,ಆಲೂರು.ಪ್ರಸ್ತುತ ಭಾರತ ದೇಶವು ಜಾಗತಿಕ ಮಟ್ಟದಲ್ಲಿ ಮೂರನೇ ದೊಡ್ಡ ಆರ್ಥಿಕ ದೇಶವಾಗಿದ್ದು ಇನ್ನೇನು ಕೆಲವೇ ವರ್ಷಗಳಲ್ಲಿ ವಿಶ್ವದ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಮೊದಲ ಸ್ಥಾನವನ್ನು ಅಲಂಕರಿಸುವುದರಲ್ಲಿ ಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವದಲ್ಲಿಯೇ ಲಿಖಿತ ರೂಪದಲ್ಲಿರುವ ಏಕೈಕ ಶ್ರೇಷ್ಠ ಸಂವಿಧಾನವೆಂದರೆ ಅದು ಭಾರತದ ಸಂವಿಧಾನವಾಗಿದೆ. ಸಮಾನತೆ, ಸಾಮಾಜಿಕ ನ್ಯಾಯ, ಏಕತೆ ಜಾತ್ಯಾತೀತ ತತ್ವಗಳನ್ನ ಅಳವಡಿಸಿ ಸರ್ವರಿಗೂ ಸಮಬಾಳು, ಸರ್ವರಿಗೂ
ಸಮಪಾಲು ಎಂಬ ಧೈಯ ವಾಕ್ಯದೊಂದಿಗೆ ಸಂವಿಧಾನವು ರಚನೆಯಾಗಿದೆ. ಸಂವಿಧಾನಕ್ಕೆ ಹಾಗೂ ಸಂವಿಧಾನ ರಚಿಸಿದ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಹಶೀಲ್ದಾರ್ ಎಚ್.ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವ ದೇಶದ ಸ್ವಾಭಿಮಾನದ ಹಬ್ಬವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು ಈ ಸಂದರ್ಭ ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಎಸ್. ಮಂಜೇಗೌಡ, ತಾ.ಪಂ ಇ.ಓ.ಸುಬ್ರಮಣ್ಯ ಶರ್ಮ, ಬಿಇಓ ಕೃಷ್ಣಗೌಡ, ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ, ಉಪ ತಹಶೀಲ್ದಾರ್ ಅಂಕೇಗೌಡ, ಸಿಡಿಪಿಓ ಸಿದ್ದೇಶ್, ಎಇಇ ರಮೇಶ್, ರವಿಕುಮಾರ್, ಟಿ.ಎಸ್.ಡಬ್ಲ್ಯೂ ಕೌಸರ್ ಅಹಮದ್, ಪ.ಪಂ ಮುಖ್ಯಾಧಿಕಾರಿ ಮಂಜುನಾಥ್, ತಾ. ನೌಕರರ ಸಂಘದ ಅಧ್ಯಕ್ಷ ವರದರಾಜು, ಸಹಾಯಕ ಕೃಷಿ ಅಧಿಕಾರಿ ರಮೇಶ್ ಕುಮಾರ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ. ಆಲೂರು ಸ್ಪೋರ್ಟ್ಸ್ ಕ್ಲಬ್ ಹಾಗೂ ಕರವೇ ಉಪಾಧ್ಯಕ್ಷ ನವೀನ್ ಬೈರಾಪುರ. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಯಣ್ಣ ಹೈದುರ್. ಕಂದಾಯ ಇಲಾಖೆಯ ನೌಕರ್ ಸಂಘದ ಅಧ್ಯಕ್ಷ ರವಿ ನಾಯಕ ತಾಲೂಕಿನ ಎಲ್ಲಾ ಅಧಿಕಾರಿಗಳು. ಸಿಬ್ಬಂದಿಗಳು ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.
previous post
next post
