Blog

ನೌಕರರ ಸಂಘದಿಂದ ಉಪ ವಿಭಾಗ ಅಧಿಕಾರಿ ಭೇಟಿ

ಸಕಲೇಶಪುರದಲ್ಲಿ ನೂತನ ಉಪವಿಭಾಗಾಧಿಕಾರಿಯನ್ನು ಭೇಟಿ ಮಾಡಿದ ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘ.

ಸಕಲೇಶಪುರ: ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಸಕಲೇಶಪುರ ಉಪವಿಭಾಗದ ನೂತನ ಉಪವಿಭಾಗಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿರುವ ಹುಲ್ಲುಮನಿ ತಿಮ್ಮಣ್ಣ (KAS) ಅವರನ್ನು ಆತ್ಮೀಯವಾಗಿ ಭೇಟಿ ಮಾಡಿ ಗೌರವಿಸಿ ಭವ್ಯವಾಗಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಶುಭಾಶಯಗಳನ್ನು ಕೋರಿ, ತಾಲೂಕಿನಲ್ಲಿ ಉತ್ತಮ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

ಪ್ರತಿಕ್ರಿಯೆ ನೀಡಿದ ನೂತನ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಅವರು ಜನಪರ ಆಡಳಿತಕ್ಕೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವುದಾಗಿ ಭರವಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ಶಾಂತ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ತಮ್ಮಣ್ಣಶೆಟ್ಟಿ ವೈ.ಎಸ್., ಕಾರ್ಯದರ್ಶಿ ಜಗದೀಶ್ ಎನ್.ಎನ್., ನಿವೃತ್ತ ಪಿಡಿಓಗಳಾದ ಕೊಮರಯ್ಯ ಮತ್ತು ನಿಂಗಯ್ಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಖಜಾಂಚಿಯಾದ ಸಲೀಂ, ನಿರ್ದೇಶಕರಾದ ವೆಂಕಟೇಶ್, ಸ್ವಾಮಿನಾಯಕ್ ಹಾಗೂ ಶೇಖರ್ ಉಪಸ್ಥಿತರಿದ್ದರು.

Related posts

ಸಕಲೇಶಪುರದ ಹಲವು ಕಡೆ ನಾಳೆ ಬುಧವಾರ ವಿದ್ಯುತ್ ವ್ಯತ್ಯಾಸ

Bimba Prakashana

ಕರ್ನಾಟಕ ಪಬ್ಲಿಕ್ ಶಾಲೆಗೆ ಚಾಂಪಿಯನ್ ಶಿಪ್

Bimba Prakashana

ಬೆಳಗೋಡು ನಲ್ಲಿ ಪ್ರತಿಭಾ ಕಾರಂಜಿ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More