Blog

ಕೆಂಚಾoಬಿಕೆ ದೇವಿಯ ಚಿಕ್ಕ ಜಾತ್ರೆ

ಆಲೂರು: ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾಂಬಿಕೆ ದೇವಿಯ ಚಿಕ್ಕ ಜಾತ್ರೆ ಸುಮಾರು 48 ಹಳ್ಳಿಗಳ ಭಕ್ತರೊಂದಿಗೆ ಕೆಂಚಾಂಬ ದೇವಸ್ಥಾನದ ಆವರಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಶನಿವಾರ ಸಂಜೆ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಿಗೆ ಸಪ್ತಮಾತೃಕಾ ಅಲಂಕಾರದೊಂದಿಗೆ ಜಾತ್ರೆ ಪ್ರಾರಂಭವಾಯಿತು. ದೇವಾಲಯದ ಆವರಣದಲ್ಲಿ ಭಕ್ತರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.

ಭಾನುವಾರ ಬೆಳಗ್ಗೆ ಮೂಲ ದೇವಸ್ಥಾನದಿಂದ ಕೆಂಚಾಂಬಿಕೆ ಉತ್ಸವ ಮೂರ್ತಿಯೊಂದಿಗೆ, ಬೆಳ್ಳಿ ಒಡವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರೆ ಮೈದಾನದಲ್ಲಿರುವ ಶ್ರೀ ಕೆಂಚಾಂಬ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತರಲಾಯಿತು. ಸುಮಾರು ಎರಡು ಗಂಟೆ ನಡೆಯುವ ಉತ್ಸವದ ಸಂದರ್ಭದಲ್ಲಿ ಗ್ರಾಮದ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ ತೆಂಗಿನಕಾಯಿ ಈಡುಗಾಯಿ ಹಾಕಿ ಭಕ್ತಿ ಮೆರೆದರು.

ಸುಮಾರು 10 ರ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿದ ಕೆಂಚಾಂಬಿಕೆ ಮೆರವಣಿಗೆ ದೇವಿಯನ್ನು ಸಮೀಪದ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ಹುತ್ತದ ರೂಪದಲ್ಲಿರುವ ಕೆಂಚಾಂಬ ದೇವಿಗೆ ಒಡವೆಗಳನ್ನು ಧರಿಸಿ ಪೂಜಾ ವಿಧಿ ವಿಧಾನಗಳು ಪಾರಂಭಿಸಿ, ಮದ್ಯಾಹ್ನ 2 ಗಂಟೆಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ನಂತರ ದೇವಸ್ಥಾನದ ಸುತ ಬಲಿ ಅನ್ನ ಹಾಕಿದರು.


ನಂತರ ಕೆಂಚಾಂಬ ದೇವಿಯ ಬೆಳ್ಳಿ ಪಾದದೊಂದಿಗೆ, ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಉತ್ಸವ ಮೂರ್ತಿ ಬಳಿಗೆ ಬಂದು, ದೇವಸ್ಥಾನದ ಬಳಿಗೆ ಉತ್ಸವ ಮೂರ್ತಿಯನ್ನು ಕರೆತಂದು ದೇವಸ್ಥಾನ ಪ್ರದಕ್ಷಿಣೆ ಮಾಡಿದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಉತ್ಸವ ಮೂರ್ತಿ ಮೇಲೆ ಕರಿಮೆಣಸನ್ನು ಎಸೆದು ಹರಕೆ ಸಲ್ಲಿಸಿದರು.

ನಂತರ ದೇವಾಲಯದ ಮುಂಭಾಗದಲ್ಲಿ ಮದ್ಯಾಹ್ನ 2.30 ಕ್ಕೆ ಕೆಂಡೋತ್ಸವ ನಡೆಸಲಾಯಿತು. ಸ್ಥಳದಲ್ಲಿದ್ದ ಭಕ್ತರೆಲ್ಲರೂ ಕೆಂಡ ಹಾಯ್ದು ಪುನೀತರಾದರು. ರಾತ್ರಿ ಒಂದು ಗಂಟೆವರೆಗೆ ಭಕ್ತರಿಗೆ ದೇವಿ ಪಾದ ಮುಟ್ಟಲು ಅವಕಾಶ ನೀಡಲಾಯಿತು.

ತಾಲೂಕು ದಂಡಾಧಿಕಾರಿಗಳು. ಕಾರ್ಯನಿರ್ವಹಣಾಧಿಕಾರಿ  ಉಪವಿಭಾಗಾಧಿಕಾರಿ , ಶಾಸಕ ಸಿಮೆಂಟ್ ಹಾಗೂ ಮಂಜು ಪತ್ನಿ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

Related posts

ಜೇನು ಪೋಷಕ ಸಂಘಕ್ಕೆ 37 ಲಕ್ಷ ಲಾಭ

Bimba Prakashana

ಮದುವೆ ಮುಗಿಸಿ ಬರುತ್ತಿದ್ದವರಿಗೆ ಅಪಘಾತ – 3 ಮೃತ್ಯು

Bimba Prakashana

ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಹಲ್ಲೆ ಪ್ರಕರಣ – ಜೈಲಿನಲ್ಲಿರುವ ಕಾರ್ಯಕರ್ತರ ಭೇಟಿ ಮಾಡಿದ ಉಪ ಸಭಾಪತಿ ಹಾಗೂ ಶಾಸಕರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More