Blog

ಆಲೂರುನಲ್ಲಿ ಆರ್ ಎಸ್ ಎಸ್ ಪಥ ಸಂಚಲನ

ಆಲೂರು: ಪಟ್ಟಣದಲ್ಲಿರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶತಮಾನೋತ್ಸವ — 100ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ವೀರಶೈವ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ ತಾಲೂಕಿನ ರಾಜಭೀದಿಗಳಲ್ಲಿ  ಅದ್ದೂರಿ ಮತ್ತು ಆಕರ್ಷಕ ಪಥಸಂಚಲನವನ್ನು ಆಯೋಜಿಸಿತು.

ದೇಶಭಕ್ತಿಯ ನಾದ, ಶಿಸ್ತಿನ ಹೆಜ್ಜೆಗಳು ಮತ್ತು ಸಂಸ್ಕೃತಿಯ ಬಣ್ಣಗಳಿಂದ ತುಂಬಿದ ಈ ಸಂಚಲನವು ಪಟ್ಟಣದೆಲ್ಲೆಡೆ ಜನಮನ ಸೆಳೆಯಿತು.

ಪಥಸಂಚಲನಕ್ಕೆ ಆರ್‌ಎಸ್‌ಎಸ್ ಸಂಘ ಸಂಚಾಲಕರಾದ ಹರೀಶ್ ಅವರು ನೇತೃತ್ವ ವಹಿಸಿದ್ದರು.

ವೀರಶೈವ ಕಲ್ಯಾಣ ಮಂಟಪದಿಂದ ಪ್ರಾರಂಭವಾಗಿ  ಪ್ರಮುಖ ರಸ್ತೆ ಹಾಗೂ ಪಟ್ಟಣದ ನಾನಾ ಬೀದಿಗಳಲ್ಲಿ ಪಥ ಸಂಚಲನ ಸಂಚರಿಸಿತು.

ಮೆರವಣಿಗೆಯ ಮಾರ್ಗವನ್ನು ಭಕ್ತಿಭಾವದಿಂದ ರಂಗೋಲಿ, ತೋರಣ, ಧ್ವಜಗಳು ಮತ್ತು ಹೂವಿನ ಅಲಂಕಾರಗಳಿಂದ ಸಿಂಗಾರಿಸಲಾಗಿತ್ತು. ಎಲ್ಲೆಡೆ ಕೇಶರಿ ಧ್ವಜಗಳು ಹಾರಾಡುತ್ತಾ ದೇಶಭಕ್ತಿಯ ವಾತಾವರಣ ನಿರ್ಮಾಣವಾಯಿತು. ಮಹಿಳೆಯರು ಮತ್ತು ಮಕ್ಕಳು ಮನೆಗಳ ಮುಂಭಾಗ ನಿಂತು ಸ್ವಯಂಸೇವಕರಿಗೆ ಹಾರೈಕೆ ಸಲ್ಲಿಸಿದರು.ಪಥಸಂಚಲನದ ವೇಳೆ ಸ್ವಯಂಸೇವಕರು ನಾದಸಂಗೀತ, ಘೋಷಗಳು ಮತ್ತು ಶಿಸ್ತಿನ ಸೌಂದರ್ಯದಿಂದ ಮೆರವಣಿಗೆಯ ಮಹತ್ವವನ್ನು ಹೆಚ್ಚಿಸಿದರು.

ಸಂಘದ ಧ್ಯೇಯವಾದ “ಸಂಘಟಿತ ಸಮಾಜವೇ ಶ್ರೇಷ್ಠ ರಾಷ್ಟ್ರದ ಆಧಾರ” ಎಂಬ ಸಂದೇಶ ಎಲ್ಲೆಡೆ ಪ್ರತಿಧ್ವನಿಸಿತು.ಮೆರವಣಿಗೆಯಾದ ಹಳೇಬೀಡಿನ ಬೀದಿಗಳಲ್ಲಿ ಸ್ವಯಂಸೇವಕರು ರಾಷ್ಟ್ರದ ಪುಣ್ಯಸ್ಮರಣೆಗಾಗಿ ಪ್ರಮುಖ ರಾಷ್ಟ್ರಭಕ್ತ ನಾಯಕರಾದ ಡಾ. ಕೆ.ಬಿ. ಹೆಡ್ಗೆವಾರ್, ವಿನಾಯಕ ದಾಮೋದರ ಸಾವರ್ಕರ್, ಡಾ. ಬಾಬಾಸಾಹೇಬ ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜ, ಜಗಜ್ಯೋತಿ ಬಸವೇಶ್ವರ, ಸೂಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದ, ಮತ್ತು ಬಾಲ ಗಂಗಾಧರ ತಿಲಕ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಆಲೂರು ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜುನಾಥ್. ಹಿರಿಯ ಮುಖಂಡರಾದ ಮಂಜೇಗೌಡ. ರೇಣುಕ ಪ್ರಸಾದ್ ಸಂಘ ಸಂಸ್ಥೆಯ ಅಧ್ಯಕ್ಷರುಗಳು  ಹಾಗೂ ನೂರಾರು ಸ್ವಯಂಸೇವಕರು ಶ್ವೇತವಸ್ತ್ರ ಧರಿಸಿ, ಕೇರಿ ಧ್ವಜಗಳೊಂದಿಗೆ ಪಥಸಂಚಲನದಲ್ಲಿ ಭಾಗವಹಿಸಿದರು. ಅನೇಕ ನಾಗರಿಕರು, ವಿದ್ಯಾರ್ಥಿಗಳು ಹಾಗೂ ಹಿರಿಯರು ಸಂಚಲನ ವೀಕ್ಷಿಸಲು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು

Related posts

ಗೌರಿ ಗಣೇಶ ಹಬ್ಬದ ಶುಭಾಶಯಗಳು

Bimba Prakashana

ಸಕಲೇಶಪುರದ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳ ಆಡಳಿತ ಮಾಹಿತಿ

Bimba Prakashana

ಹೊಂಕರವಳ್ಳಿ ನಿವಾಸಿ ಆಟೋ ಮಾಲಕ ವಿನು ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More