Blog

ಆಲೂರುನಲ್ಲಿ ಹಿಂದೂ ಸಮಾಜೋತ್ಸವ

ಆಲೂರು: ಕಸಬಾ ಹಿಂದು ಸಮಾಜೋತ್ಸವ ಸಮಿತಿ ವತಿಯಿಂದ ಜ. 29ರಂದು ಬೃಹತ್ ಶೋಭಾಯಾತ್ರೆ ನಡೆಯಲಿದೆ. ತಾಲ್ಲೂ ಕಿನ ಸಮಾಜ ಬಾಂಧವರು ತಪ್ಪದೆ ಭಾಗವಹಿಸಿ ಸಹಕರಿಸಬೇಕೆಂದು ಕಾರ್ಜುವಳ್ಳಿ ಹಿರೇ ಮಠ ಸಂಸ್ಥಾನ ಮಠಾಧೀಶರು ಹಾಗೂ ಗೌರವಾಧ್ಯಕ್ಷರಾದ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಪಟ್ಟಣದ ಹೌಸಿಂಗ್ ಬೋರ್ಡ್ನಲ್ಲಿ ಕಸಬಾ ಹಿಂದು ಸಮಾಜೋತ್ಸವ ಸಮಿತಿ ಕಾರ್ಯಾ ಮನೆಯಲ್ಲಿ ಧ್ಯಕ್ಷ ಕೆ. ಪಿ. 42 ಏರ್ಪಡಿಸಲಾಗಿದ್ದ ಪೂರ್ವಬಾವಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶತಮಾನೋತ್ಸವ ಆಚರಿಸುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ತನ್ನ ಕಾರ್ಯ ಯೋಜನೆಯಲ್ಲಿ ಹಿಂದು ಸಮಾಜೋತ್ಸವ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಖಂಡ ಹಿಂದೂ ಸಮಾಜ ದೇಶದಲ್ಲಿ ಹರಿದು ಹಂಚಿ ಹೋಗಿರುವುದನ್ನು ಒಗ್ಗೂಡಿಸುವ ಸಲುವಾಗಿ

ಶೋಭಾಯಾತ್ರೆ ನಡೆಸಲಾಗುತ್ತಿದೆ. ಹಿಂದೂ ಸಮಾಜದವರು ಜಾತಿ ಬೇಧ ಮರೆತು ಸಂಘಟಿತರಾಗಿ ನಾವೆಲ್ಲ ಒಂದು ನಾವೆಲ್ಲ ಮುಂದು ಎನ್ನುವ ಮೂಲಕ, ಯುವಕರ ಪ್ರಜ್ಞೆ ಧರ್ಮದೆಡೆಗೆ? ಎಂಬ ಭಾವನೆ ಪ್ರತಿಯೊ ಬ್ಬರಲ್ಲೂ ಮೂಡಬೇಕು ಎಂದರು. ಸಮಿತಿ ಅಧ್ಯಕ್ಷ ಬಿ. ಈ. ಸದಾಶಿವಪ್ಪ ಮಾತನಾಡಿ ಜ. 29 ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸೆಸ್ಕ್ ವೃತ್ತದಿಂದ ಪೂರ್ಣಕುಂಭದೊಂದಿಗೆ ಪ್ರಾರಂ ಭವಾದ ಶೋಭಾಯಾತ್ರೆ ಕೊನೆಪೇಟೆ ಗಣಪತಿ ಪೆಂಡಾಲಿನಲ್ಲಿ ಮುಕ್ತಾಯಗೊಳ್ಳಲಿದೆ. ನಂತರ ನಡೆಯುವ ಧಾರ್ಮಿಕ ಸಮಾರಂಭದಲ್ಲಿ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.

ಹಾಸನ ಆದಿಚುಂಚನಗಿರಿ  ಮಠಾಧೀಶರಾದ ಶಂಭುನಾಥಸ್ವಾಮೀಗಳು, ಸಂಕಲಾಪುರ ಮಠಾಧೀಶರಾದ ಶಾಂತವೀರ ಮಲ್ಲಿಕಾರ್ಜುನ ಮಹಸ್ವಾಮಿಗಳು ಭಾಗವಹಿ ಸಲಿದ್ದಾರೆ ಎಂದರು.

Related posts

ಜೈ ಭೀಮ್ ಕ್ರಾಂತಿ ಸೇನೆಯ ಸಭೆ

Bimba Prakashana

ಕಂಚಿ ವರದ ರಾಜ ಸ್ವಾಮಿಯವರ ನೂತನ ವಿಗ್ರಹ ಪ್ರತಿಷ್ಠೆ

Bimba Prakashana

ಲಕ್ಕುಂದ ಗ್ರಾಮದಲ್ಲಿ ಕಾರ್ತಿಕೋತ್ಸವ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More