Blog

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದಿಂದ ರಾಜ್ಯ ಪತ್ರಿಕಾ ಕಾರ್ಯಾಗಾರ

🔴ಕಾರ್ಕಳ: ಪತ್ರಿಕೆ ಇಲ್ಲದ ಜಗತ್ತು ಊಹಿಸಲು ಸಾಧ್ಯವಿಲ್ಲ –        ಬಿ .ಎಸ್. ಕೋಟ್ಯಾನ್

ಪತ್ರಿಕೆ ಎಂದರೆ ಪ್ರತೀಯೊಬ್ಬರಿಗೂ ಅನಿವಾರ್ಯವಾದ ವ್ಯವಸ್ಥೆ ಹಾಗೂ ಪತ್ರಿಕೆ ಜವಾಬ್ದಾರಿ ಪ್ರಮುಖವಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ನಿರ್ದೇಶಕರಾದ ಭಾಸ್ಕರ ಎಸ್ ಕೋಟ್ಯಾನ್ ಹೇಳಿದ್ದಾರೆ.     

     ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ (ರಿ) ಇದರ ವತಿಯಿಂದ ರಾಜ್ಯಾದ್ಯಂತ ಬಂದಿದ್ದ ಪತ್ರಕರ್ತರಿಗೆ ರಾಜ್ಯಮಟ್ಟದ ಪತ್ರಿಕಾ ಕಾರ್ಯಾಗಾರವು ಹಾಗೂ ಅಧ್ಯಯನ ಪ್ರವಾಸ ಕುರಿತ ಮಾಹಿತಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿ ನಲ್ಲಿ ನಡೆಯಿತು. 
     ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಭಾಸ್ಕರ. ಎಸ್.ಕೋಟ್ಯಾನ್‌ರವರು ಮಾತನಾಡಿ ಪತ್ರಿಕೆ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವೇ ಇಲ್ಲ. ಪತ್ರಿಕೆಗಳಿಂದ ನಾವು ಬಹಳಷ್ಟು ಜ್ಞಾನಾರ್ಜನೆಯ ಜೊತೆಗೆ ಮಾಹಿತಿಗಳನ್ನು ಪಡೆಯುತ್ತಿದ್ದೇವೆ . ಹೀಗಾಗಿ ಪತ್ರಿಕಾ ರಂಗವು ಬಹಳಷ್ಟು ಶ್ರೇಷ್ಠವಾದುದು ಎಂದು ಹೇಳಿದರು.

    ಕರ್ನಾಟಕ ಫೆಡರೇಶನ್ ಆಫ್ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ) ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿಯವರು ಮಾತನಾಡಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘವು ರಾಜ್ಯದಲ್ಲಿ ಪತ್ರಕರ್ತರಿಗಾಗಿ ಹಲವಾರು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಬಹಳ ಸಂತಸದ ವಿಚಾರ ಎಂದು ಹೇಳಿದರು.

   ಪತ್ರಕರ್ತರ ಸಂಕಷ್ಠಗಳ ಬಗ್ಗೆ ರಾಜ್ಯ ಸಂಘವು ಸ್ಪಂದಿಸುವ ಕೆಲಸ ಮಾಡುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳಿಂದ ಪತ್ರಕರ್ತರು ಆಗಮಿಸಿ ಕಾರ್ಯಗಾರದಲ್ಲಿ ಯಶಸ್ವಿಯಾಗಿ ಭಾಗವಹಿಸಿ ಜ್ಞಾನಾರ್ಜನೆ ಪಡೆಯುವ ಮೂಲಕ ಕರಾವಳಿ ಭಾಗದ ಐತಿಹಾಸಿಕ ಹಾಗೂ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಅಧ್ಯಯನ ಪ್ರವಾಸ ಮಾಡಿದ್ದು ವಿಶೇಷವಾಗಿತ್ತು ಎಂದು ಸಭೆಯನ್ನು ಉದ್ದೇಶಿ ಮಾತನಾಡುತ್ತ
ಮಾಧ್ಯಮ ರಂಗವನ್ನು ಉಳಿಸಿ ಬೆಳೆಸುವುದು  ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದ ಅವರು ರಾಜ್ಯದಾದ್ಯಂತ ಪತ್ರಕರ್ತರ ಅಭಿವೃದ್ದಿಗಾಗಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಹಲವಾರು ರೂಪು ರೇಷೆಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

     ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ. ಎಂ. ರಾಜಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾಧ್ಯಮದ ಬದ್ದತೆಯ ಬಗ್ಗೆ ತಿಳಿಸಿದ ಅವರು ಮಕ್ಕಳಿಗೆ ಧಾಮಿಕ ಸಂಸ್ಕೃತಿ ಯನ್ನು ತಿಳಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿರುವುದು ಮಹತ್ತರ ವಾದ ಕಾರ್ಯ ಎಂದು ಹೇಳಿದರು.
ಉಡುಪಿ, ಮಂಗಳೂರು ಜಿಲ್ಲೆಗಳಲ್ಲಿ ಪತ್ರಿಕಾರಂಗದ ಮಹತ್ವ ಉಳಿದುಕೊಂಡಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಪತ್ರಿಕಾರಂಗ ಇಂದಿಗೂ ಸಿರಿವಂತವಾಗಿ ಉಳಿದು ಕೊಂಡಿದೆ ಎಂದರು.
ಸರಕಾರದ ಸೌಲಭ್ಯಗಳು ದೊಡ್ಡ ಪತ್ರಿಕೆಗಳಿಗೆ ಮಾತ್ರ ಸಿಗುತ್ತದೆಯೇ ವಿನ: ಗ್ರಾಮೀಣ ಪತ್ರಕರ್ತರಿಗೆ ಸಿಗುತ್ತಿಲ್ಲ. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ನಡುವೆ ಹೋರಾಟ ರಾಜ್ಯ ಸಂಘಟನೆ ಎಂದರು . 
    ಒಂದು ಪತ್ರಿಕೆಯನ್ನು ಉಳಿಸಿ ಬೆಳೆಸಿ ಬೆಳೆಸುವುದು ಬಹಳ ಸಂಕಷ್ಠದ ವಿಚಾರ ಪತ್ರಿಕೆಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿವೆ ಎಂದು ಹೇಳಿದ ಅವರು ಈಗಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಯನ್ನು ಉಳಿಸಿಕೊಳ್ಳುವುದೇ ಸಾಹಸದ ಕಾರ್ಯ,
    ಅಂದಿನ  ಪತ್ರಿಕೋದ್ಯಮಕ್ಕೂ ಇಂದಿನ ಪತ್ರಕರ್ತ ಪತ್ರಿಕೋದ್ಯಮಕ್ಕೂ ಬಹಳಷ್ಟು ವ್ಯತ್ಯಾಸವಿದ್ದು ಪತ್ರಕರ್ತರು ಅಧ್ಯಯನ ಮಾಡಿ ಸುದ್ದಿಗಳನ್ನು ಮಾಡಬೇಕು ಹಾಗೂ ಸ್ಥಳೀಯವಾಗಿ ಪತ್ರಕರ್ತರಿಗೆ ಮಾಹಿತಿಗಳು ತಿಳಿದಿರಬೇಕು ಹಾಗಾಗಿಯೇ ರಾಜ್ಯ ಸಂಘವು ಇಂತಹ ಪತ್ರಕರ್ತರ ಕಾರ್ಯಗಾರ ಹಾಗೂ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದರು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಪತ್ರಕರ್ತ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳಿದರು.

ರಾಜಾಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು ಮಾತನಾಡಿ ನಮಗೆ ಸಹಕಾರ ರತ್ನ ದೊರಕಿದ ಬಳಿಕ ಹಲವಾರು ಕಡೆಗಳಲ್ಲಿ ಅಭಿನಂದನೆ ನಿರಂತರ ಆಗುತ್ತಲೇ ಬಂದಿದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯಗಳನ್ನು ಯಾರೇ ಮಾಡಿದರೂ ಅದಕ್ಕೆ ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.


ಈ ಸಂದಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ಮುದ್ರಾಡಿ ಗ್ರಾಮ ಪಂಚಾಯತು , ಸಹಕಾರ ರತ್ನ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಭಾಸ್ಕರ ಎಸ್ ಕೋಟ್ಯಾನ್, ರಾಜಾಪುರ ಸಾರಸ್ವತ ಕ್ರೆಡಿಟ್ ಕೊ ಅಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕಡಾರಿ ರವೀಂದ್ರ ಪ್ರಭು, ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕರಾದ ಗಣಪತಿ ಭಟ್, , ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ಪ್ರಸ್ತಾವಿಕ ಮಾಡಿದರು, ಜಿಲ್ಲಾಧ್ಯಕ್ಷರಾದ ಎಂ. ಎನ್. ಕೊಟ್ಟಾರಿ,  ಕಾರ್ಕಳ ಸಂಘದ ಅಧ್ಯಕ್ಷರಾದ ನಳಿನಿ ಸುವರ್ಣ ಸ್ವಾಗತಿಸಿದರು,

ಕಾರ್ಯದರ್ಶಿ ರಂಜಿತ್, ಶಶಿಕಾಂತ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳನ್ನು ಗೌರವಿಸಲಾಯಿತು.


ಕ್ರಿಯೇಟಿವ್ ಸಂಸ್ಥೆಯ ಸಹ ಸಂಸ್ಥಾಪಕರು ಹಾಗೂ ಪ್ರಾಂಶುಪಾಲ ರಾದ  ಗಣಪತಿ ಭಟ್ ಮಾತನಾಡಿ ಕ್ರಿಯೇಟಿವ್ ಸಂಸ್ಥೆ ಸದಾ ಪತ್ರಿಕಾ ಮಾಧ್ಯಮದ ಜೊತೆಗೆ ಇರುವ ಸಂಸ್ಥೆ. ಎಲ್ಲಾ ಮಾಧ್ಯಮದವರನ್ನು ಕೂಡಾ ಗೌರವಿಸುತ್ತಲೇ ಬಂದಿದೆ ಎಂದು ಹೇಳಿದರು.
ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ನೀಡುವ ನಿಟ್ಟಿನಲ್ಲಿ ಸಂಸ್ಕಾರಯುತವಾದ ಶಿಕ್ಷಣವನ್ನು ನಮ್ಮ ಕಾಲೇಜು ನೀಡುತ್ತಿದೆ. ಮಾಧ್ಯಮ ಕ್ಷೇತ್ರದ ಸಂಕಷ್ಠಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಈ ಸಂಘದ ಮೂಲಕ ಹಲವಾರು ಉತ್ತಮ ಕಾಯಗಳನ್ನು ಮಾಡುತ್ತಾ ಬಂದಿರುವುದು ಬಹಳ ಸಂತಸದ ವಿಚಾರ ಎಂದು ಹೇಳಿದರು.


ಉದ್ಯಮಿ ಹಾಗೂ ಸಮಾಜ ಸೇವಕರಾದ ಬೋಳ ಪ್ರಶಾಂತ್ ಕಾಮತ್ , ಹೈ ಕೋರ್ಟ್ ನ್ಯಾಯವಾದಿ ಅಮೃತೇಶ್,  ಹಿರ್ಗಾನ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಉದ್ಯಮಿ ಹರೀಶ್ಚಂದ್ರ ಕುಲಾಲ್,  ಶ್ರೀಧರ ಆಚಾರ್ಯ ಕಾನಂಗಿ ಉಪಸ್ಥಿತರಿದ್ದರು. ತನುಜಾ ರಾಜೇಶ್ ಕಾಯಕ್ರಮ ನಿರೂಪಿಸಿದರು.


ಕಾಯಕ್ರಮದ ಬಳಿಕ ಮಾಧ್ಯಮ ಹಾಗೂ ಡಿಜಿಟಲ್ ವಿಚಾರದ ಬಗ್ಗೆ ಹೈ ಕೋಟ್ ನ್ಯಾಯವಾದಿ ಅಮೃತೇಶ್, ಪತ್ರಿಕೋದ್ಯಮ ಕುರಿತಂತೆ ರಾಜ್ಯ ಅಧ್ಯಕ್ಷರಾದ ಜಿ. ಎಂ. ರಾಜಶೇಖರ್, ಪತ್ರಕರ್ತರೊಂದಿಗೆ ಸಮಾಧಾನ ನಡೆಸಿದರು ಖ್ಯಾತ ಸರ್ಟಿಫೈಡ್ ಯು ಟ್ಯೂಬರ್ ಅಲೆನ್‌ ಡಿ ಮೆಲ್ಲೋ ರವರು ಮಾಹಿತಿ ನೀಡಿದರು.


   ಈ ಸಂದರ್ಭದಲ್ಲಿ ರಾಜ್ಯ ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಪರಮೇಶ್ ರವರನ್ನು ಹಾಗೂ ಹಿರಿಯ ಛಾಯಾಗ್ರಹ ಶ್ರೀನಿವಾಸ್ ರವರನ್ನು ಸನ್ಮಾನಿಸಲಾಯಿತು  ಇದರೊಂದಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳಿಗೆ ಕರ್ನಾಟಕ ಮಾಧ್ಯಮ ಪತ್ರಕರ್ತ ಸಂಘವು ಯಶಸ್ವಿ ಕಾರ್ಯಕ್ರಮ ಮಾಡಿದ್ದಕ್ಕೆ ಅಭಿನಂದಿಸಿ ಗೌರವಿಸಿತು.

Related posts

ಜೆಡಿಎಸ್ ನಿಂದ ಹಲವಾರು ಮಂದಿ ಕಾಂಗ್ರೆಸ್ ಗೆ ಸೇರ್ಪಡೆ

Bimba Prakashana

ಶೌರ್ಯ ಶ್ರೀ ವಿಪತ್ತು ನಿರ್ವಹಣಾ ಕಾರ್ಯಕ್ರಮ

Bimba Prakashana

ಸಕಲೇಶಪುರದಲ್ಲಿ ಜೆಡಿಎಸ್ ಸದಸ್ಯತ್ವ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More