ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಜೊತೆಗೆ ಪರವಾನಿಗೆ ಮತ್ತು ನೊಂದಣಿ ಕಡ್ಡಾಯ :ಡಾ”ನಿಸಾರ್ ಫಾತೀಮಾ.
ಆಲೂರು:ಉದ್ದಿಮೆದಾರರು ಆಹಾರ ಸುರಕ್ಷತಾ ತರಬೇತಿ ಪ್ರಮಾಣ ಪತ್ರ ಹಾಗೂ ಪರವಾನಿಗೆ ಮತ್ತು ನೊಂದಣಿಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಉದ್ದಿಮೆಯನ್ನು ಮಾಡಬೇಕು,ಅವಧಿ ಮುಗಿದ್ದಿದ್ದರೆ ಮರು ಚಾಲ್ತಿ ಮಾಡಿಸಿಕೊಂಡು ನಿಯಮ ಪಾಲಿಸಬೇಕು ಇಲ್ಲವಾದ್ದಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ”ನಿಸಾರ್ ಫಾತೀಮಾ ತಿಳಿಸಿದರು.
ಪಟ್ಟಣದಲ್ಲಿ ದಿನಸಿಅಂಗಡಿ,ಬೇಕರಿ,ಹೋಟೆಲ್,ಕಾಂಡಿಮೆಂಟ್ಸ್,ಚಾಟ್ ಸೆಂಟರ್ ಗಳಿಗೆ ಭೇಟಿಮಾಡಿ ಆಹಾರ ಸುರಕ್ಷತಾ ತಪಾಸಣೆ ಮಾಡಿ ಸ್ವಚ್ಚತೆಯೊಂದಿಗೆ ಉತ್ತಮ ಗುಣಮಟ್ಟ ಆಹಾರವನ್ನು ಗ್ರಾಹಕರಿಗೆ ನೀಡಬೇಕು ಎಂದು ಜಾಗೃತಿ ಮೂಡಿಸಿದರು.ಈ ನಿಯಮ ಪಾಲನೆ ತಪ್ಪಿದಂತಹ ಉದ್ದಿಮೆದಾರರಿಗೆ ಸ್ಥಳದಲ್ಲಿಯೆ ನೋಟಿಸು ನೀಡಿ ಏಳು ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಉತ್ತರ ಕೊಡಬೇಕು ಇಲ್ಲವಾದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು,ಅಲ್ಲದೆ ಉದ್ದಿಮೆದಾರರು ಕಡ್ಡಾಯವಾಗಿ ಆಹಾರ ಸುರಕ್ಷತಾ ತರಬೇತಿ ಪ್ರಮಾಣಪತ್ರ ಪಡೆದು ಹಾಗೂ ಪರವಾನಿಗೆ ಅಥವಾ ನೊಂದಣಿಯನ್ನು ಗೋಡೆಯ ಮೇಲೆ ಪ್ರದರ್ಶಿಸಬೇಕು ಎಂದರು.
ತರಬೇತಿ ಮತ್ತು ಪರವಾನಿಗೆ ಇಲ್ಲದೆ ಬೀದಿಬದಿ ವ್ಯಾಪರ ಮಾಡುತ್ತಿದ್ದ ಭೂಮಿಕಾ ಗೋಬಿ ಗಾಡಿಯ ಕೆಳಗೆ ಕೊಳಚೆ ನೀರು ನಿಂತು ವಾಸನೆ ಬರುತ್ತಿದ್ದರು ಎಚ್ಚರವಹಿಸದೆ ವ್ಯಾಪರ ಮಾಡುತ್ತಿದ್ದ ಮಾಲಿಕನಿಗೆ ವ್ಯಾಪರ ನಿಲ್ಲಿಸುವಂತೆ ತರಾಟೆ ತೆಗೆದುಕೊಂಡರು.
ಈ ಸಂಧರ್ಭದಲ್ಲಿ ಆಹಾರ ನಿರೀಕ್ಷಕರಾದ ಸತೀಶ್.ಮಂಜು.ಮೋಹನ್ ಇದ್ದರು.

