Blog

ಸಕಲೇಶಪುರ ಪಟ್ಟಣದೊಳಗೆ ಚತುಷ್ಪತ ರಸ್ತೆ

ನಾಗೇಶ್ ಎಂ ಎಚ್ ಮಾಗೇರಿ.


🔴ಮುಖ್ಯಇಂಜಿನಿಯರ್ ಪುರುಷೋತ್ತಮ್ ದಾಸ್ ಹೆಗ್ಗಡೆ ಸಕಲೇಶಪುರಕ್ಕೆ ಭೇಟಿ.


🔴ಕೊಲ್ಲಹಳ್ಳಿ ಯಿಂದ
ಕೆಂಪೇಗೌಡ ಪುತ್ತಳಿ  ವರಗೆ  ವೀಕ್ಷಣೆ.


ಸಕಲೇಶಪುರ :
ಸಕಲೇಶಪುರ ಪಟ್ಟಣದ ಅಭಿವೃದ್ಧಿಗಾಗಿ ಸಕಲೇಶಪುರ ಪಟ್ಟಣದೊಳಗಿನ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಅವಶ್ಯವಿರುವ ಸುಮಾರು 100.00 ಕೋಟಿ ರೂಪಾಯಿಗಳನ್ನು ವಿಶೇಷ ಅನುದಾನವನ್ನು ಕೊಡಿಸಿಕೊಡುವ ಮೂಲಕ ಸಕಲೇಶಪುರಕ್ಕೆ ಬರುವ ಪ್ರವಾಸಿಗರಿಗೆ ತಾಲ್ಲೂಕಿನ ಜನರಿಗೆ ಅನುಕೂಲವಾಗುವಂತೆ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಕೊಡಿಸಿಕೊಡುವಂತೆ ಶ್ರೀ ಮುರುಳಿ ಮೋಹನ್, ಅಧ್ಯಕ್ಷರು, ಸಕಲೇಶಪುರ ತಾಲ್ಲೂಕು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಪರಾಜಿತ ಅಭ್ಯರ್ಥಿ, ಸಕಲೇಶಪುರ ವಿಧಾನಸಭಾ ಕ್ಷೇತ್ರ (ಆಲೂರು-ಕಟ್ಟಾಯ ಸಕಲೇಶಪುರ) ರವರು ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ ಮನವಿ ಮಾಡಿದ್ದರು.


ಪ್ರಸ್ತಾಪಿತ ವಿಷಯದ ಸಂಬಂಧ ಮುಖ್ಯ ಅಭಿಯಂತರರು, ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆಯವರಿಗೆ ಸ್ಥಳ ಪರಿಶೀಲಿಸಿ, ವರದಿ ನೀಡಲು ಸನ್ಮಾನ್ಯ ಮುಖ್ಯಮಂತ್ರಿಗಳು ಆದೇಶಿಸಿರುವುದರಿಂದ ಮುಖ್ಯ ಅಭಿಯಂತರರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಇವರು ದಿನಾಂಕ 19-10-2026 ರಂದು ಬೆಳಿಗ್ಗೆ 1.30 ಗಂಟೆಗೆ ಸಕಲೇಶಪುರ ಪಟ್ಟಣಕ್ಕೆ ಭೇಟಿ ನಿಡಿ, ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ  ಉಪ ವಿಭಾಗಾಧಿಕಾರಿಗಳಾದ ಹುಲ್ಲು ಮನಿ ತಿಮ್ಮಣ್ಣ, ತಹಸೀಲ್ದಾರ್  ಸುಪ್ರಿತಾ, ಪುರಸಭೆ ಮುಖ್ಯಯಾಧಿಕಾರಿ ಮಹೇಶ್ವರಪ್ಪ, ಲೋಕೋಪಯೋಗಿ ಇಲಾಖೆ 
ಅಭಿಯಂತರರಾದ ಮೋಹನ್ ಕುಮಾರ್,
ಗ್ಯಾರಂಟಿ ಅನುಷ್ಠಾನ ಯೋಜನೆಯ ಅಧ್ಯಕ್ಷರಾದ ಮುರಳಿ ಮೋಹನ್ ರವರು, ನಗರಾಭಿವೃದ್ಧಿ ಪ್ರಾಧಿಕಾರದ  ಅಧ್ಯಕ್ಷರಾದ ಮುಫೀಜ್, ಪ್ರಾಧಿಕಾರದ ಸದಸ್ಯರಾದ  ಬೈಕೆರೆ ದೇವರಾಜ್, ವಿಜಯ್ ಕುಮಾರ್ ಬ್ಯಾಕರವಳ್ಳಿ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲೋಕೇಶ್ ಗೊದ್ದು,  ಕಾಂಗ್ರೆಸ್ ತಾಲೂಕು ಅಧ್ಯಕ್ಷರಾದ ಬೈರಮುಡಿ ಚಂದ್ರು, ಎಸ್ಸಿ -ಎಸ್ಟಿ ತಾಲೂಕು ಅಧ್ಯಕ್ಷರಾದ ಪ್ರಶಾಂತ್ ಕಲ್ಗಣೆ ,ಮತ್ತು ರಾಜ್ಯ ಮಟ್ಟದ ಅಧಿಕಾರಿಗಳು ಕ್ಯಾಂಗ್ರೆಸ್ ಮುಖಂಡರು, ಸಾರ್ವಜನಿಕರು
ಉಪಸ್ಥಿತರಿದ್ದರು.

Related posts

ಯಸಳೂರುನಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ನಿರ್ಮಾಣಕ್ಕೆ ನಿರ್ಧಾರ

Bimba Prakashana

ಬೇಲೂರುನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

Bimba Prakashana

ಬೇಲೂರು ಪುರಸಭೆ ಎದುರು ಪ್ರತಿಭಟನೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More