ಸಹಕಾರ ಸಂಘಗಳ ಏಳಿಗೆಗೆ
ಎಲ್ಲರೂ ಕೈಜೋಡಿಸಿ: ಆಲೂರು ತಾಲೋಕು ಕೃಷಿ ಪತ್ತಿನ ಸಹಕಾರ ಅಧ್ಯಕ್ಷ ಜಗದೀಶ್
ಆಲೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು
ಅಭಿವದ್ಧಿಯಾದರೆ, ರೈತರ ಅಭಿವದ್ಧಿ ಸಾಧ್ಯ ಆಗುತ್ತದೆ. ಸಂಘಗಳಲ್ಲಿ ರಾಜಕೀಯ ಬೆರೆಸುವ ಬದಲು ರಾಜಕೀಯ ಮುಕ್ತವಾಗಿ ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಎಚ್‌ಡಿಸಿಸಿ ಬ್ಯಾಂಕ್ ನ ಹಾಸನ ಜಿಲ್ಲಾ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ ಅಭಿಪ್ರಾಯಪಟ್ಟರು. ತಾಲೂಕಿನ ಬೈರಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ಮುಕ್ತವಾಗಿ ಕೆಲಸ ಮಾಡಬೇಕು. ಸಹಕಾರ ಸಂಘಗಳ ಉಳಿವಿನಲ್ಲಿ ರೈತರ ಹಿತ ಮತ್ತು ಬಲವರ್ಧನೆಯು ಅಡಗಿದೆ. ಹಾಗಾಗಿ, ಪಕ್ಷಾತೀತವಾಗಿ ಸಹಕಾರ ಕ್ಷೇತ್ರವನ್ನು ಮುನ್ನಡೆಸಲು ಎಲ್ಲಾ ರಾಜಕಾರಣಿ ಪಕ್ಷಬೇಧ ಮರೆತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಬೈರಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಬೇಸಾಯ ಚಟುವಟಿಕೆಗಳಿಗೆ ಬೇಕಾದ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ತಿರುವ ಸಹಕಾರ ಸಂಘಗಳು ಉಳಿದು ಬೆಳೆಯಬೇಕಾದರೆ ಸೇವಾ ಭಾವನೆಯುಳ್ಳ ಆಡಳಿತ ಮಂಡಳಿ ಮತ್ತು ನೌಕರರ ಪ್ರಾಮಾಣಿಕ ದುಡಿಮೆಯಿಂದ ಮಾತ್ರ ಸ್ವ ಎಂದರು. ಈ ವರ್ಷ ಬರಗಾಲ ಆವರಿಸಿದ್ದು, ರೈತರು ಬಿ ಮಾಡಿದ ಬೆಳೆ ಸಂಪೂರ್ಣ ನಾಶವಾಗಿ ರೈತ ನಷ್ಟ ಆಗಿದೆ ಉದ್ದೇಶದಿಂದ ಸಹಕಾರಿ ಸಂಘಗಳಿಗೆ ಶೇರುದಾರರಿಗೆ ಹಾಗೂ ರೈತರಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶಿವಣ್ಣ ಸದಸ್ಯರುಗಳಾದ ಸ್ವಾಮಿ ಗೌಡ.ಬೈರಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ್. ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾದ ಆಶಾರಾಣಿ. ಎಸ್ ವಿ ಕೃಷ್ಣೇಗೌಡ. ಚಂದ್ರಶೇಖರ್. ಗಿರೀಶ್ ವೆಂಕಟೇಶ್. ಶಾರದಮ್ಮ ಧರ್ಮಪ್ಪ. ಪಾಲಾಕ್ಷ. ರಾಘವೇಂದ್ರ ಮೇಲ್ವಿಚಾರಕರು ಕೇಂದ್ರ ಬ್ಯಾಂಕ್, ಆಲೂರು. ಪಂಚಾಯಿತಿ ಸದಸ್ಯರುಗಳಾದ ರುದ್ರೇಗೌಡ. ಗಣೇಶ್. ನಂಜೇಶ್. ಶಿವೇಗೌಡ. ಮಧು. ಎಲ್ಲಾ ಶೇರುದಾರರು ಸಾರ್ವಜನಿಕರು ಇದ್ದರು.
previous post
next post
