Blog

ಅರೇಕೆರೆ ಸರ್ಕಾರಿ ಹಿರಿಯ ಹಿ ಪ್ರಾ ಶಾಲೆಯಲ್ಲಿ ಒಂದೇ ಶೌಚಾಲಯ

ನಾಗೇಶ್ ಎಂ ಎಚ್ ಮಾಗೇರಿ



ಅರೆಕೆರೆ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಒಂದೇ ಶೌಚಾಲಯ

ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರೆಕೆರೆ ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯ ಇಲ್ಲದೆ ಪರದಾಡುವಂತಾಗಿದೆ ಶಾಲೆಯ
ಒಂದೇ ಶೌಚಾಲಯದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು,
ಒಂದೇ ಶೌಚಾಲಯವನ್ನು  ಅವಲಂಬಿಸುವಂತಹ  ಪರಿಸ್ಥಿತಿ ಎದುರಾಗಿದ್ದು, ಅದಕ್ಕೂ ಕೂಡ ಸರಿಯಾದ ನೀರಿನ ವ್ಯವಸ್ಥೆ ಕಲ್ಪಿಸದೆ ಇರುವ  ವಿಷಯ ತಿಳಿದ ಡಿಎಸ್ಎಸ್ ಜಿಲ್ಲಾ ಸಂಚಾಲಕರಾದ ನಾಗರಾಜ್, ಹಾಗೂ ತಾಲೂಕು ಸಂಚಾಲಕರಾದ ಧರ್ಮರಾಜ್ ಪದಾಧಿಕಾರಿಗಳು ಶಾಲೆಗೆ  ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ಆವರಣದಲ್ಲಿ ಗಿಡಗಂಟಿಗಳಿಂದ ಕೂಡಿದ್ದು,   ಅಲ್ಲಲ್ಲಿ ಜಲ್ಲಿ,ಮರಳು, ರಾಶಿ ಗಳಿಂದ ಕೂಡಿದಲ್ಲದೆ, ತೊಂದರೆ ಆಗುವಂತಾಗಿದ್ದು,  ಶಾಲೆಯ ಆವರಣದಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2024-25ನೇ ಸಾಲಿನ 1.70 ಲಕ್ಷ ರೂ ಹಣ ಬಿಡುಗಡೆಗೊಂಡ ಅನುದಾನದಲ್ಲಿ ಶೌಚಾಲಯ ನಿರ್ಮಿಸಿದ್ದು, ಒಂದು ವರ್ಷಗಳಿಂದ ಈ ಶೌಚಾಲಯ ಪೂರ್ಣಗೊಳ್ಳದೆ ಅರ್ಧಕ್ಕೆ ನೆನೆಗುದಿಗೆ ಬಿದ್ದಿರುವ ಸಂಗಾತಿ ಶಾಲೆಯ  ಪರಿಶೀಲನೆ ಸಂದರ್ಭದಲ್ಲಿ  ಕಂಡುಬಂದಿರುವುದಾಗಿ ತಿಳಿಸಿರುತ್ತಾರೆ.

ಇದರಿಂದಾಗಿ ಶಾಲೆಯಲ್ಲಿ ಬೇರೆ ಶೌಚಾಲಯ ಇಲ್ಲದೆ ಒಂದೇ ಶೌಚಾಲಯವನ್ನು  ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅವಲಂಬಿಸುವ  ಪರಿಸ್ಥಿತಿ ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿರುವುದಾಗಿ ತಿಳಿಸಿರುತಾರೆ , ಸಂಬಂಧಪಟ್ಟ ಎಸ್ ಡಿ ಎಂ ಸಿ ಸದಸ್ಯರು ಹಾಗೂ  ಸಂಬಂಧಪಟ್ಟ ಗ್ರಾಮ ಪಂಚಾಯಿತಿ  ಅಧಿಕಾರಿಗಳು, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಜನಪ್ರತಿನಿಧಿಗಳು, ಕೂಡಲೇ ಕ್ರಮವಹಿಸಿ ಅರಕೆರೆ ಶಾಲೆಯಲ್ಲಿ  ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ ಕಲ್ಪಿಸಿ ಕೊಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ತಾಲೂಕು ಸಂಚಾಲಕರಾದ  ಧರ್ಮರಾಜ್ ಆಕ್ರೋಶ  ವ್ಯಕ್ತಪಡಿಸಿರುತ್ತಾರೆ.


ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಡಿಎಸ್ಎಸ್ ಜಿಲ್ಲಾ ಸಂಚಾಲಕರದ ನಾಗರಾಜ್, ತಾಲೂಕು ಸಂಚಾಲಕರಾದ ಧರ್ಮರಾಜ್, ಪದಾಧಿಕಾರಿಗಳಾದ ಮೈದಿನ್ ಶರೀಫ್, ಬಲ್ಕಿಸ್ ರಾಣಿ, ಸಾಹಿರಾಭಾನು, ಕುಮಾರ್ ಪುಟ್ಟರಾಜು,ವೀರೇಶ್, ಸೇರಿದಂತೆ ಇತರರು ಹಾಜರಿದ್ದರು.

Related posts

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

ಬೇಲೂರುನಲ್ಲಿ ಪ್ರತಿಭಟನೆ

Bimba Prakashana

ಸಕಲೇಶಪುರದಲ್ಲಿ ತಡೆ ಗೋಡೆ ಕುಸಿತ ಮನೆಗಳಿಗೆ ಹಾನಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More