ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು ಬಿಡುಗಡೆ ತಾಲೂಕು ರೈತರಿಂದ ಸ್ವಲ್ಪಮಟ್ಟಿಗೆ ಮಂದಹಾಸ
ಆಲೂರು.
ತಾಲೂಕಿನ ವಾಟೆಹೊಳೆ ಜಲಾಶಯದಿಂದ ಶನಿವಾರ ರಾತ್ರಿ ನಾಲೆಗೆ ನೀರು ಹರಿಸಲಾಯಿತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ಅವರು ಜಲಾಶಯಕ್ಕೆ ತೆರಳಿ ಗೇಟ್ ತೆರೆದು ನಾಲೆಗೆ ನೀರು ಹರಿಸಿದರು.
ಈ ಕುರಿತು ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಕಳೆದ ಒಂದು ತಿಂಗಳಿನಿಂದ ಮಲ್ನಾಡ್ ಶಾಡೋ ಯೊಂದಿಗೆ ಮಾತನಾಡಿ ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು ಹರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು ಎಂದು ತಿಳಿಸಿದರು.
ಇತ್ತೀಚೆಗೆ ಎತ್ತಿನಹೊಳೆ ಯೋಜನೆ ಪರಿಶೀಲನೆಗಾಗಿ ಸಕಲೇಶಪುರಕ್ಕೆ ರಾಜ್ಯ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಆಗಮಿಸಿದ್ದ ಸಂದರ್ಭದಲ್ಲಿ ಕೂಡ ವಾಟೆಹೊಳೆ ಜಲಾಶಯದಿಂದ ನಾಲೆಗೆ ನೀರು ಬಿಡಲು ಆದೇಶಿಸುವಂತೆ ಮನವಿ ಮಾಡಿದ್ದಾಗಿ ಹೇಳಿದರು. ಈ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರ ನಾಲೆಗೆ ನೀರು ಹರಿಸಲು ಆದೇಶಿಸಿದ್ದು, ಅದರಂತೆ ಜಲಾಶಯಕ್ಕೆ ತೆರಳಿ ಗೇಟ್ ತೆರೆದು ನೀರು ಹರಿಸಲಾಗಿದೆ ಎಂದು ತಿಳಿಸಿದರು.
15 ದಿನಗಳ ಹಿಂದೆಯೇ ನಾಲೆಗೆ ನೀರು ಹರಿಸಿದ್ದರೆ ನಾಲಾ ವ್ಯಾಪ್ತಿಯಲ್ಲಿನ ಶೇ.50ರಷ್ಟು ಬೆಳೆ ಉಳಿಸಬಹುದಾಗಿತ್ತು. ತಡವಾಗಿಯಾದರೂ ಇದೀಗ ನೀರು ರಿಸಿರುವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಎಲ್ಲಾ ಗ್ರಾಮಸ್ಥರು ಇದ್ದರು.
previous post
