Blog

ಕದಾಳು ಗ್ರಾಮದಲ್ಲಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

🔴ಆಲೂರು ತಾಲೂಕಿನ ಕದಾಳು ಗ್ರಾಮದಲ್ಲಿ ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರಲ್ಲಿ ನಿರಾಳತೆ

ಆಲೂರು.ಕಳೆದೊಂದು ತಿಂಗಳಿಂದ ಗ್ರಾಮದೊಳಗೆ ಆಗಾಗ್ಗೆ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಾಲೂಕಿನ ಕದಾಳು ಗ್ರಾಮದಲ್ಲಿ ನಡೆದಿದೆ.

ಒಂದು ತಿಂಗಳಿಂದ ಕದಾಳು ಗ್ರಾಮದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿತ್ತು. ರಾತ್ರಿ ಗ್ರಾಮದೊಳಗೆ ನುಗ್ಗುತ್ತಿದ್ದ ಚಿರತೆ ಕುರಿ ಹಾಗೂ ನಾಯಿಗಳನ್ನು ತಿಂದು ಹಾಕುತ್ತಿತ್ತು. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದರು.

ಗ್ರಾಮದ ರಘು ಎಂಬುವರ ಮನೆಯ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿಯೂ ಚಿರತೆ ಓಡಾಡುತ್ತಿರುವ ದೃಶ್ಯ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚಿರತೆಯನ್ನು ಸೆರೆ ಹಿಡಿದು ಗ್ರಾಮಸ್ಥರಿಗೆ ರಕ್ಷಣೆ ಒದಗಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.

ಕದಾಳು ಗ್ರಾಮದ ಹಿರಿಯ ಮುಖಂಡ ಲೋಕೇಶ್ ಮಾತನಾಡಿ ಕಳೆದ ಎರಡು ವರ್ಷಗಳಿಂದ ನಮ್ಮ ಊರಿನಲ್ಲಿ ಚಿರತೆಯ ಚಲನವಲನ ಕಂಡುಬರುತ್ತಿತ್ತು ನಾವು ಅರಣ್ಯ ಇಲಾಖೆಗೆ ಕರೆ ಮಾಡಿ ಚಿರತೆಯನ್ನು ಹಿಡಿಯಲು ಮನವಿ ಸಲ್ಲಿಸಿದ್ದೆವು ಇದಕ್ಕೆ ಸ್ಪಂದಿಸಿದ ಅರಣ್ಯ ಇಲಾಖೆ ಚಿರತೆ ಹಿಡಿಯಲು ಬೋನನ್ನು ಅಳವಡಿಸಿದ್ದರು. ಚಿರತೆ ಬೋನಿಗೆ ಬಿದ್ದಿದ್ದು  ತುಂಬಾ ಸಂತೋಷಕರ ವಿಚಾರವಾಗಿದೆ ಎಂದು ಮಾತನಾಡಿದಲ್ಲದೆ ನಮ್ಮ ಗ್ರಾಮದಲ್ಲಿ ನೆಮ್ಮದಿಯಿಂದ ಓಡಾಡಲು ಅವಕಾಶ ಮಾಡಿರುವ ಅರಣ್ಯ ಇಲಾಖೆಗೆ ಧನ್ಯವಾದಗಳು ಎಂದು ಮಾತನಾಡಿದರು

ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಗೆ ಶುಕ್ರವಾರ ಗ್ರಾಮದಲ್ಲಿ ಬೋನು ಇರಿಸಿದ್ದರು. ಶನಿವಾರ ಬೆಳಗಿನ ಜಾವ ಅಂದಾಜು ಮೂರು ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಚಿರತೆಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಯಿತು. ಚಿರತೆ ಸೆರೆಯಾಗಿರುವ ಸುದ್ದಿ ತಿಳಿದು ಕದಾಳು ಗಾಮಸರು ನೆಮದಿಯ ನಿಟುಸಿರು ಬಿಟಿದ್ದಾರೆ.

Related posts

ಮನೆ ಮನೆಯಲ್ಲಿ ಕವಿ ಗೋಷ್ಠಿ

Bimba Prakashana

ಕಾಡಾನೆ ಹಾವಳಿ ವಿರುದ್ಧ ಬೃಹತ್ ಜಾಥಾ

Bimba Prakashana

ಪದವಿಗಳ ಸರಮಾಲೆ ಹಾಕಿ ಕೊಂಡ ಶತೇಂದ್ರ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More