Blog

ಚಂಗಡ ಹಳ್ಳಿಯಲ್ಲಿ ಜ್ಞಾನ ದೀಪ ವಾರ್ಷಿಕ ಸಭೆ

ಚಂಗಡಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜ್ಞಾನದೀಪ ಸಂಜೀವಿನಿ ಗ್ರಾಮಮಟ್ಟದ ವಾರ್ಷಿಕ ಸಭೆಯನ್ನು ಇಂದು ಹಮ್ಮಿಕೊಳ್ಳಲಾಯಿತು.

ಒಕ್ಕೂಟದ ಉಪಾಧ್ಯಕ್ಷರಾದ ಪವಿತ್ರ,  ಕಾರ್ಯದರ್ಶಿಯಾದ ಗೌರಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಗನ್ನಾಥ್, ತಾಲೂಕಿನ ಟಿಪಿಎಂ ಆದ ನಾಗೇಶ್,ಎಫ್ ಎಲ್ ಸಿ ಗಂಗಾಧರ್, ಗ್ರಾಮ ಪಂಚಾಯತಿ ಸದಸ್ಯರಾದ ಲೋಕೇಶ್ ಗೌಡ್ರು, ಸೌಮ್ಯ ಎಂಬಿಕೆ, ಸಿ ಆರ್ ಪಿ ಗಳು,ಸಂಘದ ಪ್ರತಿನಿಧಿಗಳು ಸದಸ್ಯರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿರುವ ದರ್ಶನ್  ಪಂಚಾಯಿತಿಯ ಸಿಬ್ಬಂದಿ ವರ್ಗದವರು ಆಗಮಿಸಿದ್ದರು.

ಜಾನಕಿಯವರು ಪ್ರಾರ್ಥನೆಯನ್ನು ಮಾಡಿದರು ಸುಚಿತ್ರ ಸ್ವಾಗತಿಸಿದರು ಒಕ್ಕೂಟದ ಉಪಾಧ್ಯಕ್ಷರು ಕಾರ್ಯದರ್ಶಿ ಅಧಿಕಾರಿಗಳು ಸಭೆಯನ್ನು ಉದ್ಘಾಟಿಸಿದರು ನಾಗೇಶ್ ಸಭೆಯನ್ನುದೇಶಿಸಿ ಮಾತನಾಡಿದರು ಸುಚಿತ್ರ  ವರದಿಯನ್ನು ಮಂಡಿಸಿದರು.

ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಇನ್ನಿತರ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ವಿಜೇತ ರಿಗೆ ಬಹುಮಾನ ವಿತರಣೆಯನ್ನು ಕೂಡ ಮಾಡಲಾಯಿತು.

ಗ್ರಾಮ ಪಂಚಾಯಿತಿಯ ಅಧಿಕಾರಿಗಳಾದ ದರ್ಶನ್,  ಸದಸ್ಯರಾದ ಲೋಕೇಶ್ ಗೌಡ್ರು, ಪವಿತ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮಾತನಾಡಿದರು ಎರಡು ಸಾವಿರದ 18ರಿಂದ 2, ಸಾವಿರದ 24ರ ತನಕ ಒಕ್ಕೂಟದ ವರದಿಯನ್ನು ಮಂಡಿಸಲಾಯಿತು.

ನಾಗೇಶ್  ಸಂಘದ ಬಗ್ಗೆ ಹಾಗೂ ಒಕ್ಕೂಟದ ಬಗ್ಗೆ ಇರುವಂತಹ ಎಲ್ಲಾ ಮಾಹಿತಿಗಳನ್ನು ಮಂಡಿಸಿದರು ಮಧ್ಯಾಹ್ನದ ಉಪಹಾರದೊಂದಿಗೆ ಒಕ್ಕೂಟದ ಸಭೆ ಮುಕ್ತಾಯ ಆಯಿತು

Related posts

ಕಾಡಿನ ಕಾವಲಿಗರ ಕಷ್ಟಗಳಿಗೆ ಗೌರವ ನೀಡಿ – ಸರಕಾರಕ್ಕೆ ಪತ್ರ ಬರೆದ ಮಲೆನಾಡು ರಕ್ಷಣಾ ಸೇನೆ

Bimba Prakashana

ಹೊಸ ವರ್ಷದ ಶುಭಾಶಯಗಳು

Bimba Prakashana

ನೀರಿಗೆ ಬಿದ್ದು ಮಕ್ಕಳು ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More