🔴ಜಿಲ್ಲಾ ಪಂಚಾಯಿತಿ ಹಾಗೂ ತಾಪಂ ಮೀಸಲು ನಿಗದಿ: ಅನ್ಯಾಯ ಆರೋಪ ಮಾಡಿದ ರಾಜಕೀಯ ಮುಖಂಡ ಕೆ ಎಸ್ ಮಂಜೇಗೌಡ.
🔴ಮೀಸಲಾತಿ ಪರಿಷ್ಕರಣೆಗೆ ರಾಜಕೀಯ ಮುಖಂಡರ ಒತ್ತಾಯ: ತಪ್ಪು ಸರಿಪಡಿಸದಿದ್ದರೆ ಹೋರಾಟದ ಎಚ್ಚರಿಕೆ
ಆಲೂರು: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ಬೆನ್ನಲ್ಲೇ, ಆಲೂರು ತಾಲೂಕು ಪಂಚಾಯ್ತಿಯ ಕ್ಷೇತ್ರವಾರ ಮೀಸಲಾಪಟ್ಟಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ತಾಲೂಕಿನ ಒಬ್ಬತ್ತು ಪಂಚಾಯತಿ ಭಾಗದ ಮೀಸಲಾತಿ ಪ್ರಕಟವಾಗಿದ್ದು, ಹಿಂದುಳಿದ ವರ್ಗಗಳಿಗೆ ಒಂದೇ ಒಂದು ಕ್ಷೇತ್ರವನ್ನು ಮೀಸಲಿಡದಿರುವುದು ವಿವಾದಕ್ಕೆ ನಾಂದಿ ಹಾಡಿದೆ. ಈ ನಿರ್ಧಾರಕ್ಕೆ ಸಾರ್ವಜನಿಕರು, ಹಿಂದುಳಿದ ವರ್ಗಗಳ ಮುಖಂಡರು ವಿವಿಧ ರಾಜಕೀಯ ಮುಖಂಡರಾದ ಕಣದಲ್ಲಿ ಮಂಜೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅವಧಿ ಮುಗಿದು ಸುಮಾರು ಆರು ವರ್ಷಗಳ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಅಧಿಸೂಚನೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ, ಚುನಾವಣಾ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಆದರೆ, ಆಲೂರು ತಾಲೂಕು ಪಂಚಾಯಿತಿಯ ಮೀಸಲಾತಿ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ದೊರೆಯದಿರುವುದು ಸಾಮಾಜಿಕ ನ್ಯಾಯದ ವಿಚಾರವನ್ನು ಮುನ್ನೆಲೆಗೆ ತಂದಿದೆ.
# ಒಂಬತ್ತು ಕ್ಷೇತ್ರಗಳ ಮೀಸಲಾತಿ ಹಂಚಿಕೆ ?
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಆ.7ರಂದು ಪ್ರಕಟಿಸಿರುವ ಅಂತಿಮ ಮೀಸಲಾತಿ ಪಟ್ಟಿಯ ಪ್ರಕಾರ, ಆಲೂರು ತಾಲೂಕು ಪಂಚಾಯಿತಿಯ ಒಂಬತ್ತು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳನ್ನು ಸಾಮಾನ್ಯ ವರ್ಗಕ್ಕೆ, ಮೂರು ಕ್ಷೇತ್ರಗಳನ್ನು ಅನುಸೂಚಿತ ಜಾತಿ (ಎಸ್ಸಿ)ಗೆ ಹಾಗೂ ಒಂದು ಕ್ಷೇತ್ರವನ್ನು ಅನುಸೂಚಿತ ಪಂಗಡ (ಎಸ್ಟಿ) ಕೈ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ. ಆದರೆ, ಹಿಂದುಳಿದ ವರ್ಗಗಳಾದ ವರ್ಗ-ಎ ಮತ್ತು ವರ್ಗ-ಬಿಗೆ ಯಾವುದೇ ಕ್ಷೇತ್ರ ಮೀಸಲಾಗಿಲ್ಲ ಎಂಬುದು ಪ್ರಮುಖ
ಸ್ಥಳೀಯ ಸಂಸ್ಥೆಗಳಲ್ಲಿ ಎಲ್ಲ ವರ್ಗಗಳಿಗೂ ನ್ಯಾಯಯುತ
ರಾಜಕೀಯ ಪ್ರಾತಿನಿಧ್ಯ ದೊರೆಯಬೇಕು. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತವು ತಕ್ಷಣವೇ ಎಚ್ಚೆತ್ತುಕೊಂಡು, ಆಲೂರು ತಾಲೂಕು ಪಂಚಾಯಿತಿ ಮೀಸಲಾತಿ ಅಧಿ ಸೂಚನೆ ಪಟ್ಟಿಯಲ್ಲಿ ಆಗಿರುವ ಗಂಭೀರ ದೋಷವನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಹಿಂದುಳಿದ ವರ್ಗಗಳ ಪರವಾಗಿ ಉಗ್ರ ಹೋರಾಟ ನಡೆಸಲಾಗುವುದು.
ಸಾಮಾಜಿಕ ನ್ಯಾಯದ ಮಾನದಂಡದ ಬಗ್ಗೆ ಪ್ರಶ್ನೆ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಗ್ರಾಮೀಣ ಭಾಗದ
ಪ್ರಕ್ರಿಯೆಯಲ್ಲಿ
ಕಾಂಗ್ರೆಸ್ ಹಸ್ತಕ್ಷೇಪ ನಡೆಸಿದೆ. ಇದರಿಂದ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ಧಕ್ಕೆ ಆಗಿದೆ. ಮೀಸಲಾತಿ ನಿಗದಿಯಲ್ಲಿ ಪಾರದರ್ಶಕತೆ ಕಾಪಾಡುವುದರ ಸಮಾನ ಅವಕಾಶ ಕಲಿಸಬೇಕು. ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಯಮಾನುಸಾರ ಮೀಸಲಾತಿ ನಿಗದಿಪಡಿಸಬೇಕು.
ಜನರಿಗೆ ರಾಜಕೀಯ ಪಾಲ್ಗೊಳ್ಳುವಿಕೆ ಹಾಗೂ ನಾಯಕತ್ವ ಬೆಳೆಸಿಕೊಳ್ಳಲು ಪ್ರಮುಖ ವೇದಿಕೆಗಳಾಗಿವೆ. ಗ್ರಾಮಗಳ ಅಭಿವೃದ್ಧಿ, ಮೂಲಸೌಕರ್ಯ, ಕುಡಿಯುವ ನೀರು, ರಸ್ತೆ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳಂತಹ ವಿಚಾರಗಳಲ್ಲಿ ತಾಲೂಕು ಪಂಚಾಯಿತಿ ಮಹತ್ವದ ಪಾತ್ರ ವಹಿಸುತ್ತದೆ. ಇಂತಹ ಸಂಸ್ಥೆಯಲ್ಲಿ ವಿವಿಧ ಸಾಮಾಜಿಕ ವರ್ಗಗಳಿಗೆ ನ್ಯಾಯಯುತ ಪ್ರಾತಿನಿಧ್ಯ ದೊರೆಯಬೇಕೆಂಬುದು ಸಾರ್ವಜನಿಕರ ನಿರೀಕ್ಷೆಯಾಗಿದೆ.
ಈ ಹಿನ್ನೆಲೆಯಲ್ಲಿ, ಆಲೂರು ತಾಲೂಕು ಪಂಚಾಯಿತಿಯ ಒಂಬತ್ತು ಕ್ಷೇತ್ರಗಳಲ್ಲಿಯೂ ಹಿಂದುಳಿದ ವರ್ಗಗಳಿಗೆ
ಮೀಸಲು ಹಂಚಿಕೆಯಲ್ಲಿ ಬಿಸಿಎಂ -ಎ ವರ್ಗಕ್ಕೆ ಸೂಕ್ತ ಆದ್ರತೆ ನೀಡಿಲ್ಲ. ಹಿಂದುಳಿದ ವರ್ಗಗಳಿಗೆ ಸಮರ್ಪಕ ಪ್ರಾತಿನಿಧ್ಯ ಕಲಿಸುವ ನಿಟ್ಟಿನಲ್ಲಿ ಮೀಸಲಾತಿ ನಿಗದಿ ಆಗಬೇಕಿತ್ತು. ಆದರೆ, ಪ್ರಕಟಗೊಂಡಿರುವ ಮೀಸಲಾತಿ ಪಟ್ಟಿಯಲ್ಲಿ ಈ ವರ್ಗದವರಿಗೆ ಅನ್ಯಾಯವಾಗಿರುವುದು ಕಂಡು ಬರುತ್ತಿದೆ.
ಮೀಸಲಾತಿ ಕಲ್ಪಿಸದಿರುವುದು ಯಾವ ಮಾನದಂಡದ ಆಧಾರದ ಮೇಲೆ ಎಂಬ ಪ್ರಶ್ನೆ ಎದ್ದಿದೆ. ಮೀಸಲಾತಿ ನಿಗದಿಪಡಿಸುವಾಗ ಜನಸಂಖ್ಯೆ, ಅನ್ವಯಿಸುವ ಕಾನೂನು ನಿಯಮಗಳು ಮತ್ತು ಸಾಮಾಜಿಕ ನ್ಯಾಯದ ಅಂಶಗಳನ್ನು ಪಾರದರ್ಶಕವಾಗಿ ಪರಿಗಣಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಮೀಸಲಾತಿ ಹಂಚಿಕೆಯಲ್ಲಿ ಲೋಪವಾಗಿದ್ದರೆ ಅದನ್ನು ಸರಿಪಡಿಸಿ ಪರಿಷ್ಕೃತ ಪಟ್ಟಿ ಪ್ರಕಟಿಸಬೇಕು. ಇಲ್ಲದಿದರೆ ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಮುಖಂಡರು ನೀಡಿದ್ದಾರೆ.
ಅದಲ್ಲದೆ ಜಿಲ್ಲಾ ಪಂಚಾಯಿತಿ ಎರಡು ಕ್ಷೇತ್ರಗಳಲ್ಲಿ ಮಗ್ಗೆ ಜಿಲ್ಲಾ ಪ ಪಂಚಾಯಿತಿ ವ್ಯಾಪ್ತಿಗೆ ಕಳೆದ ಬಾರಿಯೂ ಕೂಡ ಸಾಮಾನ್ಯ ಮಹಿಳೆ ಬಂದಿತ್ತು ಈ ಬಾರಿಯೂ ಕೂಡ ಸಾಮಾನ್ಯ ಮಹಿಳೆ ಬಂದಿರುವುದು ಎಷ್ಟು ಸರಿ ಎಂದು ರಾಜಕೀಯ ಮುಖಂಡರಾದ ಕಣದಲ್ಲಿ
ಮಂಜೆ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅದಲ್ಲದೆ ಪಾಳ್ಯ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಒಂದು ಬಾರಿ ಕೂಡ ಸಾಮಾನ್ಯ ಕ್ಷೇತ್ರದ ಮಹಿಳೆ ಸಾಮಾನ್ಯ ಕ್ಷೇತ್ರದ ಪುರುಷ ಬರದೇ ಇರುವುದು ದುರ್ದೈವದ ವಿಚಾರವಾಗಿದೆ ಈ ವಿಚಾರವಾಗಿ ನಾವು ಮೇಲ್ಮನೆಗೆ ಅರ್ಜಿ ಸಲ್ಲಿಸುತ್ತೇವೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಮಾತನಾಡಿದಲ್ಲದೆ ತುಂಬಾ ಅವೈಜ್ಞಾನಿಕವಾಗಿದೆ ಎಂದು ಮಾತನಾಡಿದರು.
previous post
