ನಾಗೇಶ್ ಎಂ ಎಚ್ ಮಾಗೇರಿ
ಕಾಡು ಕೃಷಿಕರ ಶಾಲೆ 20 ರ ಉದ್ಘಾಟನೆ ನೆರವೇರಿಸಿದ
*ಮಾನ್ಯ ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ.
ಸಕಲೇಶಪುರ ತಾಲೂಕಿನ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿ ಗದ್ದೆ ಗ್ರಾಮದಲ್ಲಿ ಪುಟ್ಟಸ್ವಾಮಿ ಗೌಡ ಪೊನ್ನಮ್ಮ ಹಾಗೂ ಅವರ ಮಗನಾದ ತೇಜಸ್ ಗೌಡ ರವರ
ದೊಡ್ಮನೆ ಫಾರ್ಮದಲ್ಲಿ “ಕಾಡು ಕೃಷಿಕರ ಶಾಲೆ” 20 ರ ಉದ್ಘಾಟನೆ ಮಾಡುವ ಮೂಲಕ ಮಾನ್ಯ ಜಿಲ್ಲಾಧಿಕಾರಿಗಳಾದ ಲತಾ ಕುಮಾರಿ ಚಾಲನೆ ನೀಡಿದರು..
ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ಯಾವುದೇ ರಾಸಾಯನಿಕ ಬಳಸದೆ ಹಣ್ಣಿನ ಗಿಡಗಳು ಏಲಕ್ಕಿ, ಶುಂಠಿ ಕಾಫಿ ಮೆಣಸು ಬಾಳೆ ಅಡಿಕೆ ಸೇರಿದಂತೆ ವಿವಿಧ ಬಗೆಯ ಮರ ಗಿಡಗಳನ್ನು ಬೆಳೆದಿರುವ ಕೃಷಿ ಫಾರ್ಮವನ್ನು ವೀಕ್ಷಣೆ ಮಾಡುವ ಮೂಲಕ ಕೃಷಿ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ಎಲ್ಲಾ ಗಿಡಮರಗಳನ್ನು ಪರಿಚಯಿಸುತ್ತ ಜಿಲ್ಲಾ ಕೃಷಿ ನಿರ್ದೇಶಕರಾದ ರಮೇಶ್ ಕುಮಾರ್ ಹಾಗೂ ಕೃಷಿ ನಿರ್ದೇಶಕರಾದ ಯು ಎಂ ಪ್ರಕಾಶ್ ಕುಮಾರ್, ಎಸಳೂರು ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲೆ ರಾಜ್ಯಗಳಿಂದ ಬಂದಿರುವ ಕಾಡು ಕೃಷಿಕರ ತಜ್ಞರೊಂದಿಗೆ ದೊಡ್ಮನೆ ಫಾರ್ಮನ ಒಂದು ಸುತ್ತು ಬಂದರು ನಂತರ ವಿವಿಧ ಜಿಲ್ಲೆ ಹಾಗೂ ತಾಲೂಕುಗಳಿಂದ ಆಗಮಿಸಿದ ಕಾಡು ಕೃಷಿಕರ ಶಾಲೆ 1 ರಿಂದ 20 ರವರಗಿನ ಕೃಷಿ ತಜ್ಞರ ಪರಿಚಯ ಹಾಗೂ ಅವರ ಕಾಡು ಕೃಷಿಯ ಬಗ್ಗೆ ಪರಿಚಯಿಸಿಕೊಂಡು ವೇದಿಕೆ ಕಾರ್ಯಕ್ರಮ ವನ್ನು ಉದ್ಘಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಿಜವಾದ ವಿಜ್ಞಾನಿ ನಿಜವಾದ ಪದವೀಧರ ಯಾರಿದ್ದಾರೆ ಎಂದರೆ ಅಲ್ಲಿ ಕೃಷಿ ಮಾಡುವವರು ಭೂಮಿ ಮೇಲೆ ಭೂತಾಯಿ ಸೇವೆ ಮಾಡುವುದರಲ್ಲಿ ತೊಡಗಿಸಿಕೊಂಡವರಲ್ಲಿ ಅವರೇ ನಿಜವಾದ ವಿಜ್ಞಾನಿ,
ಅಂಥದನ್ನು ಅರ್ಥ ಮಾಡಿಕೊಂಡು ಇದಕ್ಕೆ ಪರಿಹಾರ ಹುಡುಕಲೇಬೇಕು ಎಂದು ಹೊರಟಿದ್ದಾರೆ ಇದು ಒಂದು ಪ್ರಯತ್ನ. ಮೊದಲನೇ ಶಾಲೆಯಿಂದ ಇಪ್ಪತ್ತನೆ ಶಾಲೆ ವರೆಗೆ ಬಂದಿದ್ದಾರೆ ಒಂದು ಹೊಸ ಅಧ್ಯಾಯ ಕೃಷಿ ಕ್ಷೇತ್ರದಲ್ಲಿ ನಡೆಯುತ್ತಿದೆ ಹೇಗೆ ಎಂದರೆ ಕಾಡು ಕೃಷಿ ತಜ್ಞರಾದ ಸೋಮಶೇಖರ್ ಅವರಲ್ಲಿ ವಿಚಾರಿಸಿದಾಗ ಒಂದು ದಟ್ಟವಾದ ಹಸಿರು ಕಾಡಿರುತ್ತದೆ ಅಲ್ಲಿ ಯಾರು ಬೆಳೆಸಿದ್ದಾರೆ ಅಲ್ಲಿ ಕೂಡ ಕೀಟಾಣು ಗಳು ಇಲ್ಲವಾ, ಕಳೆ ಇಲ್ಲವಾ, ಆದರೂ ಅಲ್ಲಿ ಅಷ್ಟೊಂದು ಪರಿಸರ ಇರುತ್ತದೆ, ಅಲ್ಲಿ ಕೂಡ ವಿಜ್ಞಾನ ಇದೆ. ಜೊತೆಯಲ್ಲಿ ಬಾಳುವುದು ಸಂದೇಶ ಇಟ್ಟುಕೊಂಡು ಕಾಡು ಇರುತ್ತದೆ.
ಹಾಗೆ ನಮ್ಮ ಕೃಷಿಯಲ್ಲೂ ಹೇಗಿರಬೇಕು ಎಂದರೆ ಪರಿಸರ ಸ್ನೇಹಿಯಾಗಿರಬೇಕು ಮತ್ತೆ ಯಾವುದೇ ಒಂದು ಹೊರಗಿನ ರಾಸಾಯನಿಕ ಗಳನ್ನು ನಡೆಯುವಂತದ್ದು ಅದ್ಭುತವೇ ಸರಿ ನಮಗೂ ಅನಿಸುತ್ತದೆ ಇದು ಸಾಧ್ಯನಾ ಕೃಷಿಕ ಜೀವನ ಮಾಡಬಹುದಾ ಸಣ್ಣ ಕೃಷಿಕ ಎರಡು ಮೂರು ಎಕರೆ ಭೂಮಿ ಇಟ್ಟುಕೊಂಡು ಸಂಸಾರ ನಿಭಾಯಿಸಬಹುದಾ ಸಣ್ಣ ಕೃಷಿಕ ಎರಡು ಮೂರು ಎಕರೆ ಭೂಮಿ ಇಟ್ಟುಕೊಂಡು ಸಂಸಾರ ನಿಭಾಯಿಸಬಹುದಾ ಏಕೆಂದರೆ ಪ್ರತಿಯೊಬ್ಬರೂ ಬಯಸುವುದು ಕೊನೆಗೆ ಉದ್ಯಮ ಹಣ ಗಳಿಸಬೇಕು ಲಾಭ ಬೇಕು, ಜೀವನ ನಡೆಸಬೇಕು, ಹಾಗೆ ಕೆಲವೊಂದು ಕಡೆ ಸರ್ಕಾರಿ ಕೆಲಸ ಇರುತ್ತದೆ ಇನ್ನೊಂದು ಕಡೆ ಉದ್ಯಮ ಇರುತ್ತದೆ ಎಲ್ಲ ಇದ್ದುಕೊಂಡು ನಗರದಿಂದ ಬಂದು ಕೃಷಿ ಪ್ಯಾಶನ್ ಗಾಗಿ ಇನ್ವೆಸ್ಟ್ ಮಾಡಿ ಪ್ರಯೋಗಗಳನ್ನು ಮಾಡುತ್ತಾರೆ. ಅದು ಬೇರೆ ನಿಜವಾಗಲೂ ಅದರ ಮೇಲೆ ನಿರ್ಭರವಾಗಿ ಆ ಭೂಮಿತಾಯಿಂದ ಬದುಕು ಕಟ್ಟಿಕೊಳ್ಳುವುದು ಅದು ಬೇರೆ ನಾವು ಏನು ಕೃಷಿ ಮಾಡುತ್ತೇವೆ ಅದು ಬೇರೆ ಆ ಕೃಷಿಗೊಂದು ಮೌಲ್ಯಾದರಿತ ಒಂದು ಉದ್ಯಮವನ್ನು ನಾವು ನಿರ್ಮಿಸಬೇಕು, ಉದಾಹರಣೆಗೆ ನುಗ್ಗೆ ಕೃಷಿ ಮಾಡುತ್ತೇವೆ ಎಂದರೆ ನುಗ್ಗೆಯ ಪೌಡರ್ , ಕಾಫಿ ಪೌಡರ್, ಅರಿಶಿನ, ಶುಂಠಿ ಪೌಡರ್ ತಯಾರಿಸಿ ಎಕ್ಸ್ ಪೋರ್ಟ್ ಮಾಡುವುದು ಅಡಿಕೆ ಕ್ಯೂರಿಂಗ್ ಮಾಡುವುದು ಹೀಗೆ ಪರಿಶ್ರಮ ಹಾಕಿ ಸ್ವತಹ ಗೊತ್ತಾಯ್ತು ಸೇವೆ ಮಾಡುತ್ತಾರೋ ಅವರಿಗೆ ಯಾವ ಉದ್ಯಮದಲ್ಲೂ ದೊರಕದ ಭೂಮಿಗೆ ಒಂದು ಬೀಜ ಹಾಕಿ ಸಾವಿರ ಬೀಜ ತೆಗೆದಿರುವ ಕೃಷಿಯ ಬಿಟ್ಟು ಯಾವುದೇ ಉದ್ಯಮವು ಇಲ್ಲ ಯಾಕೆಂದರೆ ಉದಾಹರಣೆಗೆ ನಾವು ಒಂದು ರಾಗಿ ಕಾಳು ಅಥವಾ ಜೋಳದ ಕಾಳಿನಿಂದ ಸಾವಿರಾರು ಕಾಲಗಳು ಉದ್ಭವಿಸುತ್ತದೆ ಪ್ರಕೃತಿಯಲ್ಲಿ ಯಾರೂ ಕೊಡದ ಒಂದು ಕಾಳು ಹಾಕಿದರೆ ಪುನಹ ವಾಪಸ್ ಸಾವಿರಾರು ಕಾಳುಗಳನ್ನು ಭೂ ತಾಯಿ ಕೊಡುತಾಳೆ ಹೀಗೆ ನಾವು ಮಾಡುವ ಒಂದು ಒಳ್ಳೆಯ ಕೆಲಸ ಅಷ್ಟು ಪ್ರತಿಫಲ ಬರುತ್ತದೆ ಇದು ಕೃಷಿಯಲ್ಲಿ ಮಾತ್ರ ಸಾಧ್ಯ ಇದು ಯಾವ ಉದ್ಯಮದಲ್ಲೂ ಸಾಧ್ಯವಿಲ್ಲ ಎಂದರು. ಈ ಸಂದರ್ಭದಲ್ಲಿ ಕಾಡು ಕೃಷಿಕ ಸಂಸ್ಥಾಪಕರಾದ ಡಾ. ಮಳಲಿ ಗೌಡ, ಹಾಸನ ಕೃಷಿ ಇಲಾಖೆ ನಿರ್ದೇಶಕರಾದ ರಮೇಶ್ ಕುಮಾರ್, ತಾಲೂಕು ಸಹಾಯಕ ನಿರ್ದೇಶಕರಾದ ಯು ಎಂ ಪ್ರಕಾಶ್ ಕುಮಾರ್ ಎಸಳೂರು ಅರಣ್ಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಆಡಳಿತ ಅಧಿಕಾರಿಗಳಾದ ಮನು, ನಿತಿನ್ ಹಾಗೂ ಆಂಧ್ರ ಪ್ರದೇಶ್ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ಜಿಲ್ಲೆ ಗಳಿಂದ ಆಗಮಿಸಿದ ಕಾಡುಕೃಷಿ ತಜ್ಞರು ಇತರರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

