Blog

ಸಕಲೇಶಪುರದಲ್ಲಿ ಕಾಫಿ ದಿನಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮ

ಕಾಫಿ ದಿನಾಚರಣೆಯಲ್ಲಿ 8 ಸಾವಿರ ಕಪ್ ಉಚಿತ ಕಾಫಿ; ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಪಾಲ್ಗೊಳ್ಳಲು ಮನವಿ.

ಸಕಲೇಶಪುರ: ಕಾಫಿ ದಿನಾಚರಣೆಯ ಅಂಗವಾಗಿ ಅ.1ರಂದು ಸಕಲೇಶಪುರ–ಹಾಸನ ರಾಷ್ಟ್ರೀಯ ಹೆದ್ದಾರಿ 75ರ ದಿ ಒಸ್ಸೂರು ಹೋಟೆಲ್ ಸಮೀಪ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರ ಕಪ್‌ಗಳಷ್ಟು ಕಾಫಿಯನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಮೂಕಾಂಬಿಕಾ ಟ್ರೇಡರ್ಸ್, ಕುಂಬಾರಡಿ ಮಾಲೀಕ ಹಾಗೂ ಕಾಫಿ ಬೆಳೆಗಾರ ಅಶೋಕ್ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿವಿಧ ವಿಧಾನಗಳಲ್ಲಿ ಉತ್ತಮ ಗುಣಮಟ್ಟದ ಕಾಫಿಯನ್ನು ತಯಾರಿಸಿ ಕಾಫಿ ಪ್ರಿಯರಿಗೆ ಪರಿಚಯಿಸಲಾಗುವುದು. ನಾನೊಬ್ಬ ಕಾಫಿ ಬೆಳೆಗಾರನಾಗಿ  ಕಾಫಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ, ಮಲೆನಾಡಿನ ಸ್ಥಳೀಯ ಕಾಫಿಯ ನೈಜ ರುಚಿ, ಪರಿಮಳ ಹಾಗೂ ವೈಶಿಷ್ಟ್ಯವನ್ನು ಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಅ.1ರಂದು ನಡೆಯಲಿರುವ ಕಾಫಿ ದಿನಾಚರಣೆಗೆ ಜಿಲ್ಲೆಯ ಕಾಫಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿವಿಧ ಬಗೆಯ ಕಾಫಿಯನ್ನು ಸವಿದು, ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಬೇಕು ಎಂದು ಅಶೋಕ್ ಮನವಿ ಮಾಡಿದ್ದಾರೆ.

ಸ್ಥಳೀಯ ಕಾಫಿಯ ವೈಶಿಷ್ಟ್ಯವನ್ನು ಪರಿಚಯಿಸುವುದರ ಜೊತೆಗೆ, ಕಾಫಿ ಬೆಳೆಗಾರರು, ಕಾಫಿ ಪ್ರಿಯರು ಹಾಗೂ ಸಾರ್ವಜನಿಕರನ್ನು ಒಂದೆಡೆ ಸೇರಿಸುವ ಮೂಲಕ ಕಾಫಿ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Related posts

ಶಾಸಕರಿಂದ ಅಧಿಕಾರ ದುರುಪಯೋಗ – ಅಧಿಕಾರಿಗಳ ತೇಜೋವದೆ

Bimba Prakashana

ಸಹಕಾರ ಸಂಘಗಳ ಏಳಿಗೆಗೆ ಎಲ್ಲರೂ ಕೈ ಜೋಡಿಸಿ – ಜಗದೀಶ್

Bimba Prakashana

ಹಾನು ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More