ವರದಿ ***
ನಾಗೇಶ್ ಎಂ ಎಚ್ ಮಾಗೇರಿ
🔴ಹಲವಾರು ವರ್ಷಗಳಿಂದ ವಿದ್ಯುತ್ ಬೆಳಕಿನಿಂದ ವಂಚಿತ ವಾದ ಕುಟುಂಬ.
🔴ಅಧಿಕಾರಿಗಳ ನಿರ್ಲಕ್ಷ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ
🔴ಬಡಕುಟುಂಬದ ಗೋಳು
ಕೇಳುವರು ಯಾರು?*
ಸಕಲೇಶಪುರ ತಾಲ್ಲೂಕು ಹೆಗ್ಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ
ಸಾಂತ್ವರಿ ಗ್ರಾಮದ ಮೋಟಮ್ಮ ಕೋ ಕೆಂಚಯ್ಯ
ಕುಟುಂಬದವರು ಕತ್ತಲೆಯಲ್ಲಿ ಬದುಕು ಸಾಗಿಸುವಂತೆ ಆಗಿದೆ.
ಈ ಭಾಗದಲ್ಲಿ ಆನೆ, ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವುದು ಎಲ್ಲಾ ಅಧಿಕಾರರಿಗಳಿಗೆ ತಿಳಿದಿರುವ ವಿಷಯ ಆದರೂ ನಿರ್ಲಕ್ಷಿಸುತ್ತಿರುವುದು ಯಾಕೆ?
ಕಾಡುಪ್ರಾಣಿಗಳಿಂದ ತೊಂದರೆ ಯಾದರೆ ಅಧಿಕಾರಿಗಳು ಹೊಣೆಯಾಗುತ್ತರಾ?
ಈಗಲೂ ಮನೆಯಲ್ಲಿ ಇರುವ
ವಿದ್ಯಾರ್ಥಿಗಳು ದೀಪದ ಬೆಳಕಿನಲ್ಲಿ ಓದಬೇಕಾ?
ಎಲ್ಲದಕ್ಕೂ ಅಧಿಕಾರಿಗಳೇ ಉತ್ತರಿಸಬೇಕಿದೆ ಎಂದು ಕುಟುಂಬ ದವರು ಅಳಲು ತೋಡಿಕೊಂಡಿದ್ದಾರೆ.
ಅಕ್ಕ ಪಕ್ಕ ಎಲ್ಲರಿಗೂ ಸೌಲಭ್ಯ
ಮಾಡಿದ್ದಾರೆ.
ವಿದ್ಯುತ್ ಕಂಬ ಮನೆಯ ಪಕ್ಕಾ ಸುಮಾರು 120 ಅಡಿಗಳ ದೂರದಲ್ಲಿ ವಿದ್ಯುತ್ ಕಂಬ ಇದೆ.
ಕೆ ಇ ಬಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿದಿನಗಳು, ಹಲವಾರು ಬಾರಿ ಭೇಟಿ ನೀಡಿದ್ದಾರೆ.
ಕೆ ಇ ಬಿ ಅಧಿಕಾರಿಗಳಿಗೂ, ಪಂಚಾಯತಿಯಿಂದ ಮಾಹಿತಿ ಕೊಟ್ಟಿದ್ದೇವೆ ಎಂದು ಪಂಚಾಯತಿ ಇಂದ ತಿಳಿಸಿದ್ದಾರೆ ಆದರೆ ಕೆ ಇ ಬಿ ಇಲಾಖೆಯ ಅಧಿಕಾರಿಗಳು
ಯಾವುದೇ ಪ್ರಯತ್ನ ಮಾಡಿಲ್ಲ.
ಎಂದು ಕುಟುಂಬ ದವರು ತಿಳಿಸಿದ್ದಾರೆ.
ಈ ಹಿಂದೆ ಬೆಳಕು ಯೋಜನೆ ಅಡಿಯಲ್ಲಿ ಹಲವಾರು ಗ್ರಾಮದಲ್ಲಿ ವಿದ್ಯುತ್ ಇಲ್ಲದವರಿಗೆ ಇದರ ಸದುಪಯೋಗ ಮಾಡಿದ್ದಾರೆ,*
ಇವರಿಗೂ ವಿದ್ಯುತ್ ಸಂಪರ್ಕ ಒದಗಿಸಬಹುದಿತ್ತು
ಆದರೂ ಅಧಿಕಾರಿಗಳು ನಿರ್ಲಕ್ಷ ಮಾಡಿರುವುದು ಯಾಕೆ ?
ಅಧಿಕಾರಿಗಳಿಗೆ ಜನಪ್ರತಿನಿದಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಪ್ರಯೋಜನ ವಾಗಿಲ್ಲ..
ದಯವಿಟ್ಟು ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಈ ಕುಟುಂಬಕ್ಕೆ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
previous post
