Blog

ಆಲೂರು ವ್ಯವಸಾಯ ಮಾರಾಟ ಸಂಘದ ಸಭೆ

15 ವರ್ಷದಲ್ಲಿ 127 ಕೋಟಿ ರೂ. ಸಾಲ: ಜಗದೀಶ್‌ ಕಬ್ಬಿನಹಳ್ಳಿ

ಆಲೂರು: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 18900 ರೈತರಿಗೆ 127 ಕೋಟಿ ರೂ. ಗಳ ವರೆಗೆ ಸಾಲ ನೀಡಲಾಗಿದೆ. ತನ್ನ ಅಸ್ತಿತ್ವವನ್ನು ಭದ್ರಗೊಳಿಸಿಕೊಂಡಿದೆ ಎಂದು ಅಧ್ಯಕ್ಷ ಜಗದೀಶ್ ಕಬ್ಬಿನಹಳ್ಳಿ ತಿಳಿಸಿದರು.

ಪಟ್ಟಣದಲ್ಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ, ಸಂಘದ 75 ನೆ ವಾರ್ಷಿಕೋತ್ಸವ ಅಮೃತ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ವಿಷ್ಯಾ ಖಂಡದ ಮೊದಲ ಸಹಕಾರಿ ಸಂಘದ ಸಹಕಾರ ಚಳವಳಿಯ ಆದ್ಯ ಪ್ರವರ್ತಕ, ಸ್ವಾತಂತ್ರ ಪೂರ್ವದಲ್ಲಿ ಸಹಕಾರಿ ಆಂದೋಲನಕ್ಕೆ ಕಾರಣಕರ್ತರಾದ, ಧಾರವಾಡ ಜಿಲ್ಲೆ ಕಣಗಿನಹಾಳದ

ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ರವರು ಸಹಕಾರ ಸಂಘಗಳ ಉದಯಕ್ಕೆ ಕಾರಣಕರ್ತರು.

2010-11 ರಲ್ಲಿ ತಾಲ್ಲೂಕಿನ 5800ರೈತರಿಗೆ 13 ಕೋಟಿ ರೂ. ಸಾಲ ನೀಡಲಾಗಿದ್ದ ಪ್ರಮಾಣ ಇಂದು 127 ಕೋಟಿ ರೂ. ಗಳ ವರೆಗೆ ಮುನ್ನುಗ್ಗಿದೆ. ಮೂರು ಬಾರಿ ಸರ್ಕಾರ ಸಾಲ ಮನ್ನಾ ಮಾಡಿದೆ. ಕೇವಲ ಐದು ದಿನಗಳ ಹಿಂದೆ ಸಂಘಕ್ಕೆ 200 ರೈತರು ಶೇರುದಾರರಾಗಿ ನೊಂದಾಯಿಸಿಕೊಂಡಿರುವುದು ಸಂತಸವಾಗಿದೆ.

ಇಂದಿನ ಕಲುಷಿತ ರಾಜಕಾರಣದಲ್ಲಿ ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದು ನಮ್ಮ ಪುಣ್ಯ. ರೈತರ ಜೊತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿರುವುದು ಸಹಕಾರ ಕ್ಷೇತ್ರ. ಮುಂದಿನ ದಿನಗಳಲ್ಲಿ ರೈತರ ಸರ್ವತೋಮುಖ

ಅಭಿವೃದ್ಧಿಗಾಗಿ ಹೇಗೆ ಬೆಳೆದು ನಿಲ್ಲಬೇಕು ಎಂಬುವ ಗುರಿಯನ್ನು ಹೊಂದಲಾಗಿದೆ. 75 ವರ್ಷದಿಂದ ಈವರೆಗೆ ಕಾರ್ಯ ನಿರ್ವಹಿಸಿದ ಅಧ್ಯಕ್ಷರು, ನಿರ್ದೇಶಕರು ಸಂಘದ ಬೆಳವಣಿಗೆಗೆ ತಮ್ಮದೆ ಶ್ರಮ ವಹಿಸಿದ್ದಾರೆ.

ನಾನು ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕನಾದ ನಂತರ ಅಲ್ಲಿನ ಅನುಭವ ಮತ್ತು ಸವಲತ್ತುಗಳನ್ನು ಬಳಸಿಕೊಳ್ಳುವ ಮೂಲಕ ಸಂಘದ ಯಶಸ್ಸು ಸಾಗಿದೆ. ತಾಲ್ಲೂಕಿನ ಪ್ರತಿಯೊಬ್ಬ ರೈತರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕ . ಸಿ.ವಿ. ಲಿಂಗರಾಜು,ಅಜಿತ್ ಚಿಕ್ಕಕಣಗಾಲು,ಉಮೇಶ್ ಮಾತನಾಡಿದರು.

ಇದೆ ಸಂದರ್ಭದಲ್ಲಿ ಸಂಘದ ಶ್ರೇಯಸ್ಸಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಚಂದ್ರಶೆಟ್ಟಿ, ರುದ್ರೇಗೌಡ, ಪುಟ್ಟರಾಜೇಗೌಡ, ಆರ್. ಎಸ್. ನಟರಾಜು. ಸಿ. ಎಂ. ಶ್ರಿನಿವಾಸ್, ಸಿ. ಖ, ಅಶೋಕ್, ತೌಫಿಕ್, ಶಿವಣ್ಣ, ಎಚ್. ಬಿ. ಆನಂದ್, ದೇವರಾಜು, ಕೆ. ಕೆ. ಪವಿತ್ರ, ಎಚ್. ಟಿ. ಆಶಾ, ಮೋಹನಕುಮಾರ್ ಭಾಗವಹಿಸಿದ್ದರು.

ಆಲೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 75 ನೇ ವಾರ್ಷಿಕೋತ್ಸವ ಅಮೃತ ಮಹೋತ್ಸವವನ್ನು ಸಂಘದ ಅಧ್ಯಕ್ಷ ಜಗದೀಶ್ ಕಬ್ಬಿನಹಳ್ಳಿ ರವರು ಉದ್ಘಾಟಿಸಿದರು. ಜಿಲ್ಲಾ ನಿರ್ದೇಶಕ ಜಯರಾಂ, ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.

Related posts

ಬೇಲೂರಿನಲ್ಲಿ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜ ಯೋಗ ಭವನಕ್ಕೆ ಭೂಮಿ ಪೂಜೆ

Bimba Prakashana

ಬೆಟ್ಟದ ಭೈರವೇಶ್ವರದಲ್ಲಿ ಚಿತ್ರೀಕರಣಕ್ಕೆ ನಿಷೇಧ ಹೇರಿ

Bimba Prakashana

ರಸ್ತೆಗೆ ತ್ಯಾಜ್ಯ ಸುರಿದ ಹೋಮ್ ಸ್ಟೇ ಮಾಲಕ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More