ಆಲೂರು. ತಾಲೂಕಿನ ಆಸ್ಪತ್ರೆಯ ಮೆಡಿಕಲ್ ನಲ್ಲಿ ಯಾವುದೇ ರೀತಿಯ ಮಾತ್ರೆಗಳು ಇಲ್ಲ ಹಾಗೂ ಔಷಧಿಗಳು ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಯಾರೋ ಅಪರಿಚಿತ ವ್ಯಕ್ತಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿದ್ದರು.
ಇದನ್ನು ಮನಗಂಡ ಆಲೂರು ತಾಲೂಕಿನ ಸಿವಿಲ್ ಜಡ್ಜ್ ನ್ಯಾಯಾಧೀಶರು ಭೇಟಿ ನೀಡಿ ಆಸ್ಪತ್ರೆಯಲ್ಲಿರುವ ಮಾತ್ರೆಗಳು ಹಾಗೂ ಔಷಧಿಗಳನ್ನು ತಪಾಸಣೆ ಮಾಡಿದರು ಅಲ್ಲಿ ಯಾವುದೇ ರೀತಿ ಔಷಧಿಗಳು ಹಾಗೂ ಮಾತ್ರೆಗಳು ಕೊರತೆ ಇಲ್ಲದಿರುವುದನ್ನು ಕಣ್ಣಾರೆ ಕಂಡು ಯಾರು ತಾಲೂಕು ಆಸ್ಪತ್ರೆಗೆ ಅಪಪ್ರಚಾರ ಮಾಡಿರುವವರನ್ನು ಅವರಿಗೆ ಕಾನೂನು ಮುಖಾಂತರ ಶಿಕ್ಷ ಕೊಡಿಸಿ ಎಂದು ಮಾತನಾಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮವಾದ ಸೌಲಭ್ಯವನ್ನು ನೀಡಿ ಎಂದು ಮಾತನಾಡಿದರು.
ನಂತರ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ನಮ್ಮ ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರದಿಂದ ನೀಡುವ ಎಲ್ಲಾ ಮಾತ್ರೆಗಳು ಔಷಧಿಗಳು ಲಭ್ಯವಿದೆ ಹಾಗೂ ಉತ್ತಮವಾದ ನಿರ್ವಹಣೆ ಮಾಡುತ್ತಿದ್ದಾರೆ ಕುಡಿಯುವ ನೀರು ಶೌಚಾಲಯ. ಐಸಿಯು. ಡಯಾಬಿಟಿಸ್ ಕೇಂದ್ರ. ಎಲ್ಲಾ ಕೊಠಡಿಗಳು ಶುಚಿತ್ವವಾಗಿದೆ ಯಾರೋ ಅಪರಿಚಿತ ವ್ಯಕ್ತಿ ಭೇಟಿ ನೀಡಿ ನಮ್ಮ ಸಿಬ್ಬಂದಿಯನ್ನು ಎದುರಿಸಿ ಸೋಶಿಯಲ್ ಮೀಡಿಯಾಗಳಲ್ಲಿ ಆಸ್ಪತ್ರೆಯಲ್ಲಿ ಮಾತ್ರೆಗಳಿಲ್ಲ ಔಷಧಿಗಳಿಲ್ಲ ಎಂದು ಅಪಪ್ರಚಾರ ಮಾಡಿದರೆ ಎಲ್ಲಾ ರೀತಿಯ ತಾಲೂಕು ದಾಸ್ತಾನು ಕೊಠಡಿಯಲ್ಲಿ ಔಷಧಿಗಳು ಇವೆ ಎಂದು ಮಾತನಾಡಿದಲ್ಲದೆ ಬುಧವಾರ ಸಂತೆ ಇರುವ ಕಾರಣ ರೋಗಿಗಳು ಹೆಚ್ಚಾದ ಕಾರಣ ನಮ್ಮ ಮೆಡಿಕಲ್ ನಲ್ಲಿ ಮಾತ್ರೆಗಳು ಖಾಲಿಯಾಗಿವೆ ನಂತರ ಆಸ್ಪತ್ರೆಯ ದಾಸ್ತಾನು ಕೊಠಡಿಗೆ ಹೋಗಿ ತರುವ ಹೊತ್ತಿನಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬಂದು ಈ ರೀತಿ ವಿಡಿಯೋ ಮಾಡಿ ನಮ್ಮ ತಾಲೂಕು ಆಸ್ಪತ್ರೆಗೆ ಮುಜುಗರ ತಂದಿರುತ್ತಾನೆ ಈತನ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾತನಾಡಿದಲ್ಲದೆ ಮಾಧ್ಯಮಗಳು ಸುಳ್ಳು ಪ್ರಚಾರ ಮಾಡಬಾರದು ಸತ್ಯಾನು ಸತ್ಯತೆಯನ್ನು ತಿಳಿದು ಬರೆಯಬೇಕೆಂದು ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ನಿಸಾರ್ ಫಾತಿಮಾ
ತಾಲೂಕು ಆಡಳಿತ ಅಧಿಕಾರಿ ಕಿಶೋರ್ ಕುಮಾರ್. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ವೈದ್ಯರು ಎಲ್ಲರೂ ಇದ್ದರು.
