Blog

ಕರಡಿ ಗಾಲದಲ್ಲಿ ತಿರುಗಾಟ ಮಾಡುವ ರಸ್ತೆ ಅಗೆದು ತೊಂದರೆ – ಪ್ರತಿಭಟಿಸಿದ ಗ್ರಾಮಸ್ಥರು

ಸಾರ್ವಜನಿಕರು ತಿರುಗಾಡುವ  ರಸ್ತೆ ಅಗೆದು ತಿರುಗಾಡಲು   ತೊಂದರೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರ  ಆಗ್ರಹ.

ಸಕಲೇಶಪುರ :- ಸುಮಾರು 70 ವರ್ಷದಿಂದ  15 ಕುಟುಂಬದವರು ತಿರುಗಾಡುತ್ತಿದ್ದ  ರಸ್ತೆಯನ್ನು ನೆನ್ನೆ ರಾತ್ರಿ   ಏಕಾಏಕಿ ಅಗೆದು ಚರಂಡಿ ಮಾಡಿ ಸಾರ್ವಜನಿಕರಿಗೆ,ವಿದ್ಯಾರ್ಥಿಗಳಿಗೆ,ವೃದ್ಧರಿಗೆ ತಿರುಗಾಡಲು ಹಾಗೂ ವಾಹನ ಸಂಚಾರಕ್ಕೆ ತೊಂದರೆ ಮಾಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ   ಕರಡಿಗಾಲ ಗ್ರಾಮದ ಬರಿಕೆಳಗ- ಹೊರಟ್ಟಿ ಗ್ರಾಮಸ್ಥರು ತಾಲ್ಲೂಕು ದಂಡಾಧಿಕಾರಿಗಳ ಮುಂದೆ  ಆಕ್ರೋಶ ವ್ಯಕ್ತಪಡಿಸಿದ ಘಟನೆ  ಇಂದು ಕರಡಿಗಾಲ ಗ್ರಾಮದಲ್ಲಿ ನಡೆಯಿತು.

ತಾಲ್ಲೂಕಿನ ಹೆತ್ತೂರು ಹೋಬಳಿಯ ವಳಲಹಳ್ಳಿ  ಗ್ರಾಮಪಂಚಾಯಿತಿ ವ್ಯಾಪ್ತಿಯ ಕರಡಿಗಾಲ ಗ್ರಾಮದ ಬರಿಕೆಳಗ -ಹೊರಟ್ಟಿ ಯಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬದವರು ವಾಸವಾಗಿದ್ದಾರೆ. ಈ ಗ್ರಾಮದ ಮನೆಗಳಿಗೆ  ಬೊಮ್ಮನಕೆರೆ ಮುಖ್ಯ ರಸ್ತೆಯಿಂದ  ಸಂಪರ್ಕಿಸುವ ಈ ರಸ್ತೆಯು ಸುಮಾರು 70 – 80 ಕ್ಕೂ ಹೆಚ್ಚು ವರ್ಷದಿಂದ ಇದ್ದು ಇದರಲ್ಲಿ ಪ್ರತಿನಿತ್ಯ ನೂರಾರು ಜನರು , ರೈತರು ಸೇರಿದಂತೆ  ಶಾಲಾ ವಿದ್ಯಾರ್ಥಿಗಳು ತಿರುಗಡುತ್ತಿದ್ದರು. ಶನಿವಾರ  ತಡ ರಾತ್ರಿ  ಬೊಮ್ಮನಕೆರೆ ಗ್ರಾಮದ  ವಿರೂಪಾಕ್ಷ ಹಾಗೂ ಮಕ್ಕಳು ಜೆ.ಸಿ.ಬಿ ತಂದು ರಸ್ತೆಯ ಮದ್ಯದಲ್ಲಿ ಚರಂಡಿಯನ್ನು ತೆಗೆದು,  ರಸ್ತೆಯನ್ನು ಅಗೆದು  ಗುಂಡಿ ಮಾಡಿ ವಾಹನಗಳು ಹಾಗೂ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಿರುಗಾಡದಂತೆ  ತೊಂದರೆ ಮಾಡಿದ್ದರೆ.ಇದರ ಬಗ್ಗೆ ಗ್ರಾಮಸ್ಥರು ಗ್ರಾಮಾಂತರ ಪೊಲೀಸ್ ಠಾಣೆಗೆ  ದೂರು ನೀಡಿದ್ದರೆ ಕೂಡಲೇ ನೆನ್ನೆ ರಾತ್ರಿ ಸುಮಾರು 11 ಗಂಟೆಯ ಸಮಯದಲ್ಲಿ ಸ್ಥಳಕ್ಕೆ ಬಂದ  ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ಅವರು ಗ್ರಾಮಸ್ಥರ ಮದ್ಯ ಬುಗಿಲೆದ್ದಿದ್ದ ದ್ವೇಷವನ್ನು  ಸ್ವಲ್ಪಮಟ್ಟಿಗೆ ತಿಳಿಗೊಳಿಸಿದ್ದರು.

ಇಂದು ಬೆಳಗ್ಗೆ ಸಾರ್ವಜನಿಕರಿಗೆ ತಿರುಗಾಡಲು ಸಮಸ್ಯೆಯಾದಾಗ  ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ  ಶಾಲಾ ಮಕ್ಕಳಿಗೆ ನಾಳೆಯಿಂದ ಶಾಲೆಗೆ ಹೋಗಲು ಹಾಗೂ  ರೋಗಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು  ಹಾಗೂ ಸಾರ್ವಜನಿಕ ತಿರಗಾಡಲು ರಸ್ತೆ ಇಲ್ಲ.ಕೂಡಲೇ ಸ್ಥಳಕ್ಕೆ ತಾಲೂಕು ದಂಡಾಧಿಕಾರಿಗಳು ಬಂದು ರಸ್ತೆಯ ವ್ಯವಸ್ಥೆಯನ್ನು ಮಾಡಿಸಿಕೊಡಬೇಕೆಂದು ಪಟ್ಟು ಹಿಡಿದರು. ಸಮಸ್ಯೆ ಗಮನಕ್ಕೆ ಬಂದ ಕೂಡಲೆ ದಂಡಾಧಿಕಾರಿಗಳಾದ  ಸುಪ್ರೀತ  ಸ್ಥಳಕ್ಕೆ ಧಾವಿಸಿ ಸಮಸ್ಯೆಯನ್ನು ಆಲಿಸಿದರು.ಈ ಸಂದರ್ಭದಲ್ಲಿ  ಗ್ರಾಮಸ್ಥರು  ದುಡ್ಡಿನ ಆಸೆಗಾಗಿ ಇತರ ತಿರುಗಾಡುವ ರಸ್ತೆಗೆ ಸಮಸ್ಯೆಯನ್ನು ಬೊಮ್ಮನಕೆರೆ ಗ್ರಾಮದ ವಿರುಪಾಕ್ಷ ಹಾಗೂ ಮಕ್ಕಳು ತಂದೊಡ್ಡಿದ್ದಾರೆ. ಗ್ರಾಮದಲ್ಲಿ ರೋಗಿಗಳು ಹಾಗೂ ವಿದ್ಯಾರ್ಥಿಗಳು ಇದ್ದರೆ ಈ ತರಹ ಆದರೆ   ನಾವು ಹೇಗೆ ಜೀವನ ಮಾಡಬೇಕು?ನಮಗೆ ಬೇರೆ ಊರಿನ ಸಂಪರ್ಕಕ್ಕೆ ಇರುವ ರಸ್ತೆ ಇತರ ಆದರೆ ನಾವು ಹೇಗೆ ಬೇರೆ ಊರಿನ ಸಂಪರ್ಕ ಮಾಡಬೇಕು? ಇತರ ಮಾಡಿರುವ ವ್ಯಕ್ತಿಗಳ ವಿರುದ್ಧ ಕೂಡಲು ಕಾನೂನು ಕ್ರಮ ಕೈಗೊಳ್ಳುವಂತೆ. ಸಮಸ್ಯೆಯನ್ನು ಮನವರಿಕೆ ಮಾಡಿ ಕೊಟ್ಟರು.

ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ.ಪಿ ಕೃಷ್ಣೇಗೌಡ  ” ನಮ್ಮ ಪೂರ್ವಜರ ಕಾಲದಿಂದ ಈ ರಸ್ತೆಯಲ್ಲೇ ತಿರುಗಾಡುತ್ತಿದ್ದೇವೆ. ಈಗ ಏಕಾಏಕಿ ಬೊಮ್ಮನಕೆರೆ ಗ್ರಾಮದ ವಿರೂಪಾಕ್ಷ ಹಾಗೂ ಅವರ ಮಕ್ಕಳು ರಸ್ತೆಯನ್ನು ಆಗಿದ್ದು ಗುಂಡಿ ತೋಡಿ,ಚರಂಡಿ ಮಾಡಿ ಗ್ರಾಮಸ್ಥರು ತಿರುಗಾಡದಂತೆ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರಿಗೆ  ಬೇರೆ ಊರಿನ ಸಂಪರ್ಕ ಕಡಿದು ಹೋಗಿದೆ. ಈ ತರಹ ಸಾರ್ವಜನಿಕರಿಗೆ ತೊಂದರೆ ಮಾಡಿರುವ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು.  ತಾಲ್ಲೂಕು ದಂಡಾಧಿಕಾರಿಗಳು ಕೂಡಲೇ ಮದ್ಯ ಪ್ರವೇಶಿಸಿ ಊರಿಗೆ ಸಂಪರ್ಕ ರಸ್ತೆಯನ್ನು ಬಿಡಿಸಿ ಕೊಡಬೇಕು.ಇಲ್ಲವಾದರೆ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಬೃಹತ್ ಪಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ರೈತ ಘಟಕ ಅಧ್ಯಕ್ಷರಾದ ವಸಂತ್ ಬೊಮ್ಮನಕೆರೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುತ್ತ ” ಈ ತರ ಸಾರ್ವಜನಿಕರು ತಿರುಗಾಡುವ ರಸ್ತೆಗೆ  ತೊಂದರೆ ಮಾಡಿರುವವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು , ಶಾಸಕರು ಕೂಡ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಅರಿತು ಈ ಗ್ರಾಮಕ್ಕೆ ಸಂಪರ್ಕ ರಸ್ತೆಯನ್ನು  ಬಿಡಿಸಿಕೊಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು  ಎಂದು ಹೇಳಿದರು.

ಈ ಸಂದರ್ಭದಲ್ಲಿ  ತಾಲ್ಲೂಕು  ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ  ವಳಲಹಳ್ಳಿ ವೀರೇಶ್,  ಕರಡಿಗಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್, ಬೊಮ್ಮನಕೆರೆ ಗ್ರಾಮ ಪಂಚಾಯತಿ ಸದಸ್ಯರಾದ ರೇಣು ಕುಮಾರ್, ವಳಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರುದ್ರೇಶ್,ಕರಡಿಗಾಲ ಗ್ರಾಮಸ್ಥರಾದ ಹರೀಶ್,ಅಶ್ವತ್ ಬೊಮ್ಮನಕೆರೆ ಗ್ರಾಮಸ್ಥರಾದ  ಪಾಲಾಕ್ಷ,ಸುರೇಶ್,ಸೇರಿದಂತೆ ಕರಡಿಗಾಲ ಹಾಗೂ ಬೊಮ್ಮನ ಕೆರೆಯ  ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ನೆರೆದಿದ್ದರು.

Related posts

ಕಟ್ಟಾಯ ನಿವಾಸಿ ಬಿ ಆರ್ ಕೃಷ್ಣೇ ಗೌಡ ನಿಧನ

Bimba Prakashana

ಶಾಸಕರಿಗೆ ಶುಭಾಶಯಗಳನ್ನು ತಿಳಿಸಿದ ಸಕಲೇಶಪುರ ಪತ್ರಕರ್ತರು

Bimba Prakashana

ಸಕಲೇಶಪುರ ನಗರ ಠಾಣೆಯಲ್ಲಿ ಸಮಸ್ಯೆಗಳ ಬಗ್ಗೆ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More