ಸಕಲೇಶಪುರದ ಬಳಿ ಕಾಫಿ ತೋಟದಲ್ಲಿ ಈಜಾಟ ಮಾಡಲಿಕ್ಕಾಗಿ ತೆರಳಿದ್ದ ಭರತ್ ಹಾಗೂ ಮಿಥುನ್ ಎಂಬ ಇಬ್ಬರು ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿ ಆಗಿದೆ.
ಸಕಲೇಶಪುರದ ಪ್ರಕಾಶ್ ಎಂಬವರ ತೋಟದಲ್ಲಿ ಇವರು ಕೆರೆಯಲ್ಲಿ ಈಜಾಟ ಮಾಡುತ್ತಿದ್ದಾಗ ನೀರಿನಲ್ಲಿ ಇದ್ದ ಕೆಸರಿನಲ್ಲಿ ಸಿಲುಕಿಕೊಂಡಿದ್ದಾರೆ.
ಬಳಿಕ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ನೀರಲ್ಲಿ ಮುಳುಗಿದವರನ್ನು ಹೊರಕ್ಕೆ ತೆಗೆದರೆಂದು ತಿಳಿದು ಬಂದಿದೆ.
ಪಾಳ್ಯ ಸರಕಾರಿ ಶಾಲಾ ವಿದ್ಯಾರ್ಥಿಗಳಾಗಿದ್ದ ಇವರು ಇಂದು ಬೆಳಿಗ್ಗೆ ಈಜಾಟ ಮಾಡಲು ಹೋಗಿದ್ದರೆಂದು ತಿಳಿದು ಬಂದಿದೆ
previous post
