Blog

ಬೆಟ್ಟದ ಭೈರವೇಶ್ವರದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿ

ಬೆಟ್ಟದ ಭೈರವೆಶ್ವರ ದೇವಸ್ಥಾನದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಪತ್ರ ಸಮರ  ಅಭಿಯಾನ

        27.03.2026 ರಂದು ಸಕಲೇಶಪುರದ ಐತಿಹಾಸಿಕ ದೇವಸ್ಥಾನ ಬೆಟ್ಟದ ಭೈರವೆಶ್ವರ ದೇವಸ್ಥಾನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುತಿದ್ದ ಛಾಯಾಗ್ರಾಹಕ ಅಸಭ್ಯ ಹಾಗೂ ದುರಹಂಕಾರದ ವರ್ತನೆ ಮತ್ತು ದೇವಸ್ಥಾನದ ಪಾವಿತ್ರತೆಗೆ ಧಕ್ಕೆ ತರುವ ಉದ್ದೇಶದಿಂದ ಸ್ಥಳೀಯ ಭಕ್ತರ ಮೇಲೆ ದಬ್ಬಾಳಿಕೆ ಮಾಡಿದ ಘಟನೆ ತದನಂತರ ಸಾಮಾಜಿಕ ಜಾಲತಾಣದಲ್ಲಿ ಸ್ಥಾನೀಯರದ್ದೇ ತಪ್ಪು ಎಂದು ಬಿಂಬಿಸಿ ಅಮಾಯಕರು ಜೈಲು ಪಾಲಾಗುವಂತೆ ಮಾಡಿದ್ದೂ  ಎಲ್ಲರಿಗೂ ತಿಳಿದಿರುವ ವಿಷಯವಾಗಿದ್ದು 
      ಈ ಮದ್ಯೆ ಹಾಸನ ಜಿಲ್ಲಾಧಿಕಾರಿಗಳು ದೇವಸ್ಥಾನಕ್ಕೆ ಬಂದು ಗ್ರಾಮಸ್ಥರ ಹೇಳಿಕೆ ಪಡೆದು ನಿರ್ಧಾರ ಮಾಡುತ್ತೇನೆ ಎಂದು ಹೇಳಿ ಇತಿಹಾಸ ಪ್ರಸಿದ್ಧ ಮತ್ತು ತನ್ನದೇ ಪಾರಂಪರಿಕ ಹಿನ್ನಲೆ ಹೊಂದಿರುವ ಹೊಯ್ಸಳರ ಕಾಲದಲ್ಲಿ ಜೀರ್ಣೋದ್ದಾರವಾಗಿ  ಪಾಂಡವರ ಕಾಲದ್ದು ಎಂಬ ಕುರುಹುಗಳಿದ್ದರು  ಸಹ ಜಿಲ್ಲಾಧಿಕಾರಿಗಳು ಯಾವುದೇ ಮನ್ನಣೆ ನೀಡದೆ ಚಿತ್ರೀಕರಣಕ್ಕೆ ಹಣ ಪಾವತಿಸಿದರೆ ಅನುಮತಿ ನೀಡಬಹುದು ಎಂಬ ನಿರ್ಧಾರ ಮಾಡಿರುವುದು  ಖಂಡನೀಯ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಹಾನಬಾಳು ಅಧ್ಯಕ್ಷ ರತನ್ ಮರಗುಂದ ಖಂಡಿಸಿದ್ದಾರೆ
      ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿ ಚಿತ್ರೀಕರಣಕ್ಕೆ 4 ಗಂಟೆ ಚಿತ್ರಿಸಲು 5000 ಹಣ ನಿಗಧಿ  ಮಾಡಿರೋದು ಗ್ರಾಮಸ್ಥರು ಮತ್ತು ಮನೆ ದೇವರಾಗಿ ಪೂಜಿಸುವವರ ಭಾವನೆಗೆ ಮನ್ನಣೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ
       ಈ ನಿಟ್ಟಿನಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಗ್ರಮಸ್ಥರು ಮತ್ತು ಬೆಟ್ಟದ ಭೈರವೆಶ್ವರನ್ನ ಮನೆದೇವರಾಗಿ ಪೂಜೆ ಮಾಡುವ ಕುಟುಂಬ ಹಾಗೂ ಸಾಮಾನ್ಯ ಭಕ್ತರಿಂದ ನಾನು ಬೆಟ್ಟದ ಭೈರವೆಶ್ವರ ದೇವರ ಭಕ್ತ ನನ್ನ ಭಾವನೆಗೆ ದಕ್ಕೆ ತರಬೇಡಿ ನನ್ನ ಶ್ರದ್ದೆ, ನನ್ನ ಭಕ್ತಿ ನಮ್ಮ ಅಸ್ಮಿತೆ ಬೆಟ್ಟದ ಭೈರವೆಶ್ವರ ಆದ್ದರಿಂದ ದೇವಸ್ಥಾನದ ಆವರಣದಲ್ಲಿ  ಪ್ರೀ ವೆಡ್ಡಿಂಗ್ ಮತ್ತು ಫೋಟೋ ಶೂಟ್ ಮಾಡಲು ಅವಕಾಶ ನೀಡಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಾವಿರಾರು ಜನ ಭಕ್ತರಿಂದ ಪತ್ರ ರವಾನೆಯಾಗುತ್ತದೆ ಎಂದು ಹಿಂದೂ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷರಾದ ಶೇಖರ್ ಕಬ್ಬಿನಗದ್ದೆ ತಿಳಿಸಿದ್ದಾರೆ.
    ಮುಂದಿನ ಪೀಳಿಗೆಗೂ ದೇವಸ್ಥಾನ ಸಂರಕ್ಷಣೆ ಆಗಬೇಕು ಎಂಬ ಉದ್ದೇಶದಿಂದ ಪತ್ರ ಅಭಿಯಾನ
     ಈ ಸಂದರ್ಭದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆ ಕಾರ್ಯಕರ್ತರಾದ ದೀಪಕ್, ಮಹೇಶ್, ಬೈಕೆರೆ ಬಸವರಾಜು, ಗಣೇಶ್, ಮುಖಂಡರಾದ ದುಷ್ಯಂತ್ ಉಪಸ್ಥಿತಿ ಇದ್ದರು

Related posts

ಮನೆ ಬೇಕೇ

Bimba Prakashana

ಹಾನ್ ಬಾಳ್ ಚಿಕ್ಕಿ 5 ನೇ ದಿನದ ವಿಶೇಷ

Bimba Prakashana

ನಾಳೆ ಸಕಲೇಶಪುರ ಹಳೆ ಬಸ್ ಸ್ಟಾಂಡ್ ರಸ್ತೆಯಲ್ಲಿ ಸಂಚಾರ ನಿಷೇಧ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More