Blog

ಡಾ. ಬಿ ಆರ್ ಅಂಬೇಡ್ಕರ್ ರ ಜನ್ಮ ದಿನಾಚರಣೆ



ವನಗೂರು  ಗ್ರಾಮ ಪಂಚಾಯಿತಿ ಮತ್ತು ಮಲೆನಾಡು ಭೀಮ ಧ್ವನಿ
ಸಂಘ( ರಿ ) ಸಂಯುಕ್ತ ಆಶ್ರಯ ದಲ್ಲಿ ವನಗೂರು ಕೂಡರಸ್ತೆ ಯಲ್ಲಿ
ಡಾ ಬಿ ಆರ್ ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ ಮಾಡಲಾಯಿತು.


ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹೇಮಂತ್ ಕುಮಾರ್ ಮತ್ತು ಸದಸ್ಯರು ಹಿರಿಯ ಮುಖಂಡರಾದ ರಾಮಚಂದ್ರ ರಾವ್ ಮತ್ತು ಮಲೆನಾಡು ಭೀಮ ಧ್ವನಿ ಅಧ್ಯಕ್ಷರಾದ ನಾಗೇಶ್ ಎಂ ಎಚ್ ಮಾಗೇರಿ ಮತ್ತು ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ  ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ಪಂಚಾಯತಿ ಕಾರ್ಯದರ್ಶಿ ಗಳಾದ ಮೋಹನ್ ರವರು ಸಂವಿಧಾನ ಪೀಠಿಕೆ ಓದಿದರು.

ರಾಮಚಂದ್ರ ರಾವ್ ಮಾತನಾಡಿ
ಬಿ ಆರ್ ಅಂಬೇಡ್ಕರ್ ರವರ ಶುಭಾಶಯ ತಿಳಿಸಿದರು.

ನಾಗೇಶ್ ಎಂ ಎಚ್ ಮಾಗೇರಿ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ರವರು ಬರೆದಿರುವ ಸಂವಿಧಾನ ಪೀಠಿಕೆ ಕುರಿತು ಕೆಲವು ವ್ಯಕ್ತಿತ್ವದ ಮಾಹಿತಿ ನೀಡಿದರು.

ಪಂಚಾಯತಿ ಸದಸ್ಯರಾದ ನಾರಾಯಣ ರವರು ಮಾತನಾಡಿ
ಡಾ ಬಿ ಆರ್ ಅಂಬೇಡ್ಕರ್ ರವರ ಜೀವನ ಮತ್ತು ನಡೆದು ಬಂದ ರೀತಿ ಮತ್ತು ಹಿಂದೂ ಧರ್ಮದಲ್ಲಿ ಇಲ್ಲಿರುವ  ಜಾತಿ ಭೇದ  ತಾರತಮ್ಯ ಇರುವುದರಿಂದ ನಾನು ಗೊತ್ತಿಲ್ಲದೇ ಹಿಂದುವಾಗಿ ಹುಟ್ಟಿದ್ದೇನೆ ಆದರೇ ನಾನು ಹಿಂದೂ ಆಗಿ ಸಾಯುವುದಿಲ್ಲ
ಹಿಂದೂ ಧರ್ಮ ತ್ಯಜಿಸಿ ಬೌದ್ಧ ಧರ್ಮ ಸ್ವೀಕರಿಸಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತಿ  ಸದಸ್ಯರುಗಳಾದ ಜಯ ಶ್ರೀ
ಮತ್ತು ರಂಜಿತಾ ಮತ್ತು  ಸಿಬ್ಬಂದಿಗಳು ಮತ್ತು ಗ್ರಂಥಾಲಯ ಪಾಲಕರು
ಮಲೆನಾಡು ಭೀಮ ಧ್ವನಿ ಸಂಘ (ರಿ )  ಉಪಾಧ್ಯಕ್ಷರಾದ ಪವನ್ ಕಾರ್ಯದರ್ಶಿ. ಸುರೇಶ್ ಸದಸ್ಯರಾದ ವಸಂತ ವಿ ಎಂ, ರವೀಶ್, ಅಭಿ, ವಿರೇಶ್, ಮಹೇಶ್, ಉದಯ್, ಜೀವನ್,
ಎಲ್ಲಾ ಗ್ರಾಮಸ್ಥರು ಭಾಗವಹಿಸಿದ್ದರು.

Related posts

ಅಪಘಾತ – ಬೇಲೂರು ಹಾಗೂ ಚಿಕ್ಕಮಗಳೂರುವಿನ ಹಲವರು ಮೃತ್ಯು

Bimba Prakashana

ಮೀಸಲು ಕ್ಷೇತ್ರದಲ್ಲಿ ದಲಿತರಿಗೆ ರಕ್ಷಣೆ ಇಲ್ಲವೇ

Bimba Prakashana

ಕಾರಗೋಡು ಗ್ರಾಮದಲ್ಲಿ ನಾಲ್ಕು ಕಡೆ ಕಳ್ಳತನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More