಜ್ಯಕ್ಕೆ ಮಾದರಿಯಾಗಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಪಂಚಾಯತಿಯು ತೆಗೆದುಕೊಂಡ ಕಾರ್ಯ ಪ್ರಶಂಸನೀಯ… ಇದನ್ನು ಇನ್ನಷ್ಟು ಉತ್ತಮ ಪಡಿಸುವ ನಿಟ್ಟಿನಲ್ಲಿ, ಪಂಚಾಯತಿಯ ಸೇವೆಗಳನ್ನು ಒದಗಿಸುವಲ್ಲಿ ಹಾಗೂ ಪಂಚಾಯಿತಿಯ ಮೂಲಕ ಜನರಿಗೆ ರಾಜ್ಯ ಹಂತದ, ರಾಷ್ಟ್ರ ಹಂತದ ಸೇವೆಗಳನ್ನ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಪಡುವೆ, ಅದಕ್ಕೆ ಪಂಚಾಯತಿ ವ್ಯಾಪ್ತಿಯ ಸರ್ವರ ಸಹಕಾರ ಅಗತ್ಯ ಎಂದು ನುಡಿದರು..

ಈ ಸಂದರ್ಭದಲ್ಲಿ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆ ಹೊಂದಿದ ರಘು ರವರು ಉಪಸ್ಥಿತರಿದ್ದರು.. ನೂತನವಾಗಿ ಆಗಮಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಗಿರೀಶ್ ರವರಿಗೆ ಕಾರ್ಯದರ್ಶಿ ರಮೇಶ್ ರವರು, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಂಗಪ್ಪನವರು. ಪಂಚಾಯತಿ ಹಂತದ ಹಲವು ನೌಕರರು ಉಪಸ್ಥಿತರಿದ್ದು ಸ್ವಾಗತ ಕೋರಿದರು..ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಪ್ರಮುಖವಾಗಿ ಹರೀಶ್ ರೈ ಜಮ್ಮನಹಳ್ಳಿ ಹಾಗೂ ನೌಕರರ ಸಂಘದ ಅಧ್ಯಕ್ಷರಾದ ತಮ್ಮಣ್ಣ ಶೆಟ್ಟಿ.. ಇನ್ನಿತರ ಶಿಕ್ಷಕರೆಲ್ಲರೂ ಸಹ ಗಿರೀಶ್ ಅವರಿಗೆ ಶುಭ ಹಾರೈಸಿದರು

Related posts

ಸಕಲೇಶಪುರದಲ್ಲಿ ಗಾಂಜಾ ಮಾರಾಟ – ಇಬ್ಬರನ್ನು ಬಂಧಿಸಿದ ಸಕಲೇಶಪುರ ಪೊಲೀಸರು

Bimba Prakashana

ಸಕಲೇಶಪುರ ಪುರಸಭೆ ವ್ಯಾಪ್ತಿಯ ವಾರ್ಡಲ್ಲಿ ಕಸದ ಸಮಸ್ಯೆ

Bimba Prakashana

ನೀರಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More