Blog

ಬ್ಯಾಕರವಳ್ಳಿ ಮೊರಾರ್ಜಿ ಶಾಲೆ ಚಾಂಪಿಯನ್

ನಾಗೇಶ್ ಎಂ ಎಚ್ ಮಾಗೇರಿ


🔴ಹೆತ್ತೂರು ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ಮಟ್ಟದ ಕ್ರೀಡಾಕೂಟ* ..,.
🔴ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮಗ್ರ ಚಾಂಪಿಯನ್
        ದಿನಾಂಕ 24.08.2026 ರಂದು ನೆಡೆದ ಹೆತ್ತೂರು ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು  ಬಾಲಕರ ಮತ್ತು ಬಾಲಕಿಯರ ತಂಡಗಳ ಚಾಂಪಿಯನ್ ಶಿಪ್ ಜೊತೆಗೆ ಶಾಲೆಗೆ ಸಮಗ್ರ ಚಾಂಪಿಯನ್ ಶಿಪ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.ಹಿಂದಿನ 2 ವರ್ಷಗಳು ಕೂಡಾ ಸಮಗ್ರ ಪ್ರಶಸ್ತಿ ಬಾಚಿಕೊಂಡಿದ್ದ ಶಾಲೆಯು ನಿರಂತರವಾಗಿ 3 ನೇ ವರ್ಷ ಪ್ರಶಸ್ತಿಯ ಮೇಲೆ ಅಧಿಪತ್ಯ ಸ್ಥಾಪಿಸಿದೆ.
ವೈಯಕ್ತಿಕ ಮತ್ತು ತಂಡ ಆಟಗಳಲ್ಲಿ ಪಾರಮ್ಯ ಮೆರೆದ ಬ್ಯಾಕರವಳ್ಳಿ ಮೊರಾರ್ಜಿ ಶಾಲೆಯು ಅಧಿಕಾರಯುತವಾಗಿ ಗೆಲುವನ್ನು ದಾಖಲಿಸುವಲ್ಲಿ ಮತ್ತು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಯಶಸ್ವಿ ಆಯಿತು. ಇದಕ್ಕೆ ನಿರಂತರವಾಗಿ ಪ್ರಯತ್ನಿಸಿದ ದೈಹಿಕ ಶಿಕ್ಷಕರಾದ ಅಭಿಷೇಕ್ ಎಚ್ ಪಿ. ರವರಿಗೆ ಶಾಲಾ ಪ್ರಾಂಶುಪಾಲರಾದ ಶತೇಂದ್ರ ಕುಮಾರ್ ರವರು ಮತ್ತು ಶಿಕ್ಷಕರೆಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ. ಇವರಿಗೆ ಬೆನ್ನೆಲುಬಾಗಿ ನಿಂತ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಧನ್ಯವಾದ ಸಮರ್ಪಿಸಿದ್ದಾರೆ. ಮುಂದಿನ ಹಂತಗಳಲ್ಲಿ ಇದೇ ಸಾಧನೆ ಪುನರಾವರ್ತಿಸುವ ಆಶಯ ವ್ಯಕ್ತಪಡಿಸಿದ್ದಾರೆ.

*ಬಾಲಕರ ವಿಭಾಗ*
600-ಪ್ರಥಮ ಮತ್ತು ತೃತೀಯ
400-  ಪ್ರಥಮ
200-  ಪ್ರಥಮ
100-  ದ್ವಿತೀಯ ಮತ್ತು ತೃತೀಯ
4*100 ರಿಲೇ…ದ್ವಿತೀಯ
ಗುಂಡುಎಸೆತ -ಪ್ರಥಮ ಮತ್ತು ದ್ವಿತೀಯ
ತಟ್ಟೆ ಎಸೆತ- ಪ್ರಥಮ ಮತ್ತು ದ್ವಿತೀಯ
ದೂರ ಜಿಗಿತ- ಪ್ರಥಮ ಮತ್ತು ತೃತೀಯ
ಕಬಡ್ಡಿ-     ಪ್ರಥಮ
ವಾಲಿಬಾಲ್ -ಪ್ರಥಮ
ಬಾಲ್ ಬ್ಯಾಡ್ಮಿಂಟನ್- ಪ್ರಥಮ
ಖೋಖೊ…. ಪ್ರಥಮ

**ಬಾಲಕಿಯರ ವಿಭಾಗ*
400-ತೃತೀಯ
ಗುಂಡು ಎಸೆತ -ತೃತೀಯ
ಎತ್ತರ ಜಿಗಿತ-ತೃತೀಯ
ವಾಲಿಬಾಲ್ -ಪ್ರಥಮ
ಬಾಲ್ ಬ್ಯಾಡ್ಮಿಂಟನ್-ದ್ವಿತೀಯ

   *ತಂಡ ಚಾಂಪಿಯನ್*
ಬಾಲಕರು ಪ್ರಥಮ
ಬಾಲಕಿಯರು ಪ್ರಥಮ
*ಶಾಲಾ ಸಮಗ್ರ ಚಾಂಪಿಯನ್* *ಪ್ರಶಸ್ತಿ*
 

ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬ್ಯಾಕರವಳ್ಳಿ ಹಾಸನ ಜಿಲ್ಲೆ
ಇವರು ಪತ್ರಿಕೆ ಗೆ ತಿಳಿಸಿದ್ದಾರೆ.

Related posts

ರೋಲರ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಅಂತರ್ ರಾಷ್ಟೀಯ ಸಾಧನೆ

Bimba Prakashana

ಬೇಲೂರು ಜಾತ್ರೆ ಯಶಸ್ಸು – ಸ್ವಚ್ಛತೆ ಬಗ್ಗೆ ಪುರಸಭೆ ಆದ್ಯತೆ – ಭದ್ರತೆ ನೀಡಿದ ಪೊಲೀಸ್ ಇಲಾಖೆ

Bimba Prakashana

ಮಕ್ಕಳ ಚಿತ್ರಕಲಾ ಸ್ಪರ್ಧೆಗೆ ಭಾಗವಹಿಸಲು ಇನ್ನು ಹತ್ತೇ ದಿನ ಅವಕಾಶ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More