Blog

ರಾಧಮ್ಮ ಜನ ಸ್ಪಂದನೆ ವತಿಯಿಂದ ಪೌರ ಕಾರ್ಮಿಕ ದಿನಾಚರಣೆ

🔴ಪೌರಕಾರ್ಮಿಕರ ಸೇವೆ ಸಮಾಜಕ್ಕೆ ಅಮೂಲ್ಯ: ಹೇಮಂತ್ ಕುಮಾರ್
🔴ರಾಧಮ್ಮ ಜನಸ್ಪಂದನ ವೇದಿಕೆಯಿಂದ ಪೌರಕಾರ್ಮಿಕರ ದಿನಾಚರಣೆ, ಬಾಗಿನ ವಿತರಣೆ ಹಾಗೂ ಸನ್ಮಾನ…

ಆಲೂರು ರಾಧಮ್ಮ ಜನ ಸ್ಪಂದನ ವತಿಯಿಂದ ಪೌರ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ರಾಜ್ಯ ನೌಕರ ಸಂಘದ ಅಧ್ಯಕ್ಷರಾಗಿರುವ  ಕೃಷ್ಣೇಗೌಡರು ಪೌರ ಕಾರ್ಮಿಕರಿಗೆ ಗೌರವಿಸುವುದು ಭಗವಂತನನ್ನ ಪೂಜೆ ಮಾಡಿಸುವುದಷ್ಟೇ ಶ್ರೇಷ್ಠ ಇಂತಹ ಕಾರ್ಯವನ್ನು ಸಮಾಜಮುಖಿ ಕೆಲಸ ಎಂದು ಭಾವಿಸಿ, ಸಮಾಜ ಸೇವೆ ಮುಖಾಂತರ ರಾಧಮ್ಮ ಜನಸ್ಪಂದನ ಹೇಮಂತ್ ರವರು ಭಾವಿಸಿ ಸಮಾಜಕ್ಕೆ ಆದರ್ಶವಾಗಿ ಬದುಕುತ್ತಿದ್ದಾರೆ ಇವರೊಂದಿಗೆ ಸದಾ ಕಾಲ ಮುಂದಿನ ದಿನಗಳ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಹಾಗೂ ಸಾರಿಗೆ ಇಲಾಖೆಯಿಂದ ಪೌರಕಾರ್ಮಿಕರಿಗೆ ಹೇಮಂತ್ ಕುಮಾರ್ ಅವರ ಸಲಹೆಯಂತೆ ಮೊದಲ ಆದ್ಯತೆ ಅಡಿಯಲ್ಲಿ ನಿಮ್ಮ ಕೆಲಸ ಕಾರ್ಯಕ್ಕೆ ಸೇವೆಯನ್ನು ಒದಗಿಸುತ್ತೇವೆ ಎಂದು ಆಶಯ ನುಡಿದರು…


  ಪಟ್ಟಣದ ಅಂಬೇಡ್ಕರ್ ಭವನದಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ, ಬಾಗಿನ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೇಮಂತ್ ಕುಮಾರ್ ಕಾರ್ಯಕ್ರಮ ಉದ್ದೇಶಿಸಿ ಸಭೆಯಲ್ಲಿರುವ ಪ್ರತಿಯೊಬ್ಬ ಗಣ್ಯರು ಈ ದಿನ ಭಾಗವಹಿಸಿ ಪೂರ್ವ ಕಾರ್ಮಿಕರಿಗೆ ಗೌರವ ಸಲ್ಲಿಸಲು ಬಂದಿರುವುದು ಮುಖ್ಯವಾಗಿತ್ತೋ ಇದೇ ಮಾದರಿಯಲ್ಲಿ ಪ್ರತಿಯೊಬ್ಬ ಪೌರ ಕಾರ್ಮಿಕರು ಸರ್ಕಾರಿ ಕಚೇರಿಗೆ ತೆರಳಿದಾಗ ಪ್ರತಿಯೊಬ್ಬ ಸರ್ಕಾರಿ ನೌಕರರು ಪೌರ ಕಾರ್ಮಿಕರಿಗೆ ಗೌರವಿಸಿ ಅವರ ಕೆಲಸ ಕಾರ್ಯಗಳನ್ನು ಕಾನೂನುಡಿಯಲ್ಲಿ ಸಮಯಕ್ಕೆ ತಕ್ಕಂಗೆ ಮಾಡಿಕೊಟ್ಟರೆ ಪೌರ ಕಾರ್ಮಿಕರಿಗೆ ನಿಜವಾದ ಗೌರವ ಸಲ್ಲಿಸಿದಂತೆ ದಯಮಾಡಿ ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ತಮ್ಮ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ಸಹಕರಿಸಿ ಎಂದು ಮನವಿ ಮಾಡಿದರು…
ಇಲ್ಲಿಯವರೆಗೂ ಜನಪ್ರತಿನಿಧಿಗಳು ಉನ್ನತ ಅಧಿಕಾರಿಗಳು ಇಂಜಿನಿಯರ್ ಗಳು ಪ್ರತಿಯೊಬ್ಬ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವರು ಲೋಕಾಯುಕ್ತ ಇಲಾಖೆಗೆ ಬಂಧನಕ್ಕೆ ಒಳಗಾಗಿದ್ದಾರೆ ಲಂಚದ ವಿಷಯದಲ್ಲಿ ಏನನ್ನು ಕೇಳದೆ ನಿರೀಕ್ಷಿಸದೆ ಸಂಪೂರ್ಣವಾಗಿ ಪ್ರಾಮಾಣಿಕವಾಗಿ ದುಡಿದಂತಹ ಕಾರ್ಮಿಕರು ಎಂದರೆ ಅದು ಪೌರ ಕಾರ್ಮಿಕರಿಗೆ ಮಾತ್ರ ಸೇರಬೇಕು ಇಲ್ಲಿಯವರೆಗೂ ಪೌರವ ಕಾರ್ಮಿಕರನ್ನ ರಾಜ್ಯದ ಯಾವುದೇ ಮೂಲೆಯಲ್ಲಿ ಭ್ರಷ್ಟ ಎಂದು ಅಮಾನತು ಮಾಡಿರುವುದಿಲ್ಲ ಇದು ನಿಮ್ಮ ನೈತಿಕತೆ, ಈ ನೈತಿಕತೆಗೆ ಪೌರ ಕಾರ್ಮಿಕರಲಿರುವ ಸ್ವಚ್ಛ ಮನಸ್ಸಿನ ಕನ್ನಡಿ ಸಮಾಜವ ಗಮನಿಸುತ್ತಿದೆ ನಿಮ್ಮ ಆದರ್ಶದ ಸೇವೆ ಪ್ರತಿಯೊಬ್ಬ ನೌಕರರು ಅವರವರ ಇಲಾಖೆಯಲ್ಲಿ ಅಳವಡಿಸಿಕೊಂಡರೆ ಈ ದೇಶ ಅಭಿವೃದ್ಧಿಯಾಗಲಿದೆ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ತಮ್ಮ ಮಾತಿನಲ್ಲೇ ಭ್ರಷ್ಟಾಚಾರದ ಅಧಿಕಾರಿಗಳ ಮತ್ತು ಜನಪ್ರನಿಧಿಗಳ ವ್ಯವಸ್ಥೆ ವಿರುದ್ಧ ಹೇಮಂತ್ ರವರು ಆಕ್ರೋಶ ವ್ಯಕ್ತಪಡಿಸಿದರು…

ಆಲೂರು: ರೈತರು, ಕೂಲಿ ಕಾರ್ಮಿಕರು, ಶ್ರಮಿಕರು ಹಾಗೂ ಪೌರಕಾರ್ಮಿಕರ ಪರಿಶ್ರಮದ ಮೇಲೆ ಇಡೀ ದೇಶ ನಿಂತಿದೆ. ಸಮಾಜದ ಸ್ವಚ್ಛತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಪೌರಕಾರ್ಮಿಕರನ್ನು ಗುರುತಿಸಿ, ಗೌರವಿಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ ಎಂದು ಪ್ರಗತಿಪರ ಚಿಂತಕ ಹಾಗೂ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಹೇಳಿದರು. 

ದೇಶದಲ್ಲಿ ಶತಮಾನಗಳಿಂದ ತಳ ಸಮುದಾಯಗಳನ್ನು ಶೋಷಣೆಗೆ ಒಳಪಡಿಸಲಾಗಿದ್ದು, ಶಿಕ್ಷಣ ಮತ್ತು ಅಧಿಕಾರದಿಂದ ದೂರವಿಡಲಾಗಿದೆ. ಮೇಲ್ವರ್ಗದ ಜನರು ಶಿಕ್ಷಣದ ಜತೆಗೆ ಅಧಿಕಾರದಲ್ಲಿಯೂ ಹೆಚ್ಚಿನ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಇಂತಹ ಅಸಮಾನತೆಗಳು ದೂರವಾಗಿ, ಪೌರಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ರೈತಾಪಿ ವರ್ಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆದು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಬೇಕು ಎಂದು ಆಶಿಸಿದರು.

ಪೌರಕಾರ್ಮಿಕರು ಸೇರಿದಂತೆ ಸಮಾಜದ ತಳಮಟ್ಟದ ಜನರಲ್ಲಿ ಅನೇಕರು ಸ್ವಂತ ಮನೆ ಹಾಗೂ ಜಮೀನು ಹೊಂದಲು ಸಾಧ್ಯವಾಗದೆ, ದುಡಿಮೆಯನ್ನೇ ಅವಲಂಬಿಸಿ ಜೀವನ ಸಾಗಿಸುವ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಸಾಮಾಜಿಕ ಅಸಮಾನತೆಗಳಿಗೆ ಶೋಷಣೆಯ ವ್ಯವಸ್ಥೆಯೇ ಕಾರಣವಾಗಿದೆ. ಪ್ರತಿನಿತ್ಯ ಪಟ್ಟಣದ ರಸ್ತೆಗಳು, ಬಡಾವಣೆಗಳು ಹಾಗೂ ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪೌರಕಾರ್ಮಿಕರ ಸೇವೆ ಅತ್ಯಂತ ಮಹತ್ವದ್ದಾಗಿದೆ. ಅವರ ಶ್ರಮವನ್ನು ಗುರುತಿಸುವುದರ ಜತೆಗೆ, ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಮಾತನಾಡಿ, ಪ್ರತಿನಿತ್ಯ ನಗರವನ್ನು ಸ್ವಚ್ಛವಾಗಿಡುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸಮಾಜದ ಆರೋಗ್ಯಕ್ಕಾಗಿ ದುಡಿಯುವ ಇಂತಹ ಕಾರ್ಮಿಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಜನಸ್ಪಂದನ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹೇಮಂತ್ ಕುಮಾರ್ ಮಾಡುತ್ತಿರುವುದು ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗಳ ನೆರವಿಗೆ ಧಾವಿಸುವುದರ ಜತೆಗೆ, ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಜನಸ್ಪಂದನ ವೇದಿಕೆಯ ಸೇವೆ ಪ್ರಶಂಸನೀಯ. ಇಂತಹ ಕಾರ್ಯಗಳಿಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿದಾಗ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ ಮಾತನಾಡಿ, ಪೌರಕಾರ್ಮಿಕರಿಗೆ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಕಾರ್ಯಗಳಿದ್ದರೂ ತಮ್ಮಿಂದ ಸಾಧ್ಯವಾದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಮುಖಂಡ ಹಾಗೂ ಸಕಲೇಶಪುರ ಗ್ಯಾರಂಟಿ ಸಮಿತಿ ಅಧ್ಯಕ್ಷ ಮುರಳಿ ಮೋಹನ್ ಮಾತನಾಡಿ, ಪೌರಕಾರ್ಮಿಕರು ಒಂದು ದಿನ ಕೆಲಸ ಮಾಡದಿದ್ದರೂ ಇಡೀ ಪಟ್ಟಣದ ಸ್ವಚ್ಛತೆಯ ಮೇಲೆ ಅದರ ಪರಿಣಾಮ ಗೋಚರಿಸುತ್ತದೆ. ನಗರವನ್ನು ಸ್ವಚ್ಛವಾಗಿಟ್ಟು, ಜನರು ಆರೋಗ್ಯಕರ ವಾತಾವರಣದಲ್ಲಿ ಬದುಕಲು ಕಾರಣವಾಗುವ ಪೌರಕಾರ್ಮಿಕರ ಸೇವೆ ಅನನ್ಯ. ಇಂತಹ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಹೇಮಂತ್ ಕುಮಾರ್  ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಹಿಳಾ ಪೌರಕಾರ್ಮಿಕರಿಗೆ ಬಾಗಿನ ವಿತರಿಸುವ ಮೂಲಕ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜನಸ್ಪಂದನ ವೇದಿಕೆಯ ಅಧ್ಯಕ್ಷ ಹೇಮಂತ್ ಕುಮಾರ್, ವೀರಶೈವ ಸಮಾಜದ ಮುಖಂಡ ರೇಣುಕಾ ಪ್ರಸಾದ್, ಕದಾಳು ಲೋಕೇಶ್, ರುದ್ರೇಗೌಡ, ಸಂದೇಶ್, ಧರಣೀಂದ್ರ, ಲೋಕೇಶ್, ಶ್ರೀಕಾಂತ್, ರಾಜಶೇಖರ್, ಮಲ್ಲೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಅಪಘಾತ ಮಾಡಿ ಪರಾರಿ ಆದ ಲಾರಿ ಪತ್ತೆ ಆಗಲೇ ಇಲ್ಲ

Bimba Prakashana

ಆಲೂರುನಲ್ಲಿ ಕಾಮಗಾರಿಗೆ ಭೂಮಿ ಪೂಜೆ

Bimba Prakashana

ಸಕಲೇಶಪುರದಲ್ಲಿ ಕೆಲಸ beke

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More