Blog

ಜೇನು ಪೋಷಕ ಸಂಘಕ್ಕೆ 37 ಲಕ್ಷ ಲಾಭ

ಸಕಲೇಶಪುರ ಜೇನು ಪೋಷಕರ ಸಂಘದ ಮಹಾ ಸಭೆಯು 16.09.2025 ರಂದು  ನಡೆಯಿತು.

ಶ್ರೀಮತಿ ಗಂಗಮ್ಮ  ಶ್ರೀ ಲಕ್ಷ್ಮೇಗೌಡ ಒಕ್ಕಲಿಗ ರ ಸಮುದಾಯ ಭವನದಲ್ಲಿ  ನಡೆದ  ಮಹಾಸಭೆಯಲ್ಲಿ  ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಹೆಚ್.ಸಿ.  ಸುರೇಂದ್ರ ರವರು   ಅಧ್ಯಕ್ಷತೆ ವಹಿಸಿದ್ದರು. ಸಂಘವು ಈ ಬಾರಿ 31 ಲಕ್ಷ 86 ಸಾವಿರ 913 ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷರಾದ ಹೆಚ್ ಎಸ್ ಕೃಷ್ಣೇಗೌಡ ಹಾಜರಿದ್ದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ   ಉದಯ ಕುಮಾರ್ ಸಭಿಕರನ್ನು ಸ್ವಾಗತಿಸಿದರು.

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸತೀಶ್  ಸಂಘದ  ವಾರ್ಷಿಕ  ವರದಿಯನ್ನು ಸಭೆಯಲ್ಲಿ ಮಂಡಿಸಿದರು,

ಸಂಘದ ಮಾಜಿ ಅಧ್ಯಕ್ಷರಾದ ಹೆಚ್ ಸಿ ಸುರೇಂದ್ರ ಹಾಗೂ ಮಾಜಿ ಉಪಾಧ್ಯಕ್ಷರಾದ ಎಸ್ ಬಿ. ಕೃಷ್ಣೇಗೌಡರನ್ನು ಸನ್ಮಾನಿಸಲಾಯಿತು.

ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಶಿಕ್ಷಣ ಪ್ರೋತ್ಸಾಹ ಧನ ನೀಡಲಾಯಿತು.

ಮಾಜಿ ಅಧ್ಯಕ್ಷರಾದ ಸುರೇಂದ್ರ ರವರು ಹಾಲಿ ಅಧ್ಯಕ್ಷರಾದ ಜೈ ಮಾರುತಿ ದೇವರಾಜ್ ಅನಾರೋಗ್ಯದ  ಕಾರಣ  ಅಧ್ಯಕ್ಷರ ಭಾಷಣ ಮಾಡಿದರು.

ಸಂಘದ ನಿರ್ದೇಶಕರಾದ  ಎಂ. ಎಲ್ ಬಸವರಾಜ್  ವಂದನಾರ್ಪಣೆ ಸಲ್ಲಿಸಿದರು,

ಸಭೆಯಲ್ಲಿ  ಉಪಾಧ್ಯಕ್ಷರಾದ ಎಚ್ ಎಸ್. ಕೃಷ್ಣೇಗೌಡ ನಿರ್ದೇಶಕರು ಗಳಾದ ಎಸ್ ಬಿ ಕೃಷ್ಣೇಗೌಡ, ಕೆ ಪಿ ಶಶಿಶೇಖರ್, ಎನ್. ಕೆ. ವಿಕ್ರಮ್, ಹೆಚ್. ಸಿ ಹೇಮಂತ್, ಯು ಎಂ ಜಯರಾಮ್, ಬಿ ಬಿ ಸುಂದರಮ್ಮ,  ಶ್ರೀಮತಿ ಲತಾ ಬಸವರಾಜ್, ಜೆ ಎಸ್. ಈರಯ್ಯ, ವಿ ಆರ್ ನಾಗೇಶ್, ವಸಂತ, ಡಿ ಎಸ್. ಬಾಬು ಸಭೆಯಲ್ಲಿ ಹಾಜರಿದ್ದರು.

Related posts

ಹರಿ ಹಳ್ಳಿ ಶಾಲಾ ವಿದ್ಯಾರ್ಥಿನಿ ಸಾನಿಕ ಜಿಲ್ಲಾ ಮಟ್ಟಕ್ಕೆ

Bimba Prakashana

ಸಕಲೇಶಪುರ ಶಾಲೆಯ ಮುಂಭಾಗ ಮರಳು – ಜಲ್ಲಿ ರಾಶಿ

Bimba Prakashana

ಒಂಟಿ ಕಾಡಾನೆ ದಾಳಿ – ರೈತನಿಗೆ ಗಾಯ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More