Blog

ಹಾನ್ ಬಾಳ್ ಚಿಕ್ಕಿ 5 ನೇ ದಿನದ ವಿಶೇಷ

ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ ಗೆ ದೀಪಾವಳಿ ಚಿಕ್ಕಿ ಹಬ್ಬ – 5 ದಿನದ ವಿಶೇಷತೆ.
ಸ್ಥಳ: ಹಾನ್ ಬಾಳ್ ಚಿಕ್ಕಿ ಫ್ಯಾಕ್ಟರಿ+ ಮಳಿಗೆ,
ಗುಲಗಳಲೆ, ಸಕಲೇಶಪುರ.
ದಿನಾಂಕ: 17-27 ಅಕ್ಟೋಬರ್ 2025.

ವಿಶೇಷ ಆಕರ್ಷಣೆ:
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತ ಮದರಂಗಿ (ಮೆಹಂದಿ).
ಎಲ್ಲ ಉತ್ಪನ್ನಗಳ ಮೇಲೆ 15% ನೇರ ದರ ಕಡಿತ ಮಾರಾಟ.
5 ನೆಯ ದಿನ : ಇಂದು ಫ್ಯಾಕ್ಟರಿ ಉದ್ಯೋಗಿಗಳ ಸಡಗರ.

ದಿನ 5: 21/10/25 ಮಂಗಳವಾರ.

ನಮ್ಮೂರಿನ ಹೆಮ್ಮೆಯ ಬ್ರಾಂಡ್ ಹಾನ್ ಬಾಳ್ ಚಿಕ್ಕಿಯಲ್ಲಿ ಇಂದು ವಿಜೃಂಭಣೆಯಿಂದ ತನ್ನ ವಾರ್ಷಿಕ ದೀಪಾವಳಿ ಹಬ್ಬದ ಪೂಜೆಯನ್ನು ನೆರವೇರಿಸಿತು. ಎಲ್ಲಾ ಉದ್ಯೋಗಿಗಳು ಸಾಂಪ್ರದಾಯಿಕ ಉಡುಗೆಯನ್ನುಟ್ಟು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ವಿಶೇಷ. ನಂತರ ಎಲ್ಲರೂ ಪಟಾಕಿ ಸಿಡಿಸಿ, ಸೆಲ್ಫಿ, ರೀಲ್ ಗಳನ್ನು ಮಾಡಿ ಖುಷಿಪಟ್ಟರು.

ನಿಜವಾಗಿಯೂ ಇಂದು ಹಾನ್ ಬಾಳ್ ಚಿಕ್ಕಿಯ ಯಶಸ್ಸಿನಲ್ಲಿ ಅದರ ನೌಕರರ ತಂಡದ ಪರಿಶ್ರಮ ಮತ್ತು ಕಾರ್ಯಕ್ಷಮತೆ ತುಂಬಾ ಮಹತ್ವದ್ದು. ಸಕಲೇಶಪುರದ  ಸ್ಥಳೀಯ ಪ್ರತಿಭೆಗಳೇ ತುಂಬಿರುವ ಈ ಸಂಸ್ಥೆಯು ತನ್ನ ನೌಕರರ ಕೌಶಲ್ಯದಿಂದ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ  ಮಟ್ಟದ ಬ್ರಾಂಡ್ ಆಗಿ ಹೊರಹೊಮ್ಮಲು ಕಾರಣವಾಗಿದೆ. ಕಾರ್ಪೊರೇಟ್ ಸಂಸ್ಥೆಗಳ ಗುಣಮಟ್ಟದ ಸೇವಾ ಸೌಲಭ್ಯ, ಎಸ್.ಓ.ಪಿ ಗಳನ್ನು, ಕಾರ್ಯ ತಾಂತ್ರಿಕತೆ , ನೈಪುಣ್ಯತೆಯನ್ನು ಯನ್ನು ಗ್ರಾಮೀಣ ಮಟ್ಟದ ನಮ್ಮ ಸಕಲೇಶಪುರದ ಸ್ಥಳೀಯ ಪ್ರತಿಭೆಗಳೇ ಪರಿಣಾಮಕಾರಿಯಾಗಿ ಬಳಸಿಕೊಂಡು ಒಂದು “ಬ್ರಾಂಡೆಡ್” ಕಂಪನಿಯನ್ನು ಹೇಗೆ ಬೆಳೆಸಬಹುದು ಎಂಬುವುದಕ್ಕೆ ಇವರೇ ನಿದರ್ಶನ.

ಇಂದಿನ ದಿನದ ನೌಕರರ ತಂಡದ ಸಡಗರದ ಕೆಲವು ಫೋಟೋಗಳು.

Related posts

ಕರವೇಯಿಂದ ಬಾಂಗ್ಲಾ ವಲಸಿಗರನ್ನು ತೊಲಗಿಸಿ ಕಾರ್ಯಕ್ರಮ

Bimba Prakashana

ಪ್ರವಾಸಿಗರ ಬ್ಯುಸಿ ಸ್ಪಾಟ್ ಆದ ಸಕಲೇಶಪುರ ದೋಣಿಗಾಲ್

Bimba Prakashana

ಜಾತ್ರೆ ಮಹೋತ್ಸವಕ್ಕೆ ಶುಭ ಹಾರೈಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More