🔴ಹೊಯ್ಸಳ ಕಪ್ ಕರಾಟೆ: ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಗೆ ಸಮಗ್ರ ಪ್ರಶಸ್ತಿ.
🔴(12 ವಿದ್ಯಾರ್ಥಿಗಳಿಂದ 22 ಪದಕಗಳ ಸಾಧನೆ,ಕಥಾ ವಿಭಾಗದಲ್ಲಿ 4 ಪ್ರಥಮ, 6 ದ್ವಿತೀಯ, 2 ತೃತೀಯ ಸ್ಥಾನ.)
ಸಕಲೇಶಪುರ :-ಬೇಲೂರಿನ ಮೌಂಟ್ ಕಾರ್ಮೆಲ್ ಆಡಿಟೋರಿಯಂನಲ್ಲಿ ಸೆ.6ರಂದು ನಡೆದ ವಜ್ರಕಾಯ ಕರಾಟೆ ಮತ್ತು ಬಾಕ್ಸಿಂಗ್ ಅಸೋಸಿಯೇಷನ್‌ನ ಹೊಯ್ಸಳ ಕಪ್–2026, 7ನೇ ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಶ್ರೀ ಮಂಜುನಾಥೇಶ್ವರ ವಿದ್ಯಾನಿಕೇತನ ಶಾಲೆಯ 12 ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಕಥಾ ವಿಭಾಗದಲ್ಲಿ 4 ವಿದ್ಯಾರ್ಥಿಗಳು ಪ್ರಥಮ, 6 ವಿದ್ಯಾರ್ಥಿಗಳು ದ್ವಿತೀಯ ಹಾಗೂ 2 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕುಮಿತೆ ವಿಭಾಗದಲ್ಲಿ 6 ಪ್ರಥಮ, 2 ದ್ವಿತೀಯ ಹಾಗೂ 4 ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ.
ಒಟ್ಟು 12 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ 24ಪದಕ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಶಾಲೆಗೆ ತಂದುಕೊಟ್ಟಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.
previous post
