Blog

ಶಾಲೆಗೆ ಬಂದ ಮಕ್ಕಳಿಗೆ ದಿನ ಪತ್ರಿಕೆ ನೀಡಿದ ಕಾರ್ಯನಿರತ ಪತ್ರಕರ್ತರ ಸಂಘ

ಶಾಲೆಗೆ ಬಂದ ಮಕ್ಕಳಿಗೆ ದಿನಪತ್ರಿಕೆ ಹಂಚುವ ಮೂಲಕ ಶುಭ ಕೋರಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಧರಣಿಂದ್ರ ಹಾಗೂ ಉಪಾಧ್ಯಕ್ಷ ನವೀನ್ ಬೈರಾಪುರ. ಹಾಗೂ ಕಾರ್ಯನಿರ್ತರ ಪತ್ರಕರ್ತರ ಪದಾಧಿಕಾರಿಗಳು 

ಆಲೂರು ತಾಲೂಕಿನ ಎಸ್. ವಿ.ಪಬ್ಲಿಕ್ ಶಾಲೆಗೆ 2026 27ನೇ ಶೈಕ್ಷಣಿಕ ಸಾಲಿನ ಶಾಲಾ ಆರಂಭೋತ್ಸವ ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷರಾದ ಧರಣೇಂದ್ರ ಹಾಗೂ ಎಸ್ ಪಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಸುನಿಲ್ ಸರ್. ಹಾಗೂ ನಳಿನ ಅವರ ನೇತೃತ್ವದಲ್ಲಿ ದಿನಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ  ಶುಭ ಕೋರಲಾಯಿತು.

ನಂತರ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷರಾದ ಧರಣೇಂದ್ರ ನಮ್ಮ ಸಂಘದ ವತಿಯಿಂದ ವಿದ್ಯಾರ್ಥಿಗಳು ಮೊಬೈಲ್ ಹಾವಳಿಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ಇಂದು ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳನ್ನು ನೀಡಿದ್ದೇವೆ ಹಾಗೂ ಉದಯವಾಣಿ    ವರದಿಗಾರರಾದಂತ ನವೀನ್ ಬೈರಾಪುರ ಇವರು ಉದಯವಾಣಿ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಶೇಕಡ 50ರಷ್ಟು ರಿಯಾಯಿತಿ ದಿನ ಪತ್ರಿಕೆಗಳನ್ನು ನೀಡುತ್ತಿದ್ದಾರೆ ಇವರಿಗೆ ನಮ್ಮ ಸಂಘದ ಪರವಾಗಿ ಹಾಗೂ ಶಾಲೆಯ ಪರವಾಗಿ ಅಭಿನಂದನೆಗಳು ಇಂದಿನ ವಿದ್ಯಾರ್ಥಿಗಳು ದಿನಪತ್ರಿಕೆಗಳನ್ನು ಓದಿ ಪುಸ್ತಕಗಳನ್ನು ಓದಿ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡು ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ಗೌರವ ತರಬೇಕೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಸುನಿಲ್ ಅವರು ಮಾತನಾಡಿ ಇಂದು ನಮ್ಮ ಪತ್ರಕರ್ತರ ಸಂಘದ ಅಧ್ಯಕ್ಷರಾದ ಧರಣೇoದ್ರ ಹಾಗೂ ನವೀನ್ ಅವರು ವಿಶೇಷ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಮಾಡಿದ್ದಾರೆ ಇಂದಿನ ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಮಾಡಬೇಕಾದರೆ ದಿನಪತ್ರಿಕೆಗಳ ಅವಶ್ಯಕ ಎಂದು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥರಾದ ನಳಿನ ಮೇಡಂ. ಎಸ್‌ವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು. ಶಿಕ್ಷಕರು ಇದ್ದರು.

Related posts

ಪೊಲೀಸ್ ಠಾಣೆ ಸ್ವಚ್ಛತೆ ಮಾಡುವಂತೆ ಆದೇಶ ನೀಡಿದ ನ್ಯಾಯಾಲಯ

Bimba Prakashana

ಸೈಬರ್ ಸೆಕ್ಯೂರಿಟಿ ಚಿತ್ರಕಲಾ ಸ್ಪರ್ಧೆ

Bimba Prakashana

ಬಿಜೆಪಿಯಲ್ಲಿ ಬಾಗೆ ಗೋಪಿನಾಥ್ ಗೆ ಸ್ಥಾನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More