ವರದಿ :
*ನಾಗೇಶ್ ಎಂ ಎಚ್ ಮಾಗೇರಿ*.
ಮೀಸಲು ವಿಧಾನ ಸಭಾ ಕ್ಷೇತ್ರದ ಶಾಸಕರು ಇದ್ದರು ದಲಿತರಿಗೆ ರಕ್ಷಣೆ ಇಲ್ಲವೇ??
*ದಲಿತರ ಮನೆಯಿಂದ*
*ಡಾಲರ್ಸ್ ಕಾಲೋನಿಗೆ ಕಳಂಕವೇ?*
ಸಕಲೇಶಪುರ: ದೊಡ್ಡ ದೊಡ್ದ ಉದ್ಯಮಿಗಳ ಹಣದ ಆಸೆಗೆ ಬಲಿಯಾದ ತಾಲೋಕು ಆಡಳಿತ ದಲಿತ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಬಿ ಎಸ್ ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅತ್ನಿ ಹರೀಶ್ ಹೇಳಿದರು.
ಅವರು ಸಕಲೇಶಪುರ ಬಸವನಹಳ್ಳಿ ಹರಿಜನ ಕೇರಿ 0.20 ಗುಂಟೆ ಜಾಗದಲ್ಲಿ ಮಾದಿಗ ಸಮುದಾಯ ಸುಮಾರು 30 ಗುಡಿಸಲು ಹಾಕಿಕೊಂಡು ಇದ್ದರು.
ಡಾಲರ್ಸ್ ಕಾಲೂನಿ ಪಟ್ಟಣ ಸಮೀಪ ಇರುವುದರಿಂದ ಹೆಚ್ಚು ಬೆಲೆ ನಿವೇಶನಕ್ಕೆ ಬರುತ್ತದೆ. ಎಂದು ಗೊತ್ತಾಗಿ ಸ್ಥಳೀಯರು ಶೇಡ್ ಹಾಕಿ ವಾಸಿಸಲು ಶುರುವಾದರು. ಆಗ ಸ್ಥಳೀಯ ಮಾಜಿ ಕೌನ್ಸಿಲರ್ ಒಬ್ಬರು ನಕಲಿ ದಾಖಲೆ ಸೃಷ್ಠಿಸಿ ಹರಿಜನ ಕೇರಿ ಜಾಗವನ್ನು ಬೇರೆ ಸಮುದಾಯ ದ ಇಬ್ಬರಿಗೆ ಪುರಸಭೆಯಿಂದ ನಕಲಿ ದಾಖಲೆ ಮಾಡಿರುವುದು ತಿಳಿದು 20 ಗುಂಟೆ ಜಾಗದಲ್ಲಿ ಸುಮಾರು 30 ಷಡ್ ಮಾಡಿ ವಾಸವಿರುತ್ತಾರೆ. ಅವರು ವಾಸ ಇರುವುದು ಡಾಲರ್ಸ್ ಕಾಲೊನಿ ಜಾಗದಲ್ಲಿ ಅಲ್ಲ,ಸರ್ಕಾರ ನಿಗದಿ ಮಾಡಿರುವ ಹರಿಜನ ಕೇರಿ ಎಂದು ದಾಖಲಿಸಿರುವ ಜಾಗದಲ್ಲಿ ಶೇಡ್ ಹಾಕಿದ್ದಾರೆ. ಮಾದಿಗರು ಮಾದರೂ ಅಂಬೇಡ್ಕರ್ ಬೋರ್ಡ್ ಹಾಕಿದರೆ . ಮತ್ತು ವಾಸ ಮಾಡುತ್ತಿದ್ದರೆ ಡಾಲರ್ಸ್ ಕಾಲೂನಿ ನಿವೇಶನಕ್ಕೆ ಕಡಿಮೆ ವ್ಯಾಲ್ಯೂ ಬರುತ್ತದೆ. 50 ಕೋಟಿಗೂ ಹೆಚ್ಚು ಲಾಸ್ ಆಗುತ್ತದೆ. ಎಂಬ ಕಾರಣಕ್ಕೆ ಈ ಜನರನ್ನು ಹೊರಗೆ ಕಳುಹಿಸಲು ಪಿತೂರಿ ನಡೆಸಿದೆ. ಜನರಿಗೆ ರಕ್ಷಣೆ ಕೊಡಬೇಕಾದ ಅಧಿಕಾರಿಗಳು ಉದ್ಯಮಿಗಳ ಹಣದ ಆಸೆಗೆ ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ.
ಗಂಡಸರೆಲ್ಲ ಲೋಡ್ ಇತರೆ ಕೆಲಸಗಳಿಗೆ ಹೋದ ಮೇಲೆ ಲಾಂಗು, ಮಚ್ಚು, ಹಾಕಿ ಸ್ಟಿಕ್ ಗಳನ್ನು ತಂದು ನೀವು ಬಿಟ್ಟು ಹೋಗಲಿಲ್ಲ ಅಂದರೆ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಎಂದು ಹೇಳಿ ಬಟ್ಟೆಗಳಿಗೆಲ್ಲ ಬೆಂಕಿ ಹಚ್ಚುವುದು, ಗಲಾಟೆ ಮಾಡಿವುದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ.
ಸರ್ಕಾರ ಎಸ್ಸಿ ರಿಜರ್ವ ಜಾಗ ಯಾಕೆ ಕಿತ್ತುಕೊಳ್ಳುತ್ತಿದ್ದೀರಿ ಇಲ್ಲಿ ವಾಸ ಮಾಡುತ್ತಿರುವ ಮಾದಿಗೆ ಸಮುದಾಯದ ಜನ ಮನುಷ್ಯರಲ್ಲವೇ? ಅವರು ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿಲ್ಲವೇ ಮನೆ ಜಾಗಕ್ಕೆ ಯಾಕೆ ತೊಂದರೆ ಕೊಡುತ್ತಿದ್ದೀರಿ ಎ೦ದು ಪ್ರಶ್ನಿಸಿದರು.
ಉಳ್ಳವರ ಪರವಾಗಿ ಪೋಲೀಸರು ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಜೈಲಿಗೂ ಕೂಡ ಕಳುಹಿಸಿದ್ದಾರೆ. ಅದರ ಉದ್ದೇಶ ಒಬ್ಬಿಬ್ಬರನ್ನು ಜೈಲಿಗೆ ಕಳುಹಿಸಿದರೆ ಬೇರೆಯವರಿಗೆ ಶಕ್ತಿ ಇಲ್ಲ. ವಿದ್ಯಾಭ್ಯಾಸ ಇಲ್ಲ. ಇವರ ದೈರ್ಯ ಕುಂದಿಸಬಹುದು ಇವರನ್ನು ಒಕ್ಕಲೆಬ್ಬಿಸಿದರೆ ನಮ್ಮ ಜಮೀನಿಗೆ ಬೆಲೆ ಬರುತ್ತದೆ. ಎಂದು ಹೀಗೆಲ್ಲ ಕುತಂತ್ರ ಮಾಡುತ್ತಿದ್ದಾರೆ. ತಾಲೋಕು ಆಡಳಿತಕ್ಕೆ ಗೊತ್ತು 20 ಗುಂಟೆ ಹರಿಜನ ಕೇರಿ ಜಾಗ ಎಲ್ಲಿದೆ ಎಂದು. ಈ ಜಾಗ ಪ್ರೈವೇಟ್ ಜಾಗ ಆಗಿದ್ದಲ್ಲಿ ಹರಿಜನ ಕೇರಿ 20 ಗುಂಟೆ ಜಾಗ ತೋರಿಸಿ ಎಂದು ಒತ್ತಾಯಿಸಿದರು.
*ಸಿಮೆಂಟ್ ಮಂಜಣ್ಣ ಬಡವರ ಪರ ಕೆಲಸ ಮಾಡಿ*
ಸಕಲೇಶಪುರ: ಓಟಾಕಿ ಗೆಲ್ಲಿಸಿದವರು ನಾವು ದುಡ್ಡಿಗಾಗಿ ಉಳ್ಳವರ ಪರ ಕೆಲಸಮಾಡಬೇಡಿ ಶಾಸಕ ಸಿಮೆಂಟ್ ಮಂಜಣ್ಣಾ ಅಧಿಕಾರಿಗಳಿಗೆ ಹೇಳಿ ನಮಗೆ ತೊಂದರೆ ನೀಡದಂತೆ ಎಂದು ಜನ ಕೇಳುತ್ತಿದ್ದಾರೆ. ಎಂದು ಅತ್ನಿ ಹರೀಶ್ ಹೇಳಿದರು
ಹರಿಜನ ಕೇರಿ ಗುಡಿಸಲು ವಿಚಾರ ಮಾತನಾಡುತ್ತಾ ಸಿಮೆಂಟ್ ಮಂಜಣ್ಣ ಗೆದ್ದಿರುವುದು ಮೀಸಲಾತಿಯಿಂದ ಎಸ್ಸಿ ಜನರ ಹಿತ ಕಾಯಬೇಕೇ ಹೊರತು ಬಲಾಡ್ಯರ ಮಾತು ಕೇಳಿ ದಲಿತರ ಒಕ್ಕಲೆಬ್ಬಿಸುವುದಕ್ಕೆ ಅಲ್ಲ, ಜಿಲ್ಲೆಯಲ್ಲಿ ಎಸ್ ಸಿ ಒಂದು ಸೀಟು ಇರುವುದು ಎಸ್ಸಿ ಜನರ ಮೇಲೆತ್ತುವುದಕ್ಕೆ. ನೀವು ಬಿಟ್ಟರೂ ಯಾರಾದರೊಬ್ಬ ನಮ್ಮ ಸಮಾಜದವರೇ ಗೆಲ್ತಾರೆ. ಮೀಸಲಾತಿ ಸಮುದಾಯದ ಬಿಕ್ಷೆ. ಆ ಬಿಕ್ಷೆಯಲ್ಲಿ ಗೆದ್ದು ಎಸ್ಸಿ ಸಮುದಾಯಕ್ಕೆ ಅನ್ಯಾಯ ಆಗುತ್ತಿರುವಾಗ ನ್ಯಾಯ ಕೊಡಿಸೋ ದಿರಲಿ. ಸಮಸ್ಯೆ ಕೇಳಲೂ ಆಗೋದಿಲ್ಲವೇ. ನಮ್ಮ ಕೈಯ್ಯಲ್ಲಿ ಓಟಾಕಿಸಿಕೊಂಡು ಗೆದ್ದಿರುವ ಸಿಮೆಂಟ್ ಮಂಜಣ್ಣಾ ದುಡ್ದಿಗೆ ಬಲಿಯಾಗಿ ಉಳ್ಳವರ ಪರ ಕೆಲಸ ಮಾಡಬೇಡಿ. ಅಧಿಕಾರಿಗಳಿಗೆ ಹೇಳಿ ಗುಡಿಸಲು ತೆರವು ಮಾಡಬೇಡಿ ಎ೦ದು ಸಿಮೆಂಟ್ ಮಂಜಣ್ಣಾ ನಿಮಗೆ ಒಳ್ಳೆಯ ಹೆಸರಿದೆ ನಿಮ್ಮ ದೊರಣೆ ಬದಲಿಸಿಕೊಳ್ಳಿ ಹೀಗೇ ಇದು ಮುಂದುವರಿದರೆ ನಮ್ಮ ಚಳುವಳಿ ಮುಖಂಡರು ನಿಮ್ಮ ವಿರುದ್ಧ ಮತ್ತು ತಾಲೋಕು ಆಡಳಿತದ ವಿರುದ್ಧ ಚಳುವಳಿ ಮಾಡುವುದಾಗಿ ಹೇಳಿದರು.
ದಾಖಲೆ ಪರಿಶೀಲಿಸಿ ಕ್ರಮಕ್ಕೆ ಗೊಳ್ಳುವೆ
ಸಕಲೇಶಪುರ ಬಸವನಹಳ್ಳಿ ಹರಿಜನ ಕೇರಿ ಜಾಗ ಪ್ರೈವೆಟ್ ಜಾಗಕ್ಕೆ ಗಲಾಟೆ ಎಂದು ತಿಳಿದಿದ್ದೆ ಹರಿಜನ ಕೇರಿ ಜಾಗ ಎಂದಾದರೆ ತಹಸಿಲ್ದಾರ್ ಹತ್ತಿರ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮಕ್ಕೆಗೊಳ್ಳುವುದಾಗಿ ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲು ಮನಿ ತಿಮ್ಮಣ್ಣ ತಿಳಿಸಿದರು


