Blog

ಜಿಲ್ಲಾ ಮಟ್ಟಕ್ಕೆ ಆಯ್ಕೆ ಆದ ಶ್ರೀ ರಂಗನಾಥ ಪ್ರೌಢ ಶಾಲಾ ವಿದ್ಯಾರ್ಥಿಗಳು

ಶ್ರೀರಂಗನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ *ಮಟ್ಟಕ್ಕೆ ಆಯ್ಕೆ.
ಇತ್ತೀಚಿಗೆ ನಡೆದ ಸಕಲೇಶಪುರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಂಗನಾಥ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿ  ಬಾಲಕರ ವಿಭಾಗದಲ್ಲಿ ವಾಲಿಬಾಲ್  ಪ್ರಥಮ  ಖೋ ಖೋ ದ್ವಿತೀಯ. ಹಾಗೂ ಬಾಲಕಿಯರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ ವೈಯಕ್ತಿಕ ವಿಭಾಗದಲ್ಲಿ  ಚಕ್ರ ಎಸೆತ ಪ್ರೇರಣ ಪ್ರಥಮ ಬರ್ಜಿ ಎಸೆತ ಪೂರ್ಣಿಮಾ ದ್ವಿತೀಯ ಉದ್ದ ಜಿಗಿತ ಹರ್ಷಿತ ದ್ವಿತೀಯ ಹಾಗೂ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ .

ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದು , ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತ  ರವರು ವಹಿಸಿಕೊಂಡಿದ್ದರು . 

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಮ್ಮನಹಳ್ಳಿ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಉಷಾ ರಾಣಿ ರವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಸಲಹೆ ನೀಡಿ ಅಭಿನಂದಿಸಿದರು. ಹಾಗೂ ಎಂ.ಪಿ.ಕರುಣಾಕರ್ ಮಾತನಾಡಿ ಶ್ರೀರಂಗನಾಥ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ ಬಾಳ್ಳುಪೇಟೆಗೆ ಮಾದರಿ ಎಂದು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಕೃಷ್ಣ ಹಾರ್ಡವೇರ್ ಮಾಲೀಕರಾದ   ವೆಂಕಟೇಶ್ ಮತ್ತು ಶ್ರೀಮತಿ ನವ್ಯ ವೆಂಕಟೇಶ್,  ಕಾಫಿ ಬೆಳೆಗಾರರಾದ  ಬಿ.ಪಿ ಶಿವ ಕುಮಾರ್ ರವರು ಬಹುಮಾನ ವಿತರಣೆ ಮಾಡಿದರು.ದೈಹಿಕ  ಶಿಕ್ಷಣ ಶಿಕ್ಷಕರಾದ ಅನಿಲ್, ಶಾಲಾ ಶಿಕ್ಷಕರಾದ ಕಮಲಮ್ಮ,ಲಕ್ಷ್ಮಿ ನಾರಾಯಣ್,ಗುರಪ್ಪ ಶೆಟ್ಟಿ ಕರುಣಾಕರ್, ಮಲ್ಲೇಶ್ ,ಸಲ್ಮಾ,ವೆಂಕಟೇಶ್ ಸಿಬ್ಬಂದಿ ವರ್ಗದವರಾದ ರವೀಂದ್ರ  ಹಾಗೂ ಗಿರೀಶ್ ರವರು ಹಾಜರಿದ್ದರು.

                     @

Related posts

ಹೊನ್ನಮ್ಮ ನಿಧನ

Bimba Prakashana

ಆಲೂರು ಹರ್ಷಿತ ಯೋಜನೆಯಿಂದ ತರಬೇತಿ ಶಿಬಿರ

Bimba Prakashana

ಅಕ್ರಮ ನಾಮ ಫಲಕ ತೆರವು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More