Blog

ಆಲೂರುನಲ್ಲಿ ಕೆಂಡೋತ್ಸವ

ಆಲೂರು: ಆಲೂರು ತಾಲೂಕಿನ ಕಸಬಾ ಹೋಬಳಿಯ
ಹುಣಸವಳ್ಳಿ ಗ್ರಾಮದಲ್ಲಿ ಜೀರ್ಣೋದ್ದಾರಗೊಂಡ ಶ್ರೀ ಗೋಪಾಲಕೃಷ್ಣಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿ ಕೆಂಡೋತ್ಸವ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಎಚ್‌.ಡಿ. ರೇವಣ್ಣ ಅವರು ಮಾತನಾಡಿ, 1977ರಲ್ಲಿ ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಹುಣಸವಳ್ಳಿ ಗ್ರಾಮಕ್ಕೆ ಈ ದೇವಸ್ಥಾನಗಳು ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಆಶಿಸಿದರು.

ಚೋಳರ ಕಾಲದ ಇತಿಹಾಸ ಹೊಂದಿರುವ ಸುಮಾರು 800 ವರ್ಷಗಳ ಪ್ರಾಚೀನ ಗೋಪಾಲಕೃಷ್ಣಸ್ವಾಮಿ ದೇವಸ್ಥಾನವನ್ನು ಯಾವುದೇ ಸರ್ಕಾರದ ಅನುದಾನವಿಲ್ಲದೆ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಸುಮಾರು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವುದು ಶ್ಲಾಘನೀಯ ಎಂದರು. ಈ ಹಿಂದೆ ವಿಷಯ ತಿಳಿಸಿದ್ದರೆ ಸರ್ಕಾರದಿಂದಲೇ ಅನುದಾನ ಕೊಡಿಸಬಹುದಾಗಿತ್ತು ಎಂದು ಹೇಳಿದರು.

Related posts

ಕುಡಿಯುವ ನೀರಿನ ಸಮಸ್ಯೆ

Bimba Prakashana

ಹತ್ತನೇ ತರಗತಿಯಲ್ಲಿ 606 ಅಂಕ

Bimba Prakashana

ಬಕ್ರೀದ್ ಕುರ್ಬಾನಿಗೆ ಕೂಡಿಟ್ಟಿದ್ದ ನಂದಿ – ರಕ್ಷಣೆ ಕಾರ್ಯಾಚರಣೆ ಮಾಡುವಾಗ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More