Blog

ಬೇಲೂರುನಲ್ಲಿ ಪತ್ರಕರ್ತರಿಗೆ ಸನ್ಮಾನ

ಸಮಾಜಕ್ಕೆ ಪತ್ರಕರ್ತರ ಪಾತ್ರ ಬಹಳ ಮುಖ್ಯ:ಅದ್ಯಕ್ಷ ನರಸಿಂಹಸ್ವಾಮಿ ಸಲಹೆ.

  ಬೇಲೂರು : ಶ್ರೀ ಲಕ್ಷ್ಮಿ ಮಂಗಳವಾದ್ಯ ಮತ್ತು ಸಂಗೀತಾ ಕಲಾ ಟ್ರಸ್ಟ್ ವತಿಯಿಂದ ವಿಶ್ವ ಕ್ಷೌರಿಕ ದಿನಾಚರಣೆ ಅಂಗವಾಗಿ ಪತ್ರಕರ್ತರಿಗೆ ಸನ್ಮಾನಿಸಲಾಯಿತು.

ಸೆಪ್ಟೆಂಬರ್ 16 ವಿಶ್ವ ಕ್ಷೌರಿಕರ ದಿನಾಚರಣೆಯ ಅಂಗವಾಗಿ ಬೇಲೂರಿನ ಕ್ಷೌರಿಕ ಸಂಘವು ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಮಾಡುತ್ತಿರುವವರಿಗೆ ಹಾಗೂ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಾ ಬಂದಿರುವ ಶ್ರೀ ಲಕ್ಷ್ಮಿ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನ ಅದ್ಯಕ್ಷರಾದ ಶ್ರೀ ನರಸಿಂಹ ಹಾಗೂ ಸಂಘದ ಪದಾಧಿಕಾರಿಗಳಿಂದ ಪತ್ರಿಕಾ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿರುವ ಮಾಧ್ಯಮ ಪತ್ರಕರ್ತರ ಸಂಘದ ಶ್ರೀ ಸೋಮಶೇಖರ್ ವೈ.ಎಸ್ ಹಾಗೂ ಶ್ರೀ ಅರುಣ್ ರಜಪೂತ್ ರವರನ್ನು ಗೌರವಿಸಿ ಸನ್ಮಾನಿಸಿದರು.


1906 ರಲ್ಲಿ ಫ್ರಾನ್ಸ್ ದೇಶದಲ್ಲಿ ಆರಂಭವಾದ ವಿಶ್ವ ಕ್ಷೌರಿಕರ ದಿನಾಚರಣೆ ಇಂದಿನವೆರೆಗೂ ಕೂಡ ಎಲ್ಲಾ ಕಡೆ ಆಚರಿಸುತ್ತಾ ಬಂದಿದ್ದು ಇದಕ್ಕೆ ನಮ್ಮ ಸಂಘದವರೂ ಕೂಡ  ಕಾರ್ಯ ಕ್ರಮದ ಯಶಸ್ಸಿಗೆ ಕೈ ಜೋಡಿಸುತ್ತಾ ಬರುತ್ತಿದ್ದಾರೆ ಎಂದ ಸಂಘದ ಅದ್ಯಕ್ಷ ನರಸಿಂಹರವರು ಪ್ರಾಮಾಣಿಕವಾಗಿ ಹಾಗೂ ನಿಷ್ಠಾವಂತರಾಗಿ ಪತ್ರಿಕಾರಂಗದಲ್ಲಿ ಕೆಲಸ ನಿರ್ವಹಿಸುತ್ತಾ ಬಂದಿರುವ ಸೋಮಶೇಖರ್ ಹಾಗೂ ಅರುಣ್ ರಜಪೂತ್ ರವರನ್ನು ಸನ್ಮಾನಿಸಲು ನಮಗೂ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ನಮ್ಮ ಟ್ರಸ್ಟ್ ವತಿಯಿಂದ ಕಳೆದ ಹತ್ತಾರು ವರ್ಷದಿಂದ ಸರ್ಕಾರಿ ಶಾಲೆಗಳಿಗೆ ಪಠ್ಯ ಪುಸ್ತಕದ ನೀಡುವ ಜೊತೆಗೆ,ಉಚಿತವಾಗಿ ಸಂಗೀತ ಶಾಲೆಯನ್ನು ಆರಂಬಿಸಿದ್ದೇವೆ.ಯಾವುದೆ ಒಂದು ಕೆಲಸ ಯಶಸ್ವಿಯಾಗಬೇಕಾದರೆ ಮತ್ತು ಸಣ್ಣ ಸಮಾಜಗಳು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಾದ್ಯಮದ ಪಾತ್ರ ಬಹಳ ಮುಖ್ಯ ಎಂದರು.


ಕಾರ್ಯಕ್ರಮದಲ್ಲಿ,ಟ್ರಸ್ಟ್ ಅದ್ಯಕ್ಷರಾದ ನರಸಿಂಹಸ್ವಾಮಿ,ನಿರ್ದೇಶಕರಾದ ಎಸ್.ಆರ್.ಚಂದ್ರು,ಮೋಹನ್,ಬಿ.ಕೆ.ವಿಷ್ಣುಪ್ರಸಾದ್,ಮುಕಂಡರಾದ ಬಿ.ವಿ.ಚಂದ್ರು, ಮಾಧ್ಯಮ ಪತ್ರಕರ್ತರ ಸಂಘದ ಅದ್ಯಕ್ಷರಾದ ಬಸವರಾಜ್,ಪ್ರ ಕಾರ್ಯದರ್ಶಿ ಮಹ್ಮದ್ ಅಬ್ರಾರ್,ಕಾರ್ತಿಕ್ ,ಸುನಿಲ್ ,ಸುರೇಶ್, ಕರವೇ ತಾಲ್ಲೂಕು ಯುವ ಅದ್ಯಕ್ಷ ಸತೀಶ್, ಸೇರಿದಂತೆ ಇನ್ನಿತರರು ಇದ್ದರು.

Related posts

ಹಳೇ ಬೀಡಿನಲ್ಲಿ ಪಲ್ಸ್ ಪೋಲಿಯೋ

Bimba Prakashana

ನ್ಯಾಯ ಬೆಲೆ ಅಂಗಡಿ ಮಾಲೀಕರ ವಿರುದ್ಧ ಅಧಿಕಾರಿಗಳು ಕ್ರಮ ಕೈ ಗೊಳ್ಳಿ – ದೇಶಾಣಿ ಆನಂದ್

Bimba Prakashana

ಏಪ್ರಿಲ್ 9 ಗುರುವಾರ ಸಕಲೇಶಪುರದಲ್ಲಿ ವಿಶೇಷ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More