Blog

ಬೇಲೂರುನಲ್ಲಿ ಪ್ರಜಾ ಆಂದೋಲನ ಸಭೆ


ಬೇಲೂರು.
ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ”ಪ್ರಜಾಸೇವಾ ಆಂದೋಲನ” ಕಾರ್ಯಕ್ರವನ್ನು ಆಯೋಜಿಸಲಾಗಿತ್ತು.


  ಕಾರ್ಯಕ್ರಮದಲ್ಲಿ ವಿವಿಧ ಗ್ರಾಮದ ರೈತರಿಂದ ಬಂದಂತಹ  ಅರ್ಜಿಗಳನ್ನು ಸ್ವೀಕರಿಸಿ,ಪರಿಶೀಲಿಸಿ ಸ್ಥಳದಲ್ಲಿಯೆ ಸಮಸ್ಯೆಗಳನ್ನು ಬಗೆಹರಿಸಲಾಯಿತು.
ತಾಲ್ಲೂಕಿನ ಸನ್ಯಾಸಿಹಳ್ಳಿ ಗ್ರಾಮಸ್ಥರು ತಾಲ್ಲೂಕು ದಂಢಾಧಿಕಾರಿಗಳಿಗೆ ಅರ್ಜಿ ನೀಡಿ ನಮ್ಮ ಗ್ರಾಮದಲ್ಲಿ ಬಹುತೇಕ ಕೆರೆಕಟ್ಟೆಗಳಿದ್ದು,ಕೆಲ ಕೆರೆಗಳಿಗೆ ಅಕ್ರಮವಾಗಿ ಲೈಸೆನ್ಸ್ ಇಲ್ಲದೆ ಮೀನುಗಾರರು ಮೀನು ಬಿಟ್ಟಿದ್ದಾರೆ. ನಮ್ಮ ಗ್ರಾಮದಲ್ಲಿ ದನಕರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ ಕೆರೆಗಳೆಲ್ಲ ಬತ್ತಿಹೋಗಿವೆ ಇರುವಷ್ಟು ಕೆರೆಯ ನೀರು ಮೀನಿನ ವಾಸನೆ ಬರುತ್ತಿರುವುದರಿಂದ ದನಕರುಗಳು ನೀರು ಕುಡಿಯುತ್ತಿಲ್ಲ.ಕೇಳಿದರೆ ಮೀನುಗಾರರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.ಕೂಡಲೆ
ತಹಸೀಲ್ದಾರ್ ಮಾತನಾಡಿ  ರೈತರಿಗೆ ಮತ್ತು ದನಕರುಗಳಿಗೆ ತೊಂದರೆ ನೀಡದಂತೆ ಮೀನುಗಾರರಿಗೆ ಎಚ್ಚರಿಕೆ ನೀಡುವಂತೆ ಗ್ರಾಮ ಪಂಚಾಯ್ತಿ ಪಿಡಿಓ ಗೆ ಎಚ್ಚರಿಸಿದರು.


  ನಂತರ ಮಾತನಾಡಿದ ಅವರು  ಇಂದು ಪ್ರಜಾ ಸೇವಾ ಆಂದೋಲನ ಸಭೆ ಆಯೋಜಿಸಿದ್ದು,ತಾಲ್ಲೂಕಿನಾದ್ಯಂತ ಮಾಹಿತಿ ನೀಡಲಾಗಿತ್ತು.ಆದರೆ ಎಲ್ಲಾ ಇಲಾಖ ಅಧಿಕಾರಿಗಳ ಸಮ್ಮುಖದಲ್ಲಿ 7 ಕ್ಕೂ ಅಧಿಕ ಅರ್ಜಿಗಳು ಬಂದಿದ್ದು ಅರ್ಜಿಗಳಿಗೆ ಸಂಭಂದಿಸಿದಂತೆ ಸ್ಥಳದಲ್ಲಿಯೇ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದರು.


  ಇದೇ ಸಂದರ್ಭದಲ್ಲಿ, ಬಿಇಓ ಶ್ರೀ ಮತಿ ಭಾಗ್ಯಮ್ಮ,ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಿಂಗರಾಜು,ಕೃಷಿ ಇಲಾಖೆ ಅಧಿಕಾರಿ ಕಾಂತರಾಜು,ಅರಣ್ಯ ಇಲಾಖೆ ಯತೀಶ್,ಶೈಲಾ,ಕೆಇಬಿ ಎಇಇ ಬಸವರಾಜು,ಆಹಾರ ಶಿರಸ್ಥೆದಾರ್ ಗೀತಾಂಜಲಿ,ಸೇರಿದಂತೆ ಎಲ್ಲಾ ಇಲಾಖೆ ಅಧೀಕಾರಿಗಳು ಭಾಗಿಯಾಗಿದ್ದರು.

Related posts

ಆಲೂರುನಲ್ಲಿ ಸಾಲ ಪಾವತಿ ಮಾಡಿದರು ಹೆಚ್ಚುವರಿ ಹಣ ಪಾವತಿಸಲು ಒತ್ತಾಯ

Bimba Prakashana

ಮಳೆ ಕೊರತೆ – ಆತಂಕದಲ್ಲಿ ಅನ್ನದಾತ

Bimba Prakashana

ಪ್ರಜಾ ಸೇವಾ ಆಂದೋಲನದಲ್ಲಿ ಸಚಿವ ಶಿವಲಿಂಗೆ ಗೌಡರು ಭರವಸೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More