ನಾಗೇಶ್ ಎಂ ಎಚ್ ಮಾಗೇರಿ.
ಪ್ರಜಾ ಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೇಗೌಡ ಭರವಸೆ
ಸಕಲೇಶಪುರ: ಸಕಲೇಶಪುರದಲ್ಲಿ ನಾವು ಹುಟ್ಟಬೇಕಿತ್ತು ಅಲ್ಲಿ ಎಲ್ಲರೂ ಶ್ರೀಮಂತರು ಎಂದು ತಿಳಿಸಿದ್ದೆ. ಇಲ್ಲಿ ಬಂದು ನೋಡಿದರೆ ರೈತರು ಜನಸಾಮಾನ್ಯರ ಪರಿಸ್ಥಿತಿ ಅರ್ಥ ಆಗಿದೆ. ಎ೦ದು ಅಬಕಾರಿ ಸಚಿವ ಹಾಗು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ ಶಿವಲಿಂಗೇಗೌಡ ಹೇಳಿದರು.
ಸಕಲೇಶಪುರ ತಾಲೋಕು ಆಡಳಿತ ಸೌದ ಅವರಣದಲ್ಲಿ ಪ್ರಜಾ ಸೇವಾ ಆಂದೋಲನ ಸಭೆ ನಡೆಸಿ ಮಾತನಾಡಿದ ಅವರು ಪ್ರಜಾ ಸೇವಾ ಆಂದೋಲನ ಕಾನೂನು ಜಾರಿಗೆ ತಂದು ಅದನ್ನು ಕಾನೂನಾಗಿ ಮಾರ್ಪಡಿಸಿ ಈ ರಾಜ್ಯಕ್ಕೆ ಕಾನೂನು ಜಾರಿ ಮಾಡಿದಂತಹ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಜ್ಞಾಪಿಸಿಕೊಳ್ಳುಬೇಕಾಗುತ್ತದೆ. ಈ ಕಾರ್ಯಕ್ರಮ ಭಾರತ ದೇಶದಲ್ಲೇ ಮಾತನ ಕಾರ್ಯಕ್ರಮ ಎಂದರು.
ಯಾರೋ ಬಂದಿದ್ರು ಅರ್ಜಿ ಇಸ್ಕೊಂಡಿದ್ವಿ. ಕೇಳಿದ್ವಿ. ಹೋದ್ವಿ ಅಂತ ಆಗಬಾರದು ಕಾನೂನಿನ್ನು ಇಂತಹಾ ಯಾವುದೇ ಸಮಸ್ಯೆ ಬರೋದಿಲ್ಲ. ಅಧಿಕಾರಿಗಳು ಬಗೆಹರಿಸುತ್ತಾರೆ. ಅಧಿಕಾರಿಗಳಲ್ಲಿ ವಿನಂತಿಸುತ್ತೇನೆ. ಪ್ರಜೆಗಳೇ ಪ್ರಜಾಪ್ರಭುತ್ವದ ಬೆನ್ನೆಲುಬು ಪ್ರಜೆಗಳಿಂದಲೇ ಪ್ರಜಾಪ್ರಭುತ್ವ ಆಗಿರತಕ್ಕದ್ದು ರಾಜ್ಯ ಮತ್ತು ರಾಷ್ಟ್ರ ಆಡಳಿತ ವ್ಯವಸ್ಥೆ. ಯಾವ ಪ್ರಜೆಗಳಿಂದ ಅಧಿಕಾರಕ್ಕೆ ಬಂದಿದ್ದೇವೋ ಆ ಸಮಸ್ಯೆಗಳನ್ನು ಬಗೆಹರಿಸಬೇಕು. ಪ್ರಜೆಗಳೇ ನಮ್ಮ ಆಧಾರ ಸ್ಥಂಬಗಳು ಪ್ರಜಾಪ್ರಭುತ್ವದ ಸಂವಿಧಾನ ಡಾ.ಅಂಬೇಡ್ಕರ್ ಬರೆದಿರುವುದು. ಸಂವಿಧಾನದ ಚೌಕಟ್ಟಿನಲ್ಲಿ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮಬಾಳು ಎಂಬ ದ್ಯೇಯೋದ್ದೇಶ ಇಟ್ಟುಕೊಂಡು ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡಿದ್ದೆವೆ. ಇದರ ಮೂಲ ಉದ್ದೇಶ ಪ್ರಜೆಗಳ ಸಮಸ್ಯೆ ಬಗೆಹರಿಸೋದು. ಈ ಜನ ಇಡೀ ಭಾರತ ಕೇಳುತ್ತಿಲ್ಲ. ದೈನಂದಿನ ವ್ಯವಹಾರಗಳಲ್ಲಿ ಬರುವಂತಹ ಅನೇಕ ಕಾನೂನು ಸಮಸ್ಯೆ ನಿವಾರಣೆಗೆ ಬರುತ್ತಾರೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೆಲಸ ಮಾಡದಿದ್ರೆ ಅಪಚಾರ ಎಸಗಿದಂತೆ ಪ್ರಜೆಗಳ ಸೌಕ್ಯ ಕಾಪಾಡಲು ಹಿತಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಅದಕ್ರೋಸ್ಟರ್ DK ಶಿವಕುಮಾರ್ ಮುಖ್ಯಮಂತ್ರಿಗಳು ಪ್ರಜಾ ಸೇವೆ ಇಲಾಖೆ ಮಾಡಿ ಜನ ಸಾಮಾನ್ಯರ ಕೆಲಸ ಬಗ್ಗೆ ಹರಿಸುವ ಕೆಲಸ ಕೂಡಲೇ ಮಾಡಿ ಎಂದರು.
ಮಹಾತ್ಮ ಗಾಂದಿ ಗ್ರಾಮ ಸ್ವರಾಜ್ಯದ ಕನಸು ಅಂಬೇಡ್ಕರ್ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ನ್ಯಾಯ ಸಿಗುವಂತಾಗಬೇಕು ಎನ್ನುವ ಲಿಖಿತ ಸಂವಿಧಾನ ಕೊಟ್ಟು ಹೋಗಿದ್ದಾರೆ. ಕಾನೂನು ಚೌಕಟ್ಟನ ಡಿಯಲ್ಲಿ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ.
ಎಲ್ಲಾ ಕಡೆ ಬರಬಂದಿರುವ ಹದಗೆಟ್ಟ ಪರಿಸ್ಥಿತಿ ವೀಕ್ಷಿಸಲು ಮುಖ್ಯಮಂತ್ರಿಗಳೇ ಭಾನುವಾರ ಸಕಲೇಶಪುರಕ್ಕೆ ಬರುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯಿಂದ ರೈತರಿಗೆ ಏನೇನು ಅನ್ಯಾಯ ಆಗಬಹುದು ಏನೇನು ಒಳ್ಳೆಯದಾಗಬಹುದು ಇದೆಲ್ಲವನ್ನು ವಿಮರ್ಶೆ ಮಾಡಲಿಕ್ಕೆ ಬರುತ್ತಿದ್ದಾರೆ. ಬರಗಾಲ ಬಂದಿರುವ ಸಂದರ್ಭ ಸಕಲೇಶಪುರಕ್ಕೆ ಬರ ಇಲ್ಲ ಅಂತ ನಾವೆಲ್ಲ ಈ ಕಡೆ ನೋಡುತ್ತಾ ಇದ್ದಿ ಎಲ್ಲಿ ಇಲ್ಲದಿದ್ರೂ ಸಕಲೇಶಪುರಕ್ಕೆ ಮಳೆ ಬರುತ್ತಾ ಇತ್ತು. ಆದರೆ ಪರಿಸರ ದೈವಲೀಲೆ ಇಲ್ಲಿ ಸಹ ಸರಿಯಾಗಿ ಮಳೆ ಇಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಇಲ್ಲಿ ಅತಿ ಹೆಚ್ಚು ಮಳೆ ಬಿದ್ರೇನೇ ಬೆಳೆ. ಇಲ್ಲಿಯ ಲಕ್ಷಣವೇ ಇದು. ನಮ್ಮ ಕಡೆ ಅಡ್ಡ ಬಡ್ಡ ಮಳೆ ಬಂದ್ರೂ ನಡೆಯುತ್ತದೆ ಆದರೆ ಇಲ್ಲಿ ಮಳೆ ಇಲ್ಲದಿದ್ರೆ ಬೆಳೆಇಲ್ಲ. ನಾನು ಮಂತ್ರಿ ಆದ ನಂತರ ಶಾಸಕರು. ಡಿ.ಸಿ. ಅಧಿಕಾರಿಗಳ ಜೊತೆ ಸಕಲೇಶಪುರ. ಆಲೂರು ಬೇಲೂರು. ಎಲ್ಲಾ ಪರಿಶೀಲನೆ ಮಾಡಿ ವರದಿ ಸಲ್ಲಿಸಿದ್ದೇವೆ. ಮುಖಂಡರ ಜೊತೆ ಸೇರಿ ವರದಿ. ನೀಡಿದ್ದೇನೆ. ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಇಡಬೇಕು ಕೇಂದ್ರ ರಾಜ್ಯಕ್ಕೆ ನೆರವಾಗಬೇಕು ರಾಜ್ಯ ಕೇಂದ್ರಕ್ಕೆ ನೆರವಾಗಬೇಕು ಇದು ಒಕ್ಕೂಟ ವ್ಯವಸ್ಥೆ. ವಿಧಾನ ಸಭೆಯಲ್ಲಿ ಸಕಲೇಶಪುರ ವಿಷಯ ಚರ್ಚೆ ಮಾಡುತ್ತೇನೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ
ಸಕಲೇಶಪುರ ತಾಲೋಕನ್ನು ಬರಪೀಡಿತ ಪಟ್ಟಿಗೆ ಸೇರಿಸಬೇಕು ಕಾಪಿ ಬೆಳೆಯಲು ನೀರಿಲ್ಲದೆ ಮಳೆಯೂ ಬಾರದೆ ನೀರೆಲ್ಲ ಬತ್ತಿಹೋಗಿದೆ. ಕೆರೆಗಳಲ್ಲೂ ನೀರಿಲ್ಲ ಹೊಳೆಯಲ್ಲೂ ನೀರಿಲ್ಲ. ನೀರಿಲ್ಲದೆ ಕಾಪಿ ಪಸಲು ಒಣಗಿ ಹೋಗುತ್ತದೆ. ಬತ್ತ ಬೆಳೆಯುವ ರೈತರು ಆನೆ ಸಮಸ್ಯೆ. ಕಾಡು ಕೋಣ ಸಮಸ್ಯೆ. ಮತ್ತು ಹಂದಿಗಳ ಕಾಟದಿಂದ 50% ರೈತರು ಒತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ.
ಎತ್ತಿನಹೊಳೆ ಮತ್ತು ಗೊರೂರು ಗೆ ನೀರು ಕೊಡುವಂತಹಾ ನಮ್ಮ ಭಾಗದ ಜನತೆ ನೀರಿಲ್ಲದೆ ಕಂಗಾಲಾಗಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಕಲೇಶಪುರ ತಾಲೋಕನ್ನೂ ಸಹ ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲು ಮನವಿ ಮಾಡಿದರು.
ಜಮೀನು ಸಮಸ್ಯೆ. ಮನೆ. ಇಂತಹಾ ಹಲವು ಸಮಸ್ಯೆಗಳಿದ್ದು ಹಲವಾರು ದೂರುದಾರರಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಸರ್ವ ಅಧಿಕಾರಿಗಳ ವಿರುದ್ಧ ನಾಗರೀಕರು ದೂರು ಆಕ್ರೋಶ ಭರಿತವಾಗಿತ್ತು. ಸರಿಯಾಗಿ ಕೆಲಸ ನಿರ್ವಹಿಸಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಗಡವು ನೀಡಿ ಆಗದ ಕೆಲಸ ಇದ್ದರೆ ಮತ್ತೊಮ್ಮೆ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿಗಳು . ಉಪ ವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ಹಲವು ಉನ್ನತ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಸಭೆಯಲ್ಲಿ ಹಲವು ಅಧಿಕಾರಿಗಳು ಮನವಿದಾರರು. ನಾಗರೀಕರು ಪತ್ರಕರ್ತರು ಉಪಸ್ಥಿತರಿದ್ದರು.
