Blog

ಹಾನು ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಮಹಾ ಸಭೆ

ಹಾನು ಬಾಳು ಕೃಷಿ ಪತ್ತಿನ ಸಹಕಾರ ಸಂಘ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಜರಗಿತು.

ಸಂಘದ ಅಧ್ಯಕ್ಷರಾದ ರಾಜೀವ್ ಗೌಡ ಮದನಾಪುರ ನೇತೃತ್ವದಲ್ಲಿ ನಡೆದ ಈ ಮಹಾಸಭೆಯಲ್ಲಿ ಶಾಸಕ ಸಿಮೆಂಟ್ ಮಂಜುನಾಥ್, ಮಾಜಿ ಶಾಸಕ ಹೆಚ್ ಎಂ ವಿಶ್ವನಾಥ್, ಹಾಗೂ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂಘವು 50 ಕೋಟಿ ವ್ಯವಹಾರ ನಡೆಸಿರುವ ಬಗ್ಗೆ ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.

ಶಾಸಕ ಸಿಮೆಂಟ್ ಮಂಜುನಾಥ್ ಭಾಗವಹಿಸಿ ಗ್ರಾಮೀಣ ಜನರ ಬದುಕಿಗೆ ಸಹಕಾರಿಯಾಗಿ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಮಾಜಿ ಶಾಸಕ ಹೆಚ್ ಎಂ ವಿಶ್ವನಾಥ್ ಮಾತನಾಡಿ ಈ ಸಹಕಾರ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿ ಜನರಿಗೆ ಸಹಕಾರಿ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಿಮೆಂಟ್ ಮಂಜುನಾಥ್ ರನ್ನು ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.

ಸಂಘದ ಸಿಬ್ಬಂದಿ ಪ್ರಸನ್ನ ರಿಗೆ ಸನ್ಮಾನ ಮಾಡಲಾಯಿತು

ಸಂಘದ ಅಧ್ಯಕ್ಷರಾದ ರಾಜೀವ ಗೌಡರು ಮಾತನಾಡಿ ಸಂಘದ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಮಾಜಿ ಶಾಸಕ ಹೆಚ್ ಎಂ ವಿಶ್ವನಾಥ್ ರು ಸಂಘ ಉಳಿಸಲು ಹೋರಾಟ ಮಾಡಿರುವ ಬಗ್ಗೆ ತಿಳಿಸಿದರು. ಸಂಘದ ಯಶಸ್ಸಿನಲ್ಲಿ ಪಾಲ್ಗೊಂಡವರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಅಶೋಕ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Related posts

ಹಾಡ್ಯ ಸರಕಾರಿ ಶಾಲೆ ವಿಲೀನಕ್ಕೆ ಗ್ರಾಮಸ್ಥರ ವಿರೋಧ

Bimba Prakashana

ಅರೇಕೆರೆ ಸರ್ಕಾರಿ ಹಿರಿಯ ಹಿ ಪ್ರಾ ಶಾಲೆಯಲ್ಲಿ ಒಂದೇ ಶೌಚಾಲಯ

Bimba Prakashana

ಹೆತ್ತೂರು ಸರಕಾರಿ ಪದವಿ ಪೂರ್ವ ಕಾಲೇಜು ಮಕ್ಕಳಿಗೆ ನೋಟ್ ಬುಕ್ ವಿತರಣೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More