Blog

ಆಲೂರುನಲ್ಲಿ 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಆಲೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ಆಲೂರು ಸಕಲೇಶಪುರ ಕ್ಷೇತ್ರ ದ ಶಾಸಕರಾದ ಸಿಮೆಂಟ್ ಮಂಜು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕ ಸಿಮೆಂಟ್ ಮಂಜು ವಿರುಪಾಪುರ ಗ್ರಾಮ ಹಾಗೂ ಭಾವಸಳ್ಳಿ ಗ್ರಾಮಕ್ಕೆ ರಸ್ತೆಗಳು ಬೇಕು ಎಂದು ನಮಗೆ ಮನವಿ ಮಾಡಿದ್ದರು ಅದನ್ನು ನಾವು ಮನಗೊಂಡು ಸುಮಾರು ಒಂದು ಕೋಟಿ ವೆಚ್ಚದಲ್ಲಿ ಎರಡು ಗ್ರಾಮಗಳಿಗೆ ರಸ್ತೆ ಡಾಂಬಕರಿ ಕಣ ಮಾಡಲು ಇಂದು ಚಾಲನೆ ಕೊಟ್ಟಿದ್ದೇನೆ ಮಾತನಾಡದೆಲ್ಲದೆ ವಾಟೆವೊಳೆ ಜಲಾಶಯದಿಂದ  ಆಲೂರು ತಾಲೂಕಿನ ರೈತರಿಗೆ ಕಾಲುವೆಗಳಲ್ಲಿ ನೀರು ಹರಿಸಿ ರೈತರ ಬದುಕನ್ನು ಹಸನಾಗಿ ಮಾಡುವುದೇ ನನ್ನ ಉದ್ದೇಶ ಎಂದು ಮಾತನಾಡಿದಲ್ಲದೆ 30 ವರ್ಷಗಳಿಂದ ವಿರುಪಾಪುರ ಗ್ರಾಮಕ್ಕೆ ರಸ್ತೆ ಆಗದೆ ಇರುವುದು ದುರ್ದೈವದ ವಿಚಾರ ಇದನ್ನು ಮನಗಂಡು ರಸ್ತೆಯನ್ನು ಮಾಡಿಸಲು ಇಂದು ಶಂಕು ಸ್ಥಾಪನೆ ಮಾಡಿದ್ದೇವೆ ಹಾಗೂ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ಮಾಡಲು ಸೂಚನೆ ನೀಡಿದ್ದೇನೆ ಎಂದು ಮಾತನಾಡಿದರು.


ಈ ಸಂದರ್ಭದಲ್ಲಿ ವಿರುಪಾಪುರ ಹಾಗೂ ಸಿದ್ದಾಪುರ ಮುರುಡೂರು ಭಾವಸಳ್ಳಿ ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಜನಪ್ರಿಯ ಶಾಸಕರಾದ ಸಿಮೆಂಟ್ ಮಂಜು ಅವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಕಾರ್ಯಕ್ರಮದಲ್ಲಿ ಆಲೂರು ಕಟ್ಟಯಮಂಡಲದ ಬಿಜೆಪಿ ಕಾರ್ಯದರ್ಶಿಗಳಾದ ಧ್ರುವ. ಹಬ್ಬನ ಕೃಷ್ಣಮೂರ್ತಿ. ಕಿರಣ್. ಮಾವನೂರ್ ಮೋಹನ್ ಹೇಮಂತ್. ಹಾಗೂ ಭಾವಸಳ್ಳಿ ಮುರಡೂರು ವಿರುಪಾಪುರ ಸುತ್ತಮುತ್ತಲಿನ ಗ್ರಾಮಸ್ಥರು ಮುಖಂಡರುಗಳು ಉಪಸ್ಥಿತರಿದ್ದರು.

Related posts

ಆಲೂರು ಜಾತ್ರೆ – ಪೂರ್ವ ಭಾವಿ ಸಭೆ

Bimba Prakashana

ಬೆಟ್ಟದ ಭೈರವೇಶ್ವರದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿ

Bimba Prakashana

ಇಂದು ಮಳಲಿಯಲ್ಲಿ ಚಿತ್ರಕಲಾ ಸ್ಪರ್ಧೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More