Blog

ಆಲೂರುನಲ್ಲಿ ಕಾಮಗಾರಿಗೆ ಭೂಮಿ ಪೂಜೆ

ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆ: ಶಾಸಕ ಸಿಮೆಂಟ್ ಮಂಜು.

ಆಲೂರು ತಾಲೂಕಿನ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತಹ ಮರಸು ಕೊಪ್ಪಲು ಹಾಗೂ ಪಟ್ಟಣದ ದೊಡ್ಡಿಬೀದಿಯಲ್ಲಿ ಸುಮಾರು ವರ್ಷಗಳಿಂದ ನೆಲೆಗುಂದಿ ಬಿದ್ದಿದ್ದ ರಸ್ತೆಗೆ ಆಲೂರು ಕಟ್ಟಾಯ ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರು ಸುಮಾರು ಒಂದು ಕಿಲೋಮೀಟರ್ ಉದ್ದದ ರಸ್ತೆಗೆ ಅಂದಾಜು 80 ಲಕ್ಷ ವೆಚ್ಚದಲ್ಲಿ ಭೂಮಿ ಪೂಜೆಯನ್ನು  ನೆರವೇರಿಸಿದರು.
      
ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಾನು ಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮೂಲಭೂತ ಸೌಕರ್ಯಗಳು ಸಾರ್ವಜನಿಕರಿಗೆ ಯಾವ ರೀತಿಯಲ್ಲೂ ತೊಂದರೆ ಆಗಬಾರದು ಎಂದು ಹೇಳಿದ್ದೆ ಹಾಗಾಗಿ ನನ್ನ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆಮಾಡುವ ಪ್ರಯತ್ನವನ್ನು ಮಾಡುತ್ತೇನೆ ಇನ್ನೂ ಹೆಚ್ಚಿನ ಕೆಲಸಮಾಡಲು ತಮ್ಮ ಆಶೀರ್ವಾದ ಬೇಕಾಗಿದೆ ಎಂದರು,ವಾಹನ ಸವಾರರು ಹಾಗೂ ಶಾಲಾ ಮಕ್ಕಳಿಗೆ ಅನುಕೂಲವಾಗಬೇಕು ಎಂದು ರಸ್ತೆಗೆ ಅನುದಾನವನ್ನು ಕೊಟ್ಟಿದ್ದೇನೆ ಅದೇ ರೀತಿ ನನ್ನ ಅವಧಿಯಲ್ಲಿ ಕ್ಷೇತ್ರಕ್ಕೆ ನನ್ನ ಕೈಯಲ್ಲಿ ಸಾಧ್ಯವಾದಷ್ಟು ಅನುದಾನವನ್ನು ತಂದು ಎಲ್ಲಾ ಕಾಮಗಾರಿಗಳನ್ನು ಮಾಡಿಸಿ  ಕ್ಷೇತ್ರವನ್ನು ಅಭಿವೃದ್ಧಿ ಮಾಡುವ ಕನಸನ್ನು ಹೊತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಮುಂಜುನಾಥ್.ಬಿಜೆಪಿ ಮಂಡಲ ಅಧ್ಯಕ್ಷರಾದ ಉಮಾರವಿಪ್ರಕಾಶ್.ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ.ನಗರ ಆಧ್ಯಕ್ಷರಾದ ಹೇಮಂತ್.ಎಸ್ಸಿ ಮೋರ್ಚಾ ದೇವರಾಜ್.ಹಿಂದುಳಿದ ಮೋರ್ಚಾ ಬಾಬು.ಮುಖಂಡರಾದ ಧರ್ಮ ಮರಸು.ಗಣೇಶ್ ಭೈರಾಪುರ. ಹೊಸೂರು ದೊರೆ ಗೌಡ,ನವೀನ್ ದಡದಹಳ್ಳಿ.ಆನಂದ್ ಹೊಸಹಳ್ಳಿ.ಪ.ಪಂ ಮಾಜಿ ಸದಸ್ಯರಾದ ತೌಪೀಕ್.ಸ್ನೇಕ್ ಬಾಬು.ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


       

Related posts

ಅರೇ ಹಳ್ಳಿ ಬಳಿ ಇನ್ನೋವಾ ಕಾರು ಪಲ್ಟಿ

Bimba Prakashana

ಹುರುಡಿ ವಿಶ್ವನಾಥ್ ವಿರುದ್ಧ ಪ್ರತಿಭಟನೆ

Bimba Prakashana

ಬೇಲೂರು ನವರಾತ್ರಿ ಮಂಟಪಕ್ಕೆ ಕುಸಿತ ಭೀತಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More