Blog

ಶಾಲೆಯಲ್ಲಿ ಅವಿತಿದ್ದ ಹಾವು

ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ, ಸ್ನೇಕ್ ಬಾಬು ಕಾರ್ಯಾಚರಣೆಗೆ ಶಾಲಾ ಸಿಬ್ಬಂದಿ ಮೆಚ್ಚುಗೆ**

ಆಲೂರು ತಾಲೂಕು (ಹೊನ್ನೇನಳ್ಳಿ) ಶಾಲೆಯ ಕ್ರೀಡಾ ಕೊಠಡಿಯಲ್ಲಿ ಅವಿತುಕೊಂಡಿದ್ದ ಬೃಹತ್ ಗಾತ್ರದ ನಾಗರಹಾವೊಂದನ್ನು ಉರಗ ತಜ್ಞ ಸ್ನೇಕ್ ಬಾಬು ಅವರು ಸುರಕ್ಷಿತವಾಗಿ ಸೆರೆಹಿಡಿದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆತಂಕವನ್ನು ದೂರಗೊಳಿಸಿದ ಘಟನೆ ಹೊನ್ನೇನಳ್ಳಿ ಕೂಡಿಗೇ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಶಾಲೆಯ ಸಿಬ್ಬಂದಿ ಕ್ರೀಡಾ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭದಲ್ಲಿ, ಅನಿರೀಕ್ಷಿತವಾಗಿ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿದೆ. ಹಾವನ್ನು ಕಂಡು ಆತಂಕಗೊಂಡ ಸಿಬ್ಬಂದಿ, ಕೂಡಲೇ ಮುಖ್ಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ಅವರಿಗೆ ಮಾಹಿತಿ ನೀಡಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮುಖ್ಯ ಶಿಕ್ಷಕರು, ಯಾವುದೇ ವಿಳಂಬ ಮಾಡದೆ ತಕ್ಷಣವೇ ಸ್ನೇಕ್ ಬಾಬು ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕರೆ ಸ್ವೀಕರಿಸಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ಬಾಬು ಅವರು, ಅತ್ಯಂತ ಚಾಣಾಕ್ಷತನದಿಂದ ಕಾರ್ಯಾಚರಣೆ ನಡೆಸಿ, ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಶಾಲಾ ಆವರಣದಲ್ಲಿ ಹಾವು ಕಾಣಿಸಿಕೊಂಡಿದ್ದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೆಲಕಾಲ ಭೀತಿಯ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಸ್ನೇಕ್ ಬಾಬು ಅವರ ಸಮಯಪ್ರಜ್ಞೆ ಮತ್ತು ಧೈರ್ಯದ ಕಾರ್ಯದಿಂದ ಯಾವುದೇ ಅಹಿತಕರ ಘಟನೆ ನಡೆಯದೆ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕಿ ಪೂರ್ಣಿಮಾ ಅವರು, “ಅಪಾಯದ ಅರಿವಿದ್ದರೂ ಕ್ಷಣಾರ್ಧದಲ್ಲಿ ಬಂದು ಹಾವನ್ನು ರಕ್ಷಿಸಿದ ಸ್ನೇಕ್ ಬಾಬು ಅವರ ಕಾರ್ಯ ಶ್ಲಾಘನೀಯ.

ಅವರ ತ್ವರಿತ ಸಂದನೆ ಇಂದು ನಮ್ಮ ಶಾಲೆಯ ಮಕ,ಳಿಗೆ ರಕ್ಷಣಾ ನೀಡಿದೆ ಎಂದು ಶಾಲೆಯ ಶಿಕ್ಷಕರು ಅವರ ಕಾರ್ಯ ವೈಖರಿ ಬಗ್ಗೆ ಮಾತನಾಡಿದರು.

Related posts

ಹೆತ್ತೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅಗ್ನಿ ಅವಘಡ

Bimba Prakashana

ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ

Bimba Prakashana

ಅನುಮತಿ ಇಲ್ಲದೆ ಆಫ್ ರೋಡ್ ಗೆ ಯತ್ನ – ಅರಣ್ಯ ಇಲಾಖೆ ಎಚ್ಚರಿಕೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More