ನಾಗೇಶ್ ಎಂ ಎಚ್ ಮಾಗೇರಿ.
🔴
ನಕಲಿ ದಾಖಲೆ ಸೃಷ್ಠಿಸಿ ಅರಣ್ಯ ಜಮೀನು ಕಬಳಿಕೆ ಯತ್ನ: ಮೂಡಿಗೆರೆಯಲ್ಲಿ ನೇಮಣ್ಣ ಗೌಡ ಅರೆಸ್ಟ್
🔴
ಸಕಲೇಶಪುರ: ಕೋಟಿ ಕೋಟಿ ಬೆಲೆ ಬಾಳುವ ಅರಣ್ಯ ಭೂಮಿ ಸ್ವಾಧೀನವೇ ಇಲ್ಲದಿದ್ದರೂ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಪೋಡಿ ಮಾಡಿ ಕೊಟ್ಟಿದ್ದ ಕಂದಾಯ ಅಧಿಕಾರಿಗಳ ಆದೇಶವನ್ನು ಉಪವಿಭಾಗಾರಿಕಾರಿ ಹುಲ್ಲು ಮನಿ ತಿಮ್ಮಣ್ಣ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನ, ಕಿರುಹುಣಸೆ ಗ್ರಾಮದ ಸರ್ವೆ ನಂಬರ್ 72 ರಲ್ಲಿ ಹತ್ತು ಎಕರೆ ಅರಣ್ಯ ಭೂಮಿ ಇದ್ದು ಈ ಭೂಮಿಯನ್ನು ದಿನೇಶ್ ಬಿನ್ ನಾರಾಯಣ 4 ಎಕರೆ 38 ಗುಂಟೆ, ಮಂಜಮ್ಮ ಬಿನ್ ಪುಟ್ಟೇಗೌಡರಿಗೆ 1 ಎಕರೆ 1 ಗುಂಟೆ, ವೆಂಕಟೇಶ
ಬಿನ್ ತಿಮ್ಮೇಗೌಡರಿಗೆ 4 ಎಕರೆ ಭೂಮಿಯನ್ನು ಅಕ್ರಮವಾಗಿ ಕಂದಾಯ ಇಲಾಖೆ ಖಾತೆ ಮಾಡಿಕೊಡಲಾಗಿತ್ತು. ಈ ಸಂಬಂಧ ಸಕಲೇಶಪುರ ತಹಶೀಲ್ದಾರ್, ಸಕಲೇಶಪುರ ಎಡಿಎಲ್ಆರ್ ವಿರುದ್ಧ ಆರ್ಎಫ್ಓ ಹೇಮಂತ್ ಕುಮಾರ್ ಮೇಲ್ಮನವಿ ಸಲ್ಲಿಸಿದ್ದರು. ಸಕಲೇಶಪುರ ಆರ್ಎಫ್ಓ ಮೇಲ್ಮನವಿ ಹಿನ್ನಲೆಯಲ್ಲಿ ಮಂಜುರಾತಿ ರದ್ದುಗೊಳಿಸಿ ಸಕಲೇಶಪುರ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಆದೇಶಿಸಿದ್ದಾರೆ.
ಅತ್ಯಮೂಲ್ಯ ಅರಣ್ಯ ಭೂಮಿಯನ್ನ ತಹಶೀಲ್ದಾರ್, ಎಡಿ ಎಲ್ ಆರ್ ಜೊತೆಗೆಇತರೆ ಅಧಿಕಾರಿಗಳು ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಕ್ರಮವಾಗಿ ಖಾತೆ ಮಾಡಿ ಕೊಟ್ಟಿದ್ದರು. ಎಸಿ ಆದೇಶ ಹಿನ್ನಲೆಯಲ್ಲಿ ಮೈಸೂರು ವಿಭಾಗದ ಭೂ ದಾಖಲೆಗಳ ಜಂಟಿ ನಿರ್ದೇಶಕರಿಂದ ಅಕ್ರಮ ಪೋಡಿ ಕೂಡ ರದ್ದು ಮಾಡಿದ್ದು ಸರ್ಕಾರದ ಹೆಸರಿಗೆ ಹಿಂದಿನ ಸರ್ವೆ ನಂಬರ್ನಲ್ಲೇ ಅರಣ್ಯ ಭೂಮಿ ಉಳಿಸಲು ಆದೇಶಿಸಿದ್ದಾರೆ. ಕಂದಾಯ ಇಲಾಖೆ ಅಕ್ರಮದ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹೋರಾಟ
ಮಾಡಿ ಗೆಲುವು ಸಾದಿಸಿದ್ದಾರೆ.ಕಂದಾಯ ಇಲಾಖೆ ಅಕ್ರಮದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಹತ್ತಾರು ವರ್ಷಗಳಿಂದ ತಾಲೋಕಿನ ಹಲವೆಡೆ ಭೂಮಿ ಸಾಗುವಳಿ ಪಡೆದು ಇದ್ದರೂ ಮುಂಜೂರಿದಾರ ಸ್ವಾದೀನ ದಲ್ಲಿಲ್ಲ ಎಂಬ ಕಾರಣ ನೀಡಿ ಹಲವು ಭೂ ಸಮಸ್ಯೆಗಳು ಹತ್ತಾರು ವರ್ಷಗಳಿಂದ ಸಮಸ್ಯೆಗೆ ಪರಿಹಾರ ಆಗದೆ ಹಾಗೇ ಉಳಿದಿದೆ. ಅಂತದ್ದರಲ್ಲಿ ಅಕ್ರಮ ಜಮೀನುಗಳು ಕೆಲ ಮಧ್ಯವರ್ತಿಗಳಿಂದ ಸಮ್ಮಿಂಗ್ ನಡೆದು ಲೀಲಾಜಾಲವಾಗಿ ಖಾತೆಆಗುತ್ತಿವೆ. ಹೆಚ್ ಆರ್ ಪಿ ಜಮೀನುಗಳೂ ಸಹ ಒಂದೆರಡು ತಿಂಗಳಲ್ಲಿ ಖಾತೆ ಆಗಿ ಪೋಡಿ ಮಾಡಿ ಬೇರೊಬ್ಬರಿಗೆಸೇಲ್ ಆಗಿರುವ ಉದಾಹರಣೆ ಸಾಕಷ್ಟಿವೆ.
ಅರಣ್ಯ ವಲಯಾಧಿಕಾರಿ ಹೇಮಂತ್ ಕುಮಾರ್ ಅವರ ಅರಣ್ಯ ಉಳಿಸುವ ಕಾಳಜಿ ಮತ್ತು ಶ್ರಮಅಂತಿಮವಾಗಿ ಹತ್ತು ಎಕರೆ ಅಮೂಲ್ಯ ಕಾಡು ಅರಣ್ಯ ಭೂಮಿ ಉಳಿದಿದೆ.
ವಿಷಯಬೆಳಕಿಗೆ ಬಂದ ತಕ್ಷಣ ಪತ್ರಕರ್ತರು
ಸಕಲೇಶಪುರ ತಾಲೋಕಿನ ಅಗ್ನಿ ಗ್ರಾಮದಲ್ಲಿ 1.292 ಎಕ್ಕರೆ . ಮೂರ್ಕಣ್ ಗುಡ್ಡ ವ್ಯಾಪ್ತಿಯ ಅಚ್ಚನಹಳ್ಳಿ . ಜಮ್ಮನ ಹಳ್ಳಿ ಮದನಾಪುರ ಗ್ರಾಮಗಳಲ್ಲಿ 1646 ಎಕ್ಕರೆ ಹೆಗ್ಗದ್ದೆಯಲ್ಲಿ 6280 ಎಕ್ಕರೆ ಮತ್ತು ಹೆಗ್ಗದ್ದೆ .ಕುಮಾರಳ್ಳಿ, 3899 ಎಕ್ಕರೆ ಅರಣ್ಯ ಭೂಮಿ ನಕಲಿ ದಾಖಲೆ ಸೃಷ್ಟಿಸಿ ಕಂದಾಯ ವಿಚಾರಣೆಗೆ ಇಳಿದಾಗ ಪಶ್ಚಿಮ ಘಟ್ಟ ಪ್ರದೇಶದ ಇಲಾಖೆಯಲ್ಲಿ ಪಹಣಿ ಎಂಟ್ರಿ ವೇಳೆ ಪ್ರಕರಣದ ಬಗ್ಗೆ ಅನುಮಾನಗೊಂಡ ಹೇಮಂತ್ ಕುಮಾರ್ ದೂರು ದಾಖಲಿಸಿದ್ದರಿಂದ ಪ್ರಕರಣ ಬಯಲಿಗೆ ಬಂದಿದೆ. ಹಿಂದೆಯಾ ಕೂಡ ರಾಜ್ಯಾದ್ಯಂತ ಹಲವು ನಕಲಿ ಭೂ ದಾಖಲಿಸೃಷ್ಟಿಸಿ ಜೈಲು ವಾಸ ಅನುಭವಿಸಿದ್ದ ನೇಮಣ್ಣ ಗೌಡ ಎಂಬ ಆರೋಪಿ ಈಗ ಸಕಲೇಶಪುರ ಅರಣ್ಯ ಭೂಮಿ 13 ಸಾವಿರ ಎಕ್ಕರೆ ಕಬಳಿಸಲು ಹುನ್ನಾರ ನಡೆಸಿ ಡಿಸಿ. ಡಿಸಿಎಫ್ ನಕಲಿ ಸೀಲ್ ಬಳಸಿ ಬೂ ಕಬಳಿಕೆಗೆ ಯತ್ನಿಸಿದ ನೇಮಣ್ಣ ಗೌಡ ಮೂಡಿಗೆರೆಯಲ್ಲಿ ಬಂದನಕ್ಕೊಳಗಾಗಿದ್ದಾನೆ ಎನ್ನಲಾಗಿದೆ.
