Blog

ಪದಗ್ರಹಣ ಕಾರ್ಯಕ್ರಮ

ಸಮಾಜದ ಜನರು ಮಕ್ಕಳನ್ನು  ವಿದ್ಯಾವಂತರನ್ನಾಗಿ ಮಾಡುವುದರ ಮೂಲಕ ಸಾಮಾಜಿಕವಾಗಿ ಬೆಳೆಯಬೇಕು ಎಂದು ಮೈಸೂರು ವಿಭಾಗ ಮಟ್ಟದ ವಿಭಾಗೀಯ ಸಂಚಾಲಕರಾದ ಪದ್ಮನಾಭ ನಾಯಕ್ ರವರು
AIBSS (ಆಲ್ ಇಂಡಿಯಾ ಬಂಜಾರ ಸೇವಾ ಸಂಘ) ಹಾಸನ ಜಿಲ್ಲಾ ವಿಭಾಗೀಯ ಮಟ್ಟದ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ  ಕಾರ್ಯಕ್ರಮದಲ್ಲಿ ಕರೆ ನೀಡಿದರು.

ಹಾಸನದ ಸುಬೇದಾರ್ ವೃತ್ತದಲ್ಲಿರುವ ಸತ್ಯಕಾಂತ್ ಕನ್ವೆನ್ಶನ್ ಹಾಲ್ ನಲ್ಲಿ ನಡೆದ AIBSS ನ ಹಾಸನ ಜಿಲ್ಲೆಯ ಮೈಸೂರು ವಿಭಾಗ ಮಟ್ಟದ ನೂತನ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ರಾಷ್ಟ್ರಾದ್ಯಕ್ಷ ಶ್ರೀ ಡಿ ರಾಮಾನಾಯಕ್ ಮಾತನಾಡಿ ಹಾಸನ ಜಿಲ್ಲೆಯ ಆಲ್ ಇಂಡಿಯಾ ಬಂಜಾರ ಸಂಘವು ಇಡೀ ಕರ್ನಾಟಕಕ್ಕೆ ಮಾದರಿ ಸಂಘವಾಗಿದೆ ಎಂದು ಹೇಳಿದರು.

AIBSS ನ ಜಿಲ್ಲಾದ್ಯಕ್ಷರಾದ ಸೋಮನಾಯಕ್ ರವರು ಮಾತನಾಡುತ್ತಾ ಸಮಾಜ ಮತ್ತು ಸಂಘಟನೆಯ ನಡುವೆ ಪದಾಧಿಕಾರಿಗಳು ಅಧಿಕಾರ ಎನ್ನುವ ಭ್ರಮೆಯಿಂದ ಹೊರಬಂದು ಸೇವೆ ಎನ್ನುವ ವಿಷಯದಲ್ಲಿ ಸ್ಥಿತ ಪ್ರಜ್ಞೆಯನ್ನಿಟ್ಟು ಸಮನ್ವಯತೆಯನ್ನು ಸಾಧಿಸುವುದರ ಮೂಲಕ ಸಮಾಜಮುಖಿಯಾಗಿ ಸೇವೆ ಸಲ್ಲಿಸಬೇಕು. ಜೊತೆಗೆ ಇತರ ಸಮಾಜಗಳನ್ನು ಗೌರವಿಸುವುದರ ಮೂಲಕ ಬಂಜಾರ ಸಮಾಜದ ಗೌರವ ಹಾಗೂ ಹಿರಿಯರ ಮಾರ್ಗದರ್ಶನದಂತೆ ನಡೆಯಬೇಕು ಎಂದು ಹೇಳಿದರು.
     ಹಾಸನ ತಾಲೂಕು ಶಾಸಕರಾದ ಶ್ರೀ ಸ್ವರೂಪ್ ಪ್ರಕಾಶ್ ರವರು ಮಾತನಾಡಿ ನಾನು ನೋಡಿದಂತೆ AIBSS ಜಿಲ್ಲಾದ್ಯಂತ ಉತ್ತಮವಾದ ಕೆಲಸ ಮಾಡುತ್ತಾ ಸಾಗಿದೆ. ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ರೀತಿಯ ಸಹಾಕಾರ ನೀಡುವುದಾಗಿ ಹೇಳಿದರು

ಈ ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಬಂಜಾರ ಸಂಘದ ರಾಜ್ಯಾದ್ಯಕ್ಷರಾದ ಶ್ರೀ ವಿಜಯ್ ಜಾಧವ್, ರಾಜ್ಯ ಯುವ ಘಟಕ ಅದ್ಯಕ್ಷರಾದ ಶ್ರೀ ಸುನಿಲ್ ನಾಯ್ಕ್, ರಾಜ್ಯ ಕಾರ್ಯಾದ್ಯಕ್ಷರಾದ ಶ್ರೀ ಪುಟ್ಟಾನಾಯಕ್, ಮಹಿಳಾ ಅದ್ಯಕ್ಷರಾದ ಶ್ರೀಮತಿ ಶೈಲಾಬಾಯಿ, ರಾಜ್ಯ ಉಪಾದ್ಯಕ್ಷರಾದ ಪಿ. ಕುಮಾರ್ ನಾಯಕ್, ಹಾಗೂ ರಾಜಾನಾಯಕ್ ಮೆಗಾಸಿಟಿ ಬೆಂಗಳೂರು ಘಟಕ ಜಿಲ್ಲಾ ಕಾರ್ಯದರ್ಶಿ ಶ್ರೀ ರಾಜಮಲ್ ನಾಯಕ್ ಹಾಗೂ ಇತರ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಗಣ್ಯರುಗಳು ಭಾಗವಹಿಸಿದ್ದರು.

Related posts

ಆಲೂರುನಲ್ಲಿ ಕೆಂಪೇಗೌಡ ಜಯಂತಿ

Bimba Prakashana

ಆಲೂರುನಲ್ಲಿ 2: ರಸ್ತೆಗಳಿಗೆ ಅನುದಾನ ಮಂಜೂರು

Bimba Prakashana

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More