Blog

ಕಲಿವೀರ್ ಶಾಲೆ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನ ಕಾರ್ಯಕ್ರಮ

*ಕಲಿವೀರ್ ಶಾಲೆಯ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನಾ ಕಾರ್ಯಕ್ರಮ

ಆಲೂರು.ಕಲಿವೀರ್ ಶಾಲೆಯಲ್ಲಿ ಹೋಬಳಿ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಅಭಿನಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹೋಬಳಿ ಮಟ್ಟದಲ್ಲಿ ಬಾಲಕ ಮತ್ತು ಬಾಲಕಿಯರ ವೈಯಕ್ತಿಕ ಚಾಂಪಿಯನ್ ಪಡೆಯುವ ಮೂಲಕ ಶಾಲೆ ಒಟ್ಟಾರೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ನಂತರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಿಭಾಗದಲ್ಲಿ 200 ಮೀಟರ್,800 ಮೀಟರ್ 1500 ಮೀಟರ್, 3000 ಮೀಟರ್, 4×100 ರಿಲೇಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಬಾಲಕರ ವಿಭಾಗದಲ್ಲಿ 100 ಮೀಟರ್, 200 ಮೀಟರ್, 400 ಮೀಟರ್, ಹಾಗೂ 4×400 ರಿಲೇ ಹಾಗೂ ಬಾಲಕರ ಖೋ ಖೋ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ದಡದಹಳ್ಳಿ ನವೀನ್ ರವರು ಕ್ರೀಡೆಗೆ ಹೆಸರುವಾಸಿ ಶ್ರೀ ಕಲಿವೀರ್ ಶಾಲೆಯಾಗಿದ್ದು ನಾನು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು ಕ್ರೀಡೆಗೆ ಪ್ರೋತ್ಸಾಹ ನೀಡುವ ಏಕೈಕ ಶಾಲೆಯಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಸಮಾಜ ಸೇವಕರಾದ ಶ್ರೀ ಮೋಹನ್ ಮಾವನೂರುರವರು ವಿದ್ಯಾರ್ಥಿಗಳ ಸಾಧನೆ ಅದ್ವಿತೀಯವಾದದ್ದು ಸಂತಸ ತಂದಿದೆ ಎಂದರು. ನಂತರ ಮಾತನಾಡಿದ ಶ್ರೀ ಕಲಿವೀರ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯ ಕಲಿವೀರ್ ರವರು ಸತತವಾಗಿ 36 ವರ್ಷಗಳಿಂದ ಸಮಗ್ರ ಪ್ರಶಸ್ತಿ ಪಡೆದುಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದು ಹೇಳುತ್ತಾ ಇದಕ್ಕೆ ಹಿರಿಯ ವಿದ್ಯಾರ್ಥಿಗಳ, ಪೋಷಕರ ಸಹಕಾರ, ಶಿಕ್ಷಕರ ಶ್ರಮ ಮಹತ್ವದ್ದು ಎಂದು ಹೇಳಿದರು. ಪ್ರಸ್ತುತ ಲಯನ್ಸ್ ಕ್ಲಬ್ ಆಲೂರಿನ ಅಧ್ಯಕ್ಷರಾಗಿರುವ ಶ್ರೀ ಆನಂದರವರು ಮಾತನಾಡಿ ನಾನು ಸಹ ಈ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆ ಇರುತ್ತದೆ ಎಂದು ತಿಳಿಸಿ ವಿದ್ಯಾರ್ಥಿಗಳಿಗೆ ಶುಭಾಶಯ ತಿಳಿಸಿದರು. ನಂತರ ಶಾಲೆಗೆ ಬೇಕಾಗುವ ನೋಟ್ ಬುಕ್ ಹಾಗೂ ಕ್ರೀಡೆಗೆ ಬೇಕಾಗುವ ಸಾಮಗ್ರಿಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಭಾಗ್ಯ ಕಲಿವೀರ್,ಶ್ರೀ ದಡದಹಳ್ಳಿ ನವೀನ್, ಶ್ರೀ ಮೋಹನ್ ಮಾವನೂರು, ಶ್ರೀ ಆನಂದ ಗ್ರಹಲಕ್ಷ್ಮಿ,ಹಿರಿಯ ವಿದ್ಯಾರ್ಥಿಗಳಾದ ಸಾಗರ್, ಸಂಜಯ್, ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಸಿಬ್ಬಂದಿ ವರ್ಗದವರು,ಶ್ರೀ ರಂಗ ಕಾಲೇಜಿನ ಬಿ ಇಡಿ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

Related posts

ಬೇಲೂರು ಬರ ಪೀಡಿತ ತಾಲೂಕು ಘೋಷಣೆ – ಬಂದ್

Bimba Prakashana

ಡಾ ಅಕ್ಷತ್ ಗೆ ಪ್ರಶಸ್ತಿ

Bimba Prakashana

ಯರಗಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More