ಆಲೂರು ತಾಲೂಕು ರೈಲ್ವೆ ನಿಲ್ದಾಣಕ್ಕೆ ಅನ್ಯಾಯವಾಗಿರುವ ಬಗ್ಗೆ ರಾಧಮ್ಮ ಜನಸ್ಪಂದನ ಅಧ್ಯಕ್ಷರಾಗಿರುವ ಹೇಮಂತ್ ಕುಮಾರ್ ಅವರು ಮಾಹಿತಿ ಹಕ್ಕಿನಿಂದ ಪಡೆದಿರುವ ದಾಖಲಾತಿ ಸಮೇತ ಬಹಿರಂಗಗೊಳಿಸಿದ್ದಾರೆ….
ಆಲೂರು ತಾಲೂಕು ಕೇಂದ್ರದಲ್ಲಿ ರೈಲ್ವೆ ನಿಲ್ದಾಣವಿದ್ದು ಇಲ್ಲಿ ರೈಲ್ವೆ ಸಿಬ್ಬಂದಿಗಳು ಮತ್ತು ಸ್ಟೇಷನ್ ಮಾಸ್ಟರ್ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದು ನಿಲ್ದಾಣದಲ್ಲಿ ಪ್ರತಿನಿತ್ಯ ನಾಲ್ಕು ರೈಲ್ವೆ ಎಕ್ಸ್ಪ್ರೆಸ್ ಗಳ ಸಂಚರಿಸುತ್ತಿದ್ದು ನಿಲಗಡೇ ಮಾತ್ರ ರೈಲ್ವೆ ಇಲಾಖೆಯಿಂದ ನೀಡುತ್ತಿಲ್ಲ ಇದನ್ನ ನಾವು ಗಮನಿಸಿ, ರಾಧಮ್ಮ ಜನ ಸ್ಪಂದನ ಸಂಸ್ಥೆಯಿಂದ 2022 ವರ್ಷದಿಂದ ಹೋರಾಟಕ್ಕಿಳಿದು ಮೈಸೂರಿನ ರೈಲ್ವೆ ಬೋರ್ಡ್ ಹುಬ್ಬಳ್ಳಿಯ ನೈರುತ್ಯ ಇಲಾಖೆಯ ರೈಲ್ವೆ ಬೋರ್ಡ್ ದೆಹಲಿಯ ರೈಲ್ವೆ ಬೋರ್ಡ್ ಆಗಿನ ಕೇಂದ್ರ ಸರ್ಕಾರದ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಭೇಟಿ ಮಾಡಿ ಆಲೂರು ರೈಲ್ವೆ ನಿಲ್ದಾಣದ ಬಗ್ಗೆ ರೈಲು ನಿಲ್ಲುಗಡೆಗಾಗಿ ಮನವರಿಕೆ ಮಾಡಿಕೊಟ್ಟ ಪ್ರಯತ್ನದಿಂದ 2024 ಫೆಬ್ರವರಿ ತಿಂಗಳಿಂದ ಪ್ರಾಯೋಗಿಕವಾಗಿ ಕಾರವಾರ ಎಕ್ಸ್ಪ್ರೆಸ್ ರೈಲು ನಿಲುಗಡೆ ಆಲೂರು ನಿಲ್ದಾಣ ಗೆ ತರುವುದರಲ್ಲಿ ಯಶಸ್ವಿಯಾಗಿದ್ದವು.
ನಂತರದ ದಿನಗಳಲ್ಲಿ 2024 ಡಿಸೆಂಬರ್ 4ರಂದು ಆದಾಯದ ಟಿಕೆಟ್ ಹಣ ಸಂಗ್ರಹ ಕಡಿಮೆ ಇದೆ ಎಂದು ಆದೇಶವನ್ನು ರದ್ದುಪಡಿಸಿದರು… ರೈಲು ನಿಲುಗಡೆ ಆದೇಶ ರದ್ದಾದ ಮೇಲೆ ಜನಪ್ರನಿಧಿಗಳು ಕ್ಷೇತ್ರದ ಶಾಸಕರು ಕೇವಲ ಮಾಧ್ಯಮಗಳಲ್ಲಿ ಸಚಿವರ ಬಳಿ ಮನವಿ ಸಲ್ಲಿಸುತ್ತೇನೆ. ಕೇಂದ್ರ ಸರ್ಕಾರ ಗಮನಕ್ಕೆ ತರುತ್ತೇನೆ ಎಂದು ಭರವಸೆಗಳು ಕೊಟ್ಟರೆ ಹೊರತು ಯಾವುದೇ ಅಂಕಿ ಅಂಶಗಳನ್ನ ಸಂಗ್ರಹಿಸಿ ರೈಲ್ವೆ ಅಧಿಕಾರಿಗಳಿಗೆ ಸಮರ್ಪಕವಾಗಿ ವಿವರಿಸಲಿಲ್ಲ…
ರೈಲ್ವೆ ನಿಲ್ದಾಣಕ್ಕೆ ಶಾಸಕರಾದ ಸಿಮೆಂಟ್ ಮಂಜು ಅವರು ಹಸಿರು ನಿಶಾನೆ ತೋರುವ ಸಂದರ್ಭದಲ್ಲಿ ಹಾಜರಾತಿಯನ್ನು ಕೊಟ್ಟು ಮೂಲಭೂತ ಸೌಕರ್ಯಕ್ಕೆ ಒತ್ತು ಕೊಡಲಾಗುವುದು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದರು.
ತದನಂತರ ದಿನಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಗಳಿಗೆ ನಾಮ ಫಲಕವು ಇಲ್ಲ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲು ಇಲ್ಲ ಇದರ ಬಗ್ಗೆ ಮಾಧ್ಯಮಗಳು ಅನೇಕ ಬಾರಿ ಸ್ಥಳೀಯ ಶಾಸಕರನ್ನು ಪ್ರಶ್ನಿಸಿದಾಗ ತಕ್ಷಣವೇ ಸ್ಪಂದಿಸುತ್ತೇನೆ ಎಂದು ಶಾಸಕರು ಹೇಳಿಕೆ ನೀಡಿದರೆ ಹೊರತು ಯಾವುದೇ ಕಾರ್ಯವನ್ನು ಮಾಡಿಲ್ಲ ಎಂದು ಜನಸ್ಪಂದನ ಅಧ್ಯಕ್ಷ ಹೇಮಂತ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ…
ಆಲೂರು ರೈಲ್ವೆ ನಿಲ್ದಾಣಕ್ಕೆ ಜನಪ್ರತಿನಿಧಿಗಳು ಇಲ್ಲಿಯವರೆಗೂ ಸರಿಯಾದ ಅಂಕಿ ಅಂಶವನ್ನು ಪಡೆದುಕೊಂಡು ಸಚಿವರ ಬಳಿ ಅಥವಾ ರೈಲ್ವೆ ಅಧಿಕಾರಿಗಳ ಬಳಿ ಹೋಗಿ ಚರ್ಚಿಸಿಯೇ ಇಲ್ಲ ಕೇವಲ ಸಚಿವರ ಬಳಿಗೆ ಹೋಗಿ ಫೋಟೋವನ್ನು ತೆಗೆಸಿಕೊಂಡು ಮಾಧ್ಯಮಕ್ಕೆ ನೀಡುವುದೇ ಇವರ ಸಾಧನೆಯಾಗಿದೆ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಾವು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಹೊಳೆನರಸಿಪುರ ತಾಲೂಕಿನ ಮಾವಿನಕೆರೆ ರೈಲ್ವೆ ನಿಲ್ದಾಣದ ರೈಲ್ವೆ ಟಿಕೆಟ್ ಹಣದ ತಿಂಗಳಿಗೆ ಸಂಗ್ರವಾಗುವ ಮಾಹಿತಿ ಮತ್ತು ಅರಸಿಕೆರೆಯ ಭಾಗೇಶ್ವರ ರೈಲ್ವೆ ನಿಲ್ದಾಣದ ಮಾಹಿತಿ ಚನ್ನರಾಯಪಟ್ಟಣ ತಾಲೂಕಿನ ಡಿ ಸಮುದ್ರವಳ್ಳಿ ನಿಲ್ದಾಣದ ರೈಲ್ವೆ ಟಿಕೆಟ್ ಹಣ ಸಂಗ್ರಹದ ಮಾಹಿತಿಯನ್ನ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ರಾಧಮ್ಮ ಜನಸ್ಪಂದನ ಸಂಸ್ಥೆಯಿಂದ ಪಡೆಯಲಾಗಿದೆ… ಈ ದಾಖಲಾತಿಗಳನ್ನ ಮಾಧ್ಯಮ ಮಿತ್ರರೊಂದಿಗೆ ಕ್ಷೇತ್ರದ ಸಮಸ್ತ ಜನರಿಗೆ ತಲುಪಿಸುವ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ….
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ, ಸಮುದ್ರವಳ್ಳಿ ರೈಲ್ವೆ ನಿಲ್ದಾಣದಲ್ಲಿ ತಿಂಗಳಿಗೆ 7,235 ಹಣವು ರೈಲ್ವೆ ಟಿಕೆಟ್ ನಿಂದ ಸಂಗ್ರಹವಾಗುತ್ತಿದೆ ಪ್ರತಿನಿತ್ಯ ನಾಲ್ಕು ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುತ್ತವೆ… ಮೈಸೂರು ಎಕ್ಸ್ಪ್ರೆಸ್ ಮತ್ತು ಯಶವಂತಪುರ ಎಕ್ಸ್ಪ್ರೆಸ್ ಕೆಎಸ್ಆರ್ ಮೆಮೊ ರೈಲು ಹಾಗೂ ಹಾಸನ ಮೆಮೊ ರೈಲು… ದಯಮಾಡಿ ಮಾಧ್ಯಮ ಮಿತ್ರರೇ ಗಮನಿಸಿ ನಮ್ಮ ಆಲೂರು ರೈಲ್ವೆ ನಿಲ್ದಾಣ ಈ ರೈಲು ನಿಲ್ದಾಣಕ್ಕೆ ಹೋಲಿಕೆ ಮಾಡಿ ನೋಡಿದಾಗ ಒಂದು ರೈಲು ನಿಲುಗಡೆಯಿಂದನೇ ಟಿಕೆಟ್ನಿಂದ ಸಂಗ್ರಹವಾದ ಹಣ ಆದಾಯದ ಸಂಗ್ರಹ ಹೆಚ್ಚಿರುತ್ತದೆ…
ಮಾವಿನಕಾಯಿ ರೈಲ್ವೆ ನಿಲ್ದಾಣದಲ್ಲಿ ಪ್ರತಿನಿತ್ಯ ಎಂಟು ರೈಲಿನಲ್ಲಿ ನಿಲ್ಗಡೆಯಾಗುತ್ತಿದ್ದು ಸರಿ ಸುಮಾರು ಎಂಟು ರೈಲುಗಳಿಂದ 33,065 ತಿಂಗಳಿಗೆ ಸಂಗ್ರವಾಗುತ್ತಿದೆ…
ಬಾಗೇಶ್ಪುರ ರೈಲ್ವೆ ನಿಲ್ದಾಣದಲ್ಲಿ ತಿಂಗಳಿಗೆ 20,800 ಟಿಕೆಟ್ ನಿಂದ ರೈಲು ನಿಲ್ದಾಣದಲ್ಲಿ ಸಂಗ್ರಹವಾಗುತ್ತಿದೆ..
ಆಲೂರು ರೈಲ್ವೆ ನಿಲ್ದಾಣದಲ್ಲಿ 2024 ಅಕ್ಟೋಬರ್ ತಿಂಗಳಲ್ಲಿ 9,800 ಮತ್ತು ನವಂಬರ್ ತಿಂಗಳಲ್ಲಿ 11,200 ಹಣ ರೈಲ್ವೆ ಟಿಕೆಟ್ ನಿಂದ ಸಂಗ್ರಹವಾಗಿರುತ್ತದೆ…
ಅಂಕಿ ಅಂಶಗಳನ್ನು ಮಾಹಿತಿಯೊಂದಿಗೆ ಪರಿಗಣಿಸಿದಾಗ ಆಲೂರು ತಾಲೂಕಿಗೆ ರೈಲ್ವೆ ಇಲಾಖೆಯಿಂದ ಇಷ್ಟು ಅನ್ಯಾಯವಾದರೂ ಕ್ಷೇತ್ರದ ಜನಪ್ರತಿನಿಧಿಗಳು ಈ ಅಂಕಿ ಅಂಶವನ್ನು ಸಂಗ್ರಹಿಸುವುದರಲ್ಲಿ ವಿಫಲವಾಗಿ ರೈಲ್ವೆ ಅಧಿಕಾರಿಗಳಿಗೆ ಸಮರ್ಪಕವಾಗಿ ಉತ್ತರ ನೀಡುವುದಕ್ಕೆ ನಿರಾಶಕ್ತಿ ತೋರಿಸಿದ್ದಾರೆ…
ಆದರೂ ತಾಲೂಕಿನ ಬಗ್ಗೆ ಅಧಿಕಾರ ದಲ್ಲಿದ್ದ ಜನಪ್ರತಿಗಳು ಕಳೆದ 25 ವರ್ಷದಿಂದನು ರೈಲ್ವೆ ನಿಲ್ದಾಣಕ್ಕೆ ಗಮನ ನೀಡದೆ ಕೇವಲ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾ ಕಾಲಾರಣ ಮಾಡಿಕೊಂಡು ತಾಲೂಕಿನ ನಾಗರಿಕರಿಗೆ ರೈಲ್ವೆ ಸೇವೆಯನ್ನು ಒದಗಿಸಿ ವಲ್ಲಿ ವಿಫಲರಾಗಿ ಕೇವಲ ರಾಜಕೀಯ ಭಾಷಣವನ್ನು ಮಾಡುವುದೇ ಇವರ ಸಾಧನೆಯಾಗಿದೆ ಎಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನಲ್ಲಿ ಮಾವಿನಕೆರೆ ನಿಲ್ದಾಣದಲ್ಲಿ ನಿಲ್ಲುವ ಎಕ್ಸ್ಪ್ರೆಸ್ ರೈಲುಗಳ ಸಂಖ್ಯೆ ಹೋಲಿಸಿಕೊಂಡರೆ ಆಲೂರು ತಾಲೂಕಿಗೆ ಏನೇನು ಇಲ್ಲ ಇದಕ್ಕೆ ಸಂಪೂರ್ಣ ಹೊಣೆ ಕ್ಷೇತ್ರದ ಜನಪ್ರತಿನಿಧಿಗಳೇ ಹೊರಬೇಕು.. ಎಂದು ಮಲೆನಾಡು ಶಾಡೋ ಹೇಮಂತ್ ಕುಮಾರ್ ಅವರು ಪ್ರತಿಕ್ರಿಸಿದ್ದಾರೆ…




