ಆಲೂರು ತಾಲೂಕಿನಲ್ಲಿ ಮಳೆ ಕೊರತೆ: ಕಮರುತ್ತಿದೆ ಭತ್ತದ ನಾಟಿ ಕನಸು
ಬಾನತ್ತ ಕಣ್ಣು, ಮೆಕ್ಕೆಜೋಳ ಒಣಗಿ ಹೋಗಿದೆ ಹಾಗೂ ಸಸಿ ಮಡಿ ಒಣಗುವ ಭೀತಿಯಲ್ಲಿ ಅನ್ನದಾತ
ಆಲೂರು : ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಭೀಕರ ಮಳೆ ಅಭಾವ ಎದುರಾಗಿದ್ದು, ಕೃಷಿಕರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಮೆಕ್ಕೆಜೋಳ ಬೆಳಿ ಸುಳಿ ರೋಗ ಮಳೆಯ ಕೊರತೆಯಿಂದ ಸಂಪೂರ್ಣವಾಗಿ ಒಣಗಿ ನಾಶವಾಗಿದ್ದಲ್ಲದೆ ಹಾಗೂ ತಾಲೂಕಿನಾದ್ಯಂತ ಈ ಬಾರಿ ಸುಮಾರು 9 ಸಾವಿರ ಹೆಕ್ಟೇರ್ 7ಬೃಹತ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿತ್ತಾದರೂ, ಮಳೆಯ ಕೈಕೊಡುವಿಕೆಯಿಂದಾಗಿ ನಾಟಿ ಕಾರ್ಯ ಸಂಪೂರ್ಣ ಹಿನ್ನಡೆ ಅನುಭವಿಸಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆಸಿದ ಸಸಿ ಮಡಿ ಗಳು ಜಮೀನಿನಲ್ಲೇ ಒಣಗಿ ಹೋಗುವ ಭೀತಿ ಎದುರಾಗಿದ್ದು, ಸರ್ಕಾರ ಸೂಕ್ತವಾದ ಪರಿಹಾರ ನೀಡಬೇಕೆಂದು ರೈತ ಸಂಘದ ಉಪಾಧ್ಯಕ್ಷ ಜಯಣ್ಣ ಐದುರು ಮಾಧ್ಯಮದ ಮೂಲಕ ಮನವಿ ಮಾಡಿದರು.
ಹುಸಿಯಾದ ಮುಂಗಾರು ನಿರೀಕ್ಷೆ
ಮುಂಗಾರು ಆರಂಭದಲ್ಲಿ ಸುರಿದ ತುಂತುರು ಮಳೆಯನ್ನೇ ನೆಚ್ಚಿಕೊಂಡಿದ್ದ ರೈತರು, ಸಾಲ ಸೋಲ ಮಾಡಿ ಜಮೀನು ಹದಗೊಳಿಸಿ ಮಡಿಗಳನ್ನು ಸಿದ್ದಪಡಿಸಿಕೊಂಡಿದ್ದರು. ಆದರೆ, ನಾಟಿ ಮಾಡುವ ನಿರ್ಣಾಯಕ ಹಂತದಲ್ಲೇ ಮಳೆ ಸಂಪೂರ್ಣವಾಗಿ ಮುಖ ತಿರುಗಿಸಿದೆ. ಭತದ
ನಾಟಿಗೆ ಜಮೀನಿನಲ್ಲಿ ಅಧಿಕ ತೇವಾಂಶ ಹಾಗೂ ನಿಂತ ನೀರಿನ ಅಗತ್ಯವಿರುತ್ತದೆ. ಪ್ರಸ್ತುತ ಮಳೆಯಿಲ್ಲದೆ ಒಣಗುತ್ತಿರುವ ಗದ್ದೆಗಳಲ್ಲಿ ನಾಟಿ ಕೈಗೊಳ್ಳಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ದಗೊಂಡಿವೆ. ಸಸಿ ಮಡಿಗಳನ್ನು ಹಾಕಿ ದಿನಗಳು ಕಳೆಯುತ್ತಿದ್ದಂತೆ ಅವುಗಳ ವಯಸ್ಸು ಮೀರಲಿದ್ದು, ನಿಗದಿತ ಅವಧಿಯಲ್ಲಿ ನಾಟಿ ಮಾಡದಿದ್ದರೆ ಇಳುವರಿಯ ಮೇಲೆ ತೀವ್ರ ತರಹದ ಪರಿಣಾಮ ಬೀರಲಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎಂದು ಮಾತನಾಡಿದಲ್ಲದೆ
ಸಾಲದ ಸುಳಿಯಲ್ಲಿ ಅನ್ನದಾತ
ಈಗಾಗಲೇ ಭೂಮಿ ಉಳುಮೆ, ಗೊಬ್ಬರ, ಬಿತ್ತನೆ ಬೀಜ ಹಾಗೂ ಸಸಿ ಮಡಿ ತಯಾರಿಕೆಗೆ ರೈತರು ಸಾವಿರಾರು ರೂಪಾಯಿ ಸುರಿದಿದ್ದಾರೆ. ಇದರ ಜೊತೆಗೆ ಕೃಷಿ ಕೂಲಿ ಕಾರ್ಮಿಕರ ಅಭಾವ, ಯಂತ್ರೋಪಕರಣಗಳ ಬಾಡಿಗೆ ಹಾಗೂ ಇತರೆ ವೆಚ್ಚಗಳು ಗಗನಕೇರಿವೆ.
ಆಡಳಿತಾತ್ಮಕ ಸ್ಪಂದನೆಯ ಅಗತ್ಯ
ಸ್ಥಳೀಯ ಕೃಷಿ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಪರಿಸ್ಥಿತಿಯ ಗಂಭೀರತೆಯನ್ನು ಮನಗಾಣಬೇಕಿದೆ. ಹ ಕೊನೆಯ ಜಮೀನುಗಳಿಗೂ ತಲುಪುವಂತೆ ನೀರು ನಿರ್ವಹಣೆ ಮಾಡುವುದು ಮತ್ತು ಅಗತ್ಯವಿದ್ದರೆ ಪರ್ಯಾಯ ಬೆಳೆಗಳ ಕುರಿತು ರೈತರಿಗೆ ತುರ್ತು ಮಾರ್ಗದರ್
ಕಷ್ಟಪಟ್ಟು ಹೂಡಿಕೆ ಮಾಡಿದ ಹಣವೆಲ್ಲ ನೀರಲ್ಲಿ ಹೋಮ ಮಾಡಿದಂತಾಗುತ್ತದೆಯೇ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಕಾಲಕ್ಕೆ ಸರಿಯಾಗಿ ಮಳೆಯಾಗದಿದ್ದರೆ ಕೇವಲ ಬೆಳೆಗೆ ಮಾತ್ರವಲ್ಲದೆ, ತಾಲೂಕಿನ ಗ್ರಾಮೀಣ ಆರ್ಥಿಕತೆಗೂ ಭಾರಿ ಹೊಡೆತವಾಗಿದೆ ಎಂದು ಮಾತನಾಡಿದರು.
ಸಂದರ್ಭದಲ್ಲಿ ರೈತ ಮುಖಂಡರು ಇದ್ದರು.
previous post
