Blog

ಪೊಲೀಸ್ ಠಾಣೆ ಸ್ವಚ್ಛತೆ ಮಾಡುವಂತೆ ಆದೇಶ ನೀಡಿದ ನ್ಯಾಯಾಲಯ

ಸಕಲೇಶಪುರದ ಬಾಳೆಗದ್ದೆ ನಿವಾಸಿ ಹಯಾತ್ ಖಾನ್ ರವರು ದಿನಾಂಕ 18/09/25 ರಂದು ಸಕಲೇಶಪುರದ ಹಳೆ ಬಸ್ ನಿಲ್ದಾಣ ಸಮೀಪ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ  ಸಾರ್ವಜನಿಕರಿಗೆ ತೊಂದರೆಯಾಗುವ ರೀತಿ ಅಡ್ಡಾದಿಡ್ಡಿ ಅಂಗಡಿಯನ್ನು ಹಾಕಿಕೊಂಡು ತರಕಾರಿ ಮತ್ತು ಸೊಪ್ಪು ಮಾರಾಟಮಾಡುತ್ತಿದ್ದು ಇದರ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ (K.P.Act) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಸಕಲೇಶಪುರದ ಸಿಜೆಎಂ& ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರಿಪಡಿಸಲಾಗಿದೆ.

ನ್ಯಾಯಾಲಯವು  ದಿನಾಂಕ 19/09/25 ರಂದು ಹಯಾತ್ ಖಾನ್ ಎಂಬ ವ್ಯಕ್ತಿಗೆ ದಂಡದ ರೂಪವಾಗಿ 4 ದಿನಗಳ ಕಾಲ ಪ್ರತಿದಿನ 2 ಗಂಟೆಗಳ ಕಾಲ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಕಸ ಗುಡಿಸುವುದು ಮತ್ತು ಸ್ವಚ್ಚತೆಯನ್ನು ಮಾಡಬೇಕೆಂದು ಆದೇಶಿಸಿರುತ್ತದೆ.

Related posts

ನಾನ್ ವೆಜ್ ಪ್ರಿಯರಿಗೆ ವಿಶೇಷ ಆಫ಼ರ್

Bimba Prakashana

ಸರ್ಕಾರಿ ಮಹಿಳಾ ಅಧಿಕಾರಿಗಳಿಗೆ ಬಾಗಿನ ಸಮರ್ಪಣೆ

Bimba Prakashana

ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿರುವ ಇನ್ ಸ್ಪೇರ್ ಇಂಟರ್ ನ್ಯಾಷನಲ್ ಸ್ಕೂಲ್

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More