Blog

ಶಿಕ್ಷಕರ ಸಂಘದ ಚುನಾವಣೆ

ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ 6 ನಿರ್ದೇಶಕರು ಭರ್ಜರಿ ಜಯ

ಸಕಲೇಶಪುರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಯು ಮೇ 1, 2026ರಂದು ಶಾಂತಿಯುತವಾಗಿ ನಡೆಯಿತು. ಚುನಾವಣೆಯಲ್ಲಿ ವಿವಿಧ ಅಭ್ಯರ್ಥಿಗಳು ಸ್ಪರ್ಧಿಸಿ, ಹೆಚ್ಚಿನ ಮತಗಳನ್ನು ಪಡೆದು 6 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಜಯಶಾಲಿಗಳ ವಿವರ ಹೀಗಿದೆ:
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಾಪುರದ ದೊರೇಶ ಎಂ ಎಸ್(ಖಜಾಂಚಿ ನೌಕರರ ಸಂಘ) ಅವರು 159 ಮತಗಳನ್ನು ಪಡೆದರೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಲೀಂ 184 ಮತಗಳು, ಹಡ್ಲಹಳ್ಳಿ ಹಳ್ಳಿ ಶಾಲೆಯ ಪ್ರವೀಣ್ ಕುಮಾರ್ ಜೆ.ಜಿ 202 ಮತಗಳು, ಈಶ್ವರಹಳ್ಳಿ ಶಾಲೆಯ ವೇಣುಗೋಪಾಲ್ 155 ಮತಗಳು, ಹಲಸುಲಿಗೆ ಶಾಲೆಯ ಶಶಿ 168 ಮತಗಳು ಹಾಗೂ ಯಡೆಹಳ್ಳಿ ಶಾಲೆಯ ಮಮತಾ ಡಿ. 146 ಮತಗಳನ್ನು ಪಡೆದು ನಿರ್ದೇಶಕರಾಗಿ ಆಯ್ಕೆಯಾದರು.

ಇನ್ನೂ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಟಿ.ಬಿ ಗೌಡೇಗೌಡ(99), ಶಿವಕುಮಾರ್ ವೈ.ಡಿ (150), ಅರುಣ್ (98), ನಿಂಗರಾಜು ಯು ಎಂ(68)ಮತಗಳನ್ನು ಪಡೆದಿದ್ದಾರೆ.

ಚುನಾವಣೆಯು ಯಾವುದೇ ಅಡೆತಡೆಗಳಿಲ್ಲದೆ ಶಾಂತಿಯುತವಾಗಿ ನೆರವೇರಿದ ಹಿನ್ನೆಲೆಯಲ್ಲಿ, ಶಿಕ್ಷಕರ ವಲಯದಲ್ಲಿ ಸಂತಸ ವ್ಯಕ್ತವಾಗಿದ್ದು, ವಿಜೇತರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

Related posts

ಸ್ವಯಂ ಟೈಮ್ಸ್ ವಾರ್ತಾ ವಾಹಿನಿಯನ್ನು ಹ್ಯಾಕ್ ಮಾಡಿದ ಸೈಬರ್ ಕಳ್ಳ

Bimba Prakashana

ಡಾ. ಸಾಗರ್ ಜಾನೇ ಕೆರೆಯವರಿಗೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

Bimba Prakashana

ಬೇಲೂರುನಲ್ಲಿ ಗ್ಯಾರಂಟಿ ಸಮಿತಿ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More